“ರಾಜ್ಯದ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಮತ್ತು ಪರಿಭಾವಿತ ಅರಣ್ಯದ ಪುನರ್ಪರಿಶೀಲನೆಗಾಗಿ ೧೫ ದಿನಗಳಲ್ಲಿ ತಜ್ಞರ ಸಮಿತಿ ರಚಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಂಟಿ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ೨೦೨೪ರ ಅಕ್ಟೋಬರ್ ೨೫ ಮತ್ತು ೨೬ರÀ ಪತ್ರಿಕೆಗಳು ವರದಿ ಮಾಡಿವೆ.

ರಾಜ್ಯದ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಅಧ್ಯಯನ ಸರಿ, ಆದರೆ ಪರಿಭಾವಿತ ಅರಣ್ಯದ ಅಧ್ಯಯನ ಎನ್ನುವುದು ಸರಿಯಲ್ಲ.

ಪರಿಭಾವಿತ ಅರಣ್ಯ(ಡೀಮ್ಡ್ ಫಾರೆಸ್ಟ್)ದ ವಿಚಾರವೇ ನಿಯಮಬಾಹಿರ ಎಂದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯ ತೀರ್ಪು ಕೊಟ್ಟು ಪುನರುಚ್ಛರಿಸಿದ ನಂತರವೂ ಈ ವಿಚಾರದೊಂದಿಗೆ ರಾಜ್ಯ ಸರಕಾರ ಮುಂದುವರಿಯುತ್ತಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗುತ್ತದೆ.

ರಾಜ್ಯ ಸರಕಾರವು ನ್ಯಾಯಾಲಯದ ತೀರ್ಪನ್ನು ಕಡೆಗಣಿಸುತ್ತಿದೆ ಅಥವಾ ಉಲ್ಲಂಘಿಸುತ್ತಿದೆ. ಸರಕಾರದ ಈ ವರ್ತನೆಯೇ ಸಿಎಂಡ್ ಡಿ ವಿಭಾಗದ ಜಮೀನಿನಲ್ಲಿರುವ ಜನರು ಇಂದು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಏಕೈಕ ಕಾರಣವಾಗಿದೆ.

ಧನಂಜಯ ಮತ್ತು ಕರ್ನಾಟಕ ರಾಜ್ಯ ಸರಕಾರ ಮತ್ತಿತರರ ನಡುವಿನ ಮೊಕದ್ದಮೆಯಲ್ಲಿ ೨೦೧೯ರ ಜೂನ್ ೧೨ರಂದು ಕೊಟ್ಟ ತೀರ್ಪಿನಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ. ಆ ತೀರ್ಪಿನಲ್ಲಿ ನ್ಯಾಯಾಲಯ-

P೧೯ “We mಚಿಞe iಣ ಛಿಟeಚಿಡಿ ಣhಚಿಣ ಚಿs ಣhe ಛಿoಟಿಛಿeಠಿಣ oಜಿ ‘ಜeemeಜ ಜಿoಡಿesಣs’ ಚಿಠಿಠಿeಚಿಡಿs ಣo be ಚಿ ಜಿoಡಿeigಟಿ ಣo ಣhe ಟಚಿತಿ, ಣhe ಚಿಠಿಠಿಟiಛಿಚಿಣioಟಿs ಛಿಚಿಟಿಟಿoಣ be ಡಿeರಿeಛಿಣeಜ oಟಿಟಥಿ oಟಿ ಣhe gಡಿouಟಿಜ ಣhಚಿಣ ಣhe ಟಚಿಟಿಜs subರಿeಛಿಣ mಚಿಣಣeಡಿ ಚಿಡಿe ‘ಜeemeಜ ಜಿoಡಿesಣs’ ಎಂದು ಹೇಳಿದೆ.

ಈ ತೀರ್ಪಿನಲ್ಲಿ ನ್ಯಾಯಾಲಯವು“ ಪರಿಭಾವಿತ ಅರಣ್ಯದ ವಿಚಾರವು ಕೇವಲ ಅಧಿಕಾರಿಗಳ ಕಲ್ಪನೆ ಎಂದೂ ಅದಕ್ಕೆ ನಿಯಮದ ಬಲವಿಲ್ಲವೆಂದೂ” ಅಸಂಧಿಗ್ಧವಾಗಿ ಹೇಳಿತು. ಅರಣ್ಯ ಸಂರಕ್ಷಣಾ ಕಾಯಿದೆ -೧೯೮೦ರಲ್ಲಿ ‘ಡೀಮ್ಡ್ ಫಾರೆಸ್ಟ್’ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಸರಕಾರದ ‘ಡೀಮ್ಡ್ ಫಾರೆಸ್ಟ್’ ವ್ಯಾಖ್ಯಾನವನ್ನು ಒಪ್ಪಲಾಗದು” ಎಂದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯ ೨೦೨೨ರಲ್ಲಿ ಪುನರುಚ್ಛರಿಸಿತು.

“ ಈ ಹಿಂದೆ ೨೦೧೯ರ ಜೂನ್ ೧೨ರಂದು ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಹೈಕೋರ್ಟ್ನ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ ಮತ್ತೆ ಈ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ. ಹಿಂದಿನ ಆದೇಶದಂತೆ ‘ಅರಣ್ಯ’ ಮತ್ತು ‘ಅರಣ್ಯ ಭೂಮಿ’ ಎಂಬುದು ಕಾಯಿದೆಯಲ್ಲಿ ಉಲ್ಲೇಖವಿದೆ. ಆದರೆ ‘ಡೀಮ್ಡ್ ಅರಣ್ಯ’ ಎಂಬ ಉಲ್ಲೇಖ ಕಾಯಿದೆಯಲ್ಲಿ ಎಲ್ಲೂ ಇಲ್ಲ. ಕಾಯಿದೆ ಮತ್ತು ನಿಯಮಗಳಲ್ಲಿ ಇಲ್ಲದೆ ಅದನ್ನು ಮಾನ್ಯ ಮಾಡಲಾಗದು” ಎಂದು ವಿಭಾಗೀಯ ಪೀಠ ಮತ್ತೆ ಹೇಳಿತು.

ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ. ದೇವೇಗೌಡ ಸಲ್ಲಿಸಿದ್ದ ಅರ್ಜಿಯ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ೨೦೨೨ರ ಜೂನ್ ೨೧ ರಂದು ಈ ಆದೇಶ ನೀಡಿದ್ದಾಗಿದೆ.

“ಅರ್ಜಿದಾರರ ಪರ ವಕೀಲರು ಮತ್ತು ಹೆಚ್ಚುವರಿ ಸರಕಾರೀ ವಕೀಲರು ಇಬ್ಬರೂ ಸಹಾ ಧನಂಜಯ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ನೀಡಿರುವ ತೀರ್ಪಿಗೆ ಈ ಪ್ರಕರಣ ಒಳಪಡುತ್ತದೆಂದು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅರ್ಜಿಯನ್ನು ಪುರಸ್ಕರಿಸುತ್ತಿದ್ದೇವೆ ಹಾಗೂ ಧನಂಜಯ ಪ್ರಕರಣದಲ್ಲಿ ವಿಭಾಗೀಯ ಪೀಠ ನೀಡಿರುವ ತೀರ್ಪು ಪಾಲನೆ ಮಾಡಬೇಕೆಂದು ಆದೇಶ ನೀಡುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ. ೨೦೨೨ ರ ಜೂನ್ ೨೧ ರಂದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಡಿ.ಎಮ್. ದೇವೇಗೌಡ ಗಿ/s ಕರ್ನಾಟಕ ಸರಕಾರ ಮೊಕದ್ದಮೆಯಲ್ಲಿ ಕೊಟ್ಟ ತೀರ್ಪಿನಲ್ಲಿ ಹೇಳಿದ ಮಾತುಗಳು-

P೩-“೪. ಖಿhis ಅouಡಿಣ,viಜe ರಿuಜgemeಟಿಣ ಚಿಟಿಜ oಡಿಜeಡಿ ಜಚಿಣeಜ ೧೨-೬-೨೦೧೯ ಠಿಚಿsseಜ iಟಿ W.P. ಓo. ೫೪೪೭೬/೨೦೧೬ (ಉಒ-ಒಒ-S) ಅ/ತಿ ತಿ.P. ಓo. ೫೧೧೩೫/೨೦೧೬ ( ಆhಚಿಟಿಚಿಟಿರಿಥಿಗಿs Sಣಚಿಣe oಜಿ ಏಚಿಡಿಟಿಚಿಣಚಿಞಚಿ ಚಿಟಿಜ oಣheಡಿs) hಚಿs ಛಿಚಿಣegoಡಿiಛಿಚಿಟಟಥಿ heಟಜ ಣhಚಿಣ ಣheಡಿe is ಟಿo ಛಿoಟಿಛಿeಠಿಣ oಜಿ “ಜeemeಜ ಈoಡಿesಣ” ಖಿhe ಅouಡಿಣ ತಿಚಿs oಜಿ ಣhe vieತಿ ಣhe ಟಚಿಟಿಜ ಛಿಚಿಟಿ eiಣheಡಿ be ಚಿ ‘ಜಿoಡಿesಣ’ oಡಿ ಚಿ ‘ಜಿoಡಿesಣ ಟಚಿಟಿಜ’ buಣ ಣheಡಿe ಛಿಚಿಟಿ ಟಿoಣ be ಚಿಟಿಥಿ‘ಜeemeಜ ಜಿoಡಿesಣ” iಟಿ ಣhe ಚಿbseಟಿಛಿe oಜಿ ಚಿಟಿಥಿ ಠಿಡಿovisioಟಿ iಟಿ ಣhe ಚಿಛಿಣ.

ಹೀಗೆ ೨೦೧೯ ರಲ್ಲಿಯೇ ನಮ್ಮ ರಾಜ್ಯದ ಉಚ್ಛ ನ್ಯಾಯಾಲಯ ಪರಿಭಾವಿತ ಅರಣ್ಯದ ಬಗ್ಗೆ ತೀರ್ಪು ಕೊಟ್ಟಿದ್ದು ಮತ್ತೆ ೨೦೨೨ರಲ್ಲಿ ಮತ್ತೆ ತನ್ನ ತೀರ್ಪನ್ನು ಪುನರುಚ್ಛರಿಸಿದ್ದರೂ ರಾಜ್ಯ ಸರಕಾರ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ವಿಚಾರದೊಂದಿಗೆ ಮುಂದುವರಿಯುತ್ತಿರುವುದು ಖಂಡನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಒತ್ತಾಯ-

೧)ಉಚ್ಛ ನ್ಯಾಯಾಲಯದ ಮೇಲುದ್ಧರಿಸಿದ ತೀರ್ಪಿನ ಆಧಾರದಲ್ಲಿ ಡೀಮ್ಡ್ ಫಾರೆಸ್ಟ್ ವಿಚಾರವನ್ನು ರಾಜ್ಯ ಸರಕಾರ ಕೈ ಬಿಡಬೇಕು ಮತ್ತು ಈ ಬಗ್ಗೆ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ಕೊಡಬೇಕು.

೨)‘ಪರಿಭಾವಿತ ಅರಣ್ಯ’ (ಡೀಮ್ಡ್ ಫಾರೆಸ್ಟ್) ವಿಚಾರವನ್ನು ಕೈ ಬಿಟ್ಟಾಗ ಅದರ ಹೆಸರಿನಲ್ಲಿ “ಅರಣ್ಯ”ವೆಂದು ಕರೆಯಲ್ಪಡುವ ಸಿ ಮತ್ತು ಡಿ ಭೂಮಿ, ಪೈಸಾರಿ ಮೊದಲಾದ ವಿಭಾಗದ ಭೂಮಿಗಳು “ಅರಣ್ಯ” ಪಟ್ಟಿಯಿಂದ ಸ್ವತಂತ್ರವಾಗುತ್ತವೆ. ಅವುಗಳಲ್ಲಿ ವಾಸಿಸುತ್ತಿರುವ ಜನರ ಒಡೆತನದ ಹಕ್ಕಿನ ಪ್ರಶ್ನೆಯನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯ. ಇಲ್ಲಿ ವಾಸಿಸುತ್ತಿರುವವರಲ್ಲಿ, ಕೃಷಿ ಮಾಡಿಕೊಡು ಜೀವಿಸುತ್ತಿರುವವರಲ್ಲಿ ಆರ್ಥಿಕವಾಗಿ ದುರ್ಬಲರ ವಶದಲ್ಲಿರುವ ಭೂಮಿಯ ಒಡೆತನವನ್ನು ಅವರಿಗೆ ಕೊಡಬೇಕು; ಆಗರ್ಭ ಶ್ರೀಮಂತರು ಕಬಳಿಸಿರುವ ಭೂಮಿಯನ್ನು ಅವರಿಂದ ಕಿತ್ತುಕೊಳ್ಳಬೇಕು. ಸಿ ಮತ್ತು ಡಿ ವಿಭಾಗದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಲ್ಲಿ ಶ್ರೀಮಂತರು ಹೆಚ್ಚಿದ್ದಾರೆನ್ನುವುದನ್ನು ಹೇಳುತ್ತಾ ಪರಿಸರವಾದಿಯೊಬ್ಬರು ಹೇಳಿರುವ ಮಾತು ಗಮನಾರ್ಹವಾಗಿದೆ.

ಅವರು “ಖಿheಡಿe ತಿಚಿs ಚಿ ಛಿಚಿse oಜಿ ೨೦೦ ಠಿeoಠಿಟe susಣಚಿiಟಿiಟಿg ಣhemseಟves oಟಿ ೪೦೦ ಚಿಛಿಡಿes oಜಿ ಟಚಿಟಿಜ iಟಿ ಚಿ sತಿಚಿಣhe oಜಿ ಚಿbouಣ ೧೦೦೦ ಚಿಛಿಡಿes oಜಿ ಜeemeಜ ಜಿoಡಿesಣ iಟಿ Souಣh ಏಚಿಡಿಟಿಚಿಣಚಿಞಚಿ ಡಿegioಟಿ. ಃuಣ ಣhe ಡಿemಚಿiಟಿiಟಿg ೬೦೦ಚಿಛಿಡಿes ತಿಚಿs eಟಿಛಿಡಿoಚಿಛಿheಜ bಥಿ ೧೫ ಠಿeoಠಿಟe ಚಿಟಿಜ ಣhe seಛಿoಟಿಜ ಟoಣ ತಿಚಿs ಟಿoಣ ಜeಠಿeಟಿಜeಟಿಣ oಟಿ iಣ ಜಿoಡಿ suಡಿvivಚಿಟ” (ಖಿhe ಊiಟಿಜu. ಂಠಿಡಿiಟ ೨೯ ,೨೦೨೨) ಎಂದು ಹೇಳಿದ್ದಾರೆ. ಅರಣ್ಯದ ವ್ಯಾಪ್ತಿಯಲ್ಲಿ ಇರಬಹುದಾದ ಕೊರತೆಯನ್ನು ನೀಗಿಸಲು ಈ ಕಿತ್ತುಕೊಂಡ ಭೂಮಿಯನ್ನು ಬಳಸಬೇಕು.

೩) “ಸ್ವಾತಂತ್ರö್ಯಕ್ಕೆ ಪೂರ್ವದಲ್ಲಿ ೭೫೦೦ ಎಕರೆ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಲೀಸ್‌ಗೆ ಕೊಡಲಾಗಿತ್ತು. ಇವುಗಳಲ್ಲಿ ಕಾಫಿ, ರಬ್ಬರ್, ಚಹಾ ತೋಟಗಳನ್ನು ಬೆಳೆಸಿದ್ದಾರೆ. ಲೀಸ್ ಅವಧಿ ಮಗಿದಿದೆ ಎಂದು ಅವರಿಗೆ ನಮ್ಮ ಅಧಿಕಾರಿಗಳು ನೋಟಿಸು ಕೊಟ್ಟಾಗ ಅವರು ಕೆಲವರು ನ್ಯಾಯಾಲಯವನ್ನು ಪ್ರವೇಶಿಸಿದರು. ತಮಗೆ ೯೯೯ ವರ್ಷಗಳಿಗೆ ಲೀಸಿಗೆ ಕೊಟ್ಟದ್ದೆಂದು ಅವರು ವಾದ ಮಂಡಿಸಿದರು. ನಾವು ಆ ವಾದವನ್ನು ಅಲ್ಲಗಳೆದೆವು. ಲೀಸ್ ಅವಧಿ ೯೯ ವರ್ಷವೆಂದು ನ್ಯಾಯಾಲಯವೂ ಒಪ್ಪಿಕೊಂಡಿದೆ. ಹೀಗೆ ಲೀಸ್ ಕೊಟ್ಟ ಪ್ರದೇಶ ೭೫೦೦ ಎಕರೆ ಇದ್ದು ಅವನ್ನು ಹಿಂದಕ್ಕೆ ಪಡೆಯಬೇಕಿದೆ. ಇವನ್ನು ಹಿಂದಕ್ಕೆ ಪಡೆದರೆ ನಮ್ಮ ಅರಣ್ಯದ ವ್ಯಾಪ್ತಿ ಹೆಚ್ಚುತ್ತದೆ” ಎಂದು ರಾಜ್ಯದಲ್ಲಿ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಿ ಈಶ್ವರ ಬಿ. ಖಂಡ್ರೆಯವರು ೨೦೨೪ರ ಫೆಬ್ರುವರಿ ೧೦ ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು. ಹಿಂಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಿರುವುದಾಗಿಯೂ ಅವರು ಹೇಳಿದ್ದರು. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು.

೫)ಅರಣ್ಯ ಬೆಳೆಸಲು ಬೇಕಾದ ಭೂಮಿಗಾಗಿ ಕೊಡಗಿನಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲು ಕೊಡಗಿನಲ್ಲಿ ಪೈಸಾರಿ ಜಾಗಗಳ ಸಮಗ್ರ ಸರ್ವೆ ನಡೆಸಬೇಕು. ಒತ್ತುವರಿದಾರರ ಪಟ್ಟಿಯನ್ನು ಜಿಲ್ಲಾಡಳಿತ ತಯಾರಿಸಿಲ್ಲವಾದರೆ ಮೊದಲು ಅದನ್ನು ತಯಾರಿಸಬೇಕು.

ಅ)ಕೊಡಗಿನಲ್ಲಿ ಅತ್ಯಂತ ದೊಡ್ಡ ಭೂ ಹಿಡುವಳಿದಾರ ಪ್ರತಿಷ್ಠಿತ ಸಂಸ್ಥೆಯೊAದಿದೆ. ಒಂದು ಅಂದಾಜಿನAತೆ ಅವರಿಗೆ ೯೪ ಡಿವಿಶನ್‌ಗಳ ಒಡೆತನವಿದ್ದು ಸುಮಾರು ೪೫ ಸಾವಿರ ಎಕರೆ ತೋಟದ ಒಡೆತನವಿದೆ. ಅವರು ನಮ್ಮ ದೇಶದ ಏಕಸ್ವಾಮ್ಯ ಬಂಡವಳಿಗರಲ್ಲಿ ಒಬ್ಬರಿದ್ದು ಅಂರ‍್ರಾಷ್ಟಿçÃಯ ಮಟ್ಟದ ಬಹುರಾಷ್ಟಿçÃಯ ಬಂಡವಳಿಗನಾಗಲು ಯತ್ನಿಸುತ್ತಿದ್ದಾರೆ. ಇವರು ಕಬಳಿಸಿರಬಹುದಾದ ಪೈಸಾರಿ ಭೂಮಿಯನ್ನು ಕಂಡುಹಿಡಿದು ಅದನ್ನು ಸರಕಾರ ವಶಕ್ಕೆ ತೆಗೆದುಕೊಳ್ಳಬೇಕು.

ಆ) ಸುಮಾರು ೨೫೦೦ ಎಕರೆಯಷ್ಟು ಮತ್ತೊಂದು ಸಂಸ್ಥೆ ತನ್ನ ತೋಟವನ್ನು ಮಾರಿದೆ. ಅಲ್ಲಿನ ಮರಗಳನ್ನು ಕಡಿದು ಮನೆಗೆ ಸೈಟ್‌ಗಳನ್ನಾಗಿ ಮಾಡಲು ಹೊರಟಿರುವುದನ್ನು ತಡೆಯಬೇಕು. ಆ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಬೇಕು.

೬)ಕೊಡಗಿನ ಕೆಲವು ಪ್ರಭಾವೀ ರಾಜಕಾರಿಣಿಗಳು ತಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ತಮಗೆ ಸಿಕ್ಕ ಸ್ಥಾನವನ್ನುಪಯೋಗಿಸಿಕೊಂಡು ಸರಕಾರೀ ಭೂಮಿಯನ್ನು ಲಪಟಾಯಿಸಿದ್ದಾರೆ.

೭) ರಾಷ್ಟç ಮಟ್ಟದ, ರಾಜ್ಯ ಮಟ್ಟದ ರಾಜಕಾರಿಣಿಗಳು ಅನೇಕರು ಕೊಡಗಿನಲ್ಲಿ ಭೂಮಿ ಖರೀದಿಸಿದಾಗ ಪೈಸಾರಿ ಜಾಗವನ್ನು ಲಪಟಾಯಿಸಿರುತ್ತಾರೆ. ಅದನ್ನು ಕಂಡುಹಿಡಿಯಬೇಕು.

೮)ಕೊಡಗಿನ ಹೊರಗೆ ಆಗರ್ಭ ಶ್ರೀಮಂತರಾಗಿರುವವರು ಅನೇಕರು ಮೋಜಿಗಾಗಿ ಕೊಡಗಿನಲ್ಲಿ ತೋಟ ಖರೀದಿಸಿದವರಿದ್ದಾರೆ. ಅಂತಹವರು ಅನೇಕರು ಪಕ್ಕದಲ್ಲಿದ್ದ ಪೈಸಾರಿ ಜಾಗವನ್ನು ಕಬಳಿಸಿರುತ್ತಾರೆ. ಸರಕಾರ ಈ ತಿಮಿಂಗಿಲಗಳ ಮೇಲೆ ಕ್ರಮ ಜರುಗಿಸಬೇಕು.

೯) ಸರಕಾರ ಈಗ ಬೆಳೆಗಾರರ ವಶದಲ್ಲಿರುವ ಜಾಗವನ್ನು ಅವರಿಗೆ ಗುತ್ತಿಗೆಗೆ ಕೊಡಲು ತೀರ್ಮಾನಿಸಿದೆ.

ಸಣ್ಣ ಬೆಳೆಗಾರರು ವಶಪಡಿಸಿಕೊಂಡಿರುವುದರಲ್ಲಿ ೫ ಎಕರೆಯನ್ನು ಅವರಿಗೇ ಕೊಡಬೇಕು.

ಈ ಮೇಲೆ ಹೇಳಿದ ತಿಮಿಂಗಿಲಗಳಿAದ ಹಿಂದೆ ಪಡೆದ ಭೂಮಿಯನ್ನು ನಿವೃತ್ತ ಸೈನಿಕರಿಗೆ, ಭೂರಹಿತ ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಯವರಿಗೆ; ತೋಟ ಕಾರ್ಮಿಕರು, ಮೊದಲಾಗಿ ಭೂರಹಿತರೆಲ್ಲರಿಗೆ ಹಂಚಬೇಕು. ಅಗತ್ಯವಿರುವ ಅರಣ್ಯ ಬೆಳೆಸಲೂ ಈ ಜಾಗಗಳನ್ನು ಬಳಸಬೇಕು.

- ಡಾ. ಇ.ರಾ. ದುರ್ಗಾಪ್ರಸಾದ್, ಜಿಲ್ಲಾ ಸಮಿತಿ ಸದಸ್ಯರು, ಕರ್ನಾಟಕ ಕಾಫಿ ರೈತರ ಸಂಘ, ಕೊಡಗು ಘಟಕ