ಐಗೂರು, ನ. ೨೯: ಶಿಕ್ಷಣ ಕ್ಷೇತ್ರದಲ್ಲಿ ಶಾಲೆಗಳಿಗೆ ಸಹಾಯ ಹಸ್ತ ನೀಡುತ್ತಿರುವ ಮೈಸೂರಿನ ಅಭ್ಯುದಯ ಸಂಸ್ಥೆಯ ವತಿಯಿಂದ ಡಿ. ೮ ರಂದು ಮೈಸೂರಿನಲ್ಲಿ ಶಾಲಾ ಮಕ್ಕಳಿಗಾಗಿ ಆರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ, ಭಗವದ್ಗೀತೆ, ಏಕಾತ್ಮಕ ಸ್ತೋತ್ರ ಮತ್ತು ಜಾನಪದ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭ್ಯುದಯ ಸಂಸ್ಥೆಯವರು ನಡೆಸುತ್ತಿರುವ ಉಚಿತ ಕಲಿಕಾ ಕೇಂದ್ರಗಳಾದ ಬಜೆಗುಂಡಿ, ಕಾಜೂರು ಮತ್ತು ಹೊಸತೋಟ ಕಲಿಕಾ ಕೇಂದ್ರಗಳ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹೆಸರು ನೋಂದಾಯಿಸುವ ಬಗ್ಗೆ ಪೂರ್ವಭಾವಿ ಸಭೆ ಕಾಜೂರು ಶಾಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮೈಸೂರಿನ ಅಭ್ಯುದಯ ಸಂಸ್ಥೆಯ ಮುಖ್ಯಸ್ಥರಾದ ಅಭಿರಾಮ್, ಸುಧಾ ಅಭಿರಾಮ್, ಕಾಜೂರು ಶಾಲೆಯ ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕ ಅಜಿತ್ ಕುಮಾರ್, ಕಲಿಕಾ ಕೇಂದ್ರಗಳ ಶಿಕ್ಷಕಿಯರಾದ ಲಾವಣ್ಯ, ಭಾಗ್ಯಲಕ್ಷಿö್ಮ ಮತ್ತು ಶಾಕಿರಾ ಭಾಗವಹಿಸಿದ್ದರು.