ನಾಪೋಕ್ಲು, ನ. ೧೩: ಕೊಡಗಿನ ಪ್ರಮುಖ ಹಬ್ಬ ಪುತ್ತರಿ ನಮ್ಮೆ (ಹುತ್ತರಿ ಹಬ್ಬ) ಯನ್ನು ಡಿಸೆಂಬರ್ ೧೪ ರಂದು ಆಚರಿಸಲು ಕಕ್ಕಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ದಿನ ನಿಗದಿಪಡಿಸಲಾಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ತಕ್ಕಮುಖ್ಯಸ್ಥರು, ಊರಿನ ಗಣ್ಯರು ಸಂಪ್ರದಾಯದAತೆ ದೇವಾಲಯದ ಅಮ್ಮಂಗೇರಿ ಜ್ಯೋತಿಷ್ಯರಾದ ಶಶಿಕುಮಾರ್, ಕಣಿಯರ ನಾಣಯ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪುತ್ತರಿ (ಹುತ್ತರಿ) ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದರು.

ರೋಹಿಣಿ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಡಿಸೆಂಬರ್ ೧೪ ರಂದು ಶನಿವಾರ ರಾತ್ರಿ ೭.೩೦ ಗಂಟೆಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, ೮.೩೦ ಕ್ಕೆ ಕದಿರು ತೆಗೆಯುವುದು ಮತ್ತು ೯.೩೦ ಗಂಟೆಗೆ ಪ್ರಸಾದ ಭೋಜನ ಸ್ವೀಕಾರ ಮಾಡಲು ಶುಭ ಘಳಿಗೆಯಾಗಿರುವುದನ್ನು ನಿರ್ಧರಿಸಲಾಯಿತು.

ಸಂಪ್ರದಾಯದAತೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರಥಮವಾಗಿ ಪುತ್ತರಿ ಆಚರಣೆ ಬಳಿಕ ನಾಡಿನೆಲ್ಲೆಡೆ ಡಿ. ೧೪ ರ ರಾತ್ರಿ ೭.೫೦ ಕ್ಕೆ ನೆರೆ ಕಟ್ಟುವುದು, ೮.೫೦ಕ್ಕೆ ಕದಿರು ತೆಗೆಯುವುದು ಮತ್ತು ೯.೫೦ ಕ್ಕೆ ಪ್ರಸಾದ ಭೋಜನ ಸ್ವೀಕರಿಸುವ ಮೂಲಕ ಸಂಭ್ರಮದ ಹಬ್ಬವನ್ನು ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಪುತ್ತರಿಗೆ ಮುನ್ನಾ ದಿನವಾದ ಡಿಸೆಂಬರ್ ೧೩ ರಂದು ಶುಕ್ರವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕಲ್ಲಾಡ್ಚ ಹಬ್ಬವನ್ನು ಆಚರಿಸಲು ದಿನ ನಿಗದಿಪಡಿಸಲಾಯಿತು.

ಮುಹೂರ್ತ ನಿಗದಿಗೆ ಮುನ್ನ ಸಂಪ್ರದಾಯದAತೆ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಪಾಡಿ ದೇವಾಲಯಕ್ಕೆ ಸಂಬAಧಪಟ್ಟ ತಕ್ಕ ಮುಖ್ಯಸ್ಥರು,

(ಮೊದಲ ಪುಟದಿಂದ) ದೇವತಕ್ಕರಾದ ಪರದಂಡ ಕುಟುಂಬಸ್ಥರು “ಪಾಲ್ ಬೈವಾಡ್” ಸಮೇತ ಆಗಮಿಸಿದರು. ಅಮ್ಮಂಗೇರಿ ಕುಟುಂಬಸ್ತರ ಆಗಮನದೊಂದಿಗೆ ದೇವರ ನಡೆಯಲ್ಲಿ ದೇವತಕ್ಕರಾದ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಅವರು ಸರ್ವರನ್ನೂ ಇಗ್ಗುತಪ್ಪ ಹರಸುವಂತೆ ಪ್ರಾರ್ಥನೆ ಸಲ್ಲಿಸಿದರು. ಮುಹೂರ್ತ ನಿಗದಿ ಬಳಿಕ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಪರದಂಡ ಸುಬ್ರಮಣಿ ಅವರು ನಾಡಿನ ಜನತೆ ಗದ್ದೆಗಳನ್ನು ಪಾಳುಬಿಡದೆ ಕನಿಷ್ಟ ಮನೆ ಮಂದಿಯೆಲ್ಲಾ ಉಣ್ಣುವಷ್ಟಾದರೂ ಭತ್ತದ ಬೆಳೆಯನ್ನು ತಮ್ಮ ಭೂಮಿಗಳಲ್ಲಿ ಬೆಳೆಯುವಂತೆ ಮನವಿ ಮಾಡಿದರು. ಈ ಬಾರಿಯ ಪುತ್ತರಿ ನಮ್ಮೆ ಸಂದರ್ಭ ಹುಣ್ಣಿಮೆಯ ಮುಹೂರ್ತ ಡಿ. ೧೪ ರಂದು ಸಂಜೆ ೪.೫೯ ಕ್ಕೆ ಶುರುವಾಗಿ ಡಿ. ೧೫ ರ ಮಧ್ಯಾಹ್ನ ೨.೩೨ ಕ್ಕೆ ಸಮಾಪ್ತಿಗೊಳ್ಳುತ್ತದೆ. ಹುಣ್ಣಿಮೆಯ ಚಂದಿರನ ಆದಿಭಾಗದಲ್ಲಿಯೇ ಹಬ್ಬ ಬರುವುದರಿಂದ ಸರ್ವ ರೀತಿಯಲ್ಲ್ಲಿಯೂ ಶುಭಕರವೆಂದು ಕೂಡಿ ಬಂದಿದೆ. ಇದಕ್ಕೆ ಪೂರಕವಾಗಿ ವೃದ್ಧಿ-ಸಮೃದ್ಧಿ ಫಲವತ್ತತೆಯ ಸಂಕೇತವಾದ ರೋಹಿಣಿ ನಕ್ಷತ್ರವೂ ಕೂಡಿಬಂದಿದೆ. ಇದರಿಂದ ನಾಡಿಗೆ ಶುಭವಾಗುತ್ತದೆ ಎಂದು ತಿಳಿದುಬಂದಿದೆ ಎಂದರು. ಕೊಡಗಿನ ಜನ ತಮ್ಮ “ಐನ್ ಮನೆ” “ಆರ್ವಾಡ” ದಲ್ಲಿಯೇ ಪುತ್ತರಿ ಸಂಭ್ರಮಾಚರಣೆ ಮಾಡುವುದರಿಂದ ಕುಟುಂಬಗಳ ಐಕ್ಯತೆ, ಧನಲಕ್ಷಿö್ಮಯನ್ನು ಮನೆಗೆ ತುಂಬಿಸಿಕೊಳ್ಳ್ಳುವ ಕೊಡಗಿನ ಉತ್ಕೃಷ್ಟ ಪರಂಪರೆಗೆ ಅರ್ಥ ಬರುತ್ತದೆಂದೂ ಅಭಿಪ್ರಾಯಪಟ್ಟರು.

ಈ ಸಂದರ್ಭ ಮಾತನಾಡಿದ ಪಾಂಡAಡ ನರೇಶ್, ಕುಂಡಿಯೋಳAಡ ರಮೇಶ್ ಮುದ್ದಯ್ಯ, ಅಂಜಪರವAಡ ರವಿ ಸೋಮಯ್ಯ ಇವರುಗಳು ದೇವಾಲಯದ ಕಟ್ಟುಪಾಡುಗಳನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಸಮಸ್ತ ಭಕ್ತರು ಅನುಸರಿಸಿ ಸಹಕರಿಸುವಂತೆ ಮನವಿ ಮಾಡಿದರು. ಭಕ್ತರು ದೇಶಕಟ್ಟು ಅನ್ನು ತಪ್ಪದೆ ಪಾಲಿಸಬೇಕು. ಮಲ್ಮಬೆಟ್ಟದಲ್ಲಿ ಇಂದು ದೇಶಕಟ್ಟು ಹಾಕಲಾಗಿದ್ದು, ಈ ದಿನದಿಂದ ೧೫ ದಿನಗಳ ನಂತರ ನಡೆಯುವ ಕಲ್ಲಾಡ್ಚದ ದಿನ ಕಟ್ಟು ಸಡಿಲಿಸುವವರೆಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ದೇಶ ಕಟ್ಟನ್ನು ಪಾಲಿಸಿ ಆಡಂಬರದ ಸಭೆ ಸಮಾರಂಭ, ಮದುವೆ, ತಿಥಿ, ಪ್ರಾಣಿ ಹಿಂಸೆ ಇತ್ಯಾದಿಗಳಿಂದ ದೂರವಿದ್ದು ಸಂಪ್ರದಾಯದAತೆ ವಿಧಿ ವಿಧಾನಗಳನ್ನು ಪಾಲಿಸಬೇಕು ಎಂದರು. ಕೇಟೋಳಿರ ಕುಟ್ಟಪ್ಪ ಅವರು ತÀಮ್ಮ ಅನುಭವದ ನುಡಿಯಾಡಿದರು.

ಪ್ರಮುಖರುಗಳಾದ ಕಲ್ಯಾಟಂಡ ಮುತ್ತಪ್ಪ, ನಂಬುಡಮAಡ ಸುಬ್ರಮಣಿ, ಕೇಟೋಳಿರ ಕುಟ್ಟಪ್ಪ, ಕೇಟೋಳಿರ ಗಣಪತಿ, ಕುಟ್ಟಂಜೆಟ್ಟೀರ ಶ್ಯಾಂ ಬೋಪಣ್ಣ, ಕೇಲೇಟಿರ ರಂಜನ್ ಅಪ್ಪಚ್ಚು, ಬೊವ್ವೇರಿಯಂಡ ಪೂವಣ್ಣ, ಕೊಳುವಂಡ ಕಾರ್ಯಪ್ಪ, ಕೇಟೋಳಿರ ಅಪ್ಪಣ್ಣ, ಮಾರ್ಚಂಡ ರಮೇಶ್, ಕೇಟೋಳಿರ ಸನ್ನಿ ಸೋಮಣ್ಣ, ಪರದಂಡ ಸದಾ ನಾಣಯ್ಯ, ಕಲ್ಯಾಟಂಡ ರಾಜಾ ಅಪ್ಪಣ್ಣ, ಬಟ್ಟೀರ ಚೋಂದಮ್ಮ ಮೇದಪ್ಪ, ಕಂಬೆಯAಡ ಪೊನ್ನ, ಮೇರಿಯಂಡ ಅರಸು ಅಚ್ಚಮ್ಮ, ಮೇರಿಯಂಡ ಗಣೇಶ್, ಬಿದ್ದಾಟಂಡ ಬೇಬಿ ಇನ್ನಿತರರು ಉಪಸ್ಥಿತರಿದ್ದರು.

- ದುಗ್ಗಳ ಸದಾನಂದ