ಮಡಿಕೇರಿ, ನ. ೨೯: ನಗರದ ರಾಜಕಾಲುವೆ ಒತ್ತುವರಿ ಆರೋಪದ ಹಿನ್ನೆಲೆ ಅಧಿಕಾರಿಗಳಿಂದ ಸರ್ವೆ ಕಾರ್ಯ ಆರಂಭಗೊAಡಿದೆ. ೨ ದಿನಗಳಿಂದ ವಿವಿಧ ಇಲಾಖೆಗಳು ಜಂಟಿಯಾಗಿ ಈ ಕಾರ್ಯ ಕೈಗೆತ್ತಿಕೊಂಡಿದೆ. ನಗರದ ಹಲವೆಡೆ ಹರಿಯುವ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಸೇವ್ ಕಾವೇರಿ ಸಂಸ್ಥೆ ದೂರು ನೀಡಿತ್ತು. ಅದರನ್ವಯ ಸರ್ವೆ ಪ್ರಕ್ರಿಯೆ ಆರಂಭಿಸಲಾಗಿದೆ. ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಅವರ ಸೂಚನೆ ಮೇರೆ ನಗರಸಭೆ ಕಂದಾಯ ಇಲಾಖೆ, ಭೂದಾಖಲೆಗಳ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯವನ್ನು ಆರಂಭಿಸಿದೆ.