ಮಡಿಕೇರಿ, ನ. ೨೯: ಅಮ್ಮತ್ತಿ ಕೊಡವ ಸಮಾಜದಲ್ಲಿ ತಾ. ೨೬ ರಂದು ನಡೆದ ಸಭೆಯಲ್ಲಿ ಸಮಾಜದ ವತಿಯಿಂದ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಕೂಟದ ಅಧ್ಯಕ್ಷೆಯಾಗಿ ಚಂಬಾAಡ ರೇಷ್ಮಾ ಭೀಮಯ್ಯ, ಉಪಾಧ್ಯಕ್ಷೆಯಾಗಿ ಮೊಳ್ಳೆರ ಜಾನ್ಸಿ ಅಪ್ಪಚ್ಚು, ಕಾರ್ಯದರ್ಶಿಯಾಗಿ ಕುಟ್ಟಂಡ ರೇಖಾ ಜಗನ್, ಖಜಾಂಚಿಯಾಗಿ ಪುಚ್ಚಂಡ ಪಾರ್ವತಿ ಅಪ್ಪಚ್ಚು ಅವರುಗಳು ನೇಮಕಗೊಂಡರು. ನಿರ್ದೇಶಕರುಗಳಾಗಿ ಕೇಚಂಡ ಅನಿತಾ ಕುಶಾಲಪ್ಪ, ನೆರಪಂಡ ಜಯಲಕ್ಷಿö್ಮ, ನೆಲ್ಲಮಕ್ಕಡ ಆಶಾ ಬೆಳ್ಳಿಯಪ್ಪ, ಮೂಕೋಂಡ ವೀಣಾ ದೇವಯ್ಯ ಹಾಗೂ ಐನಂಡ ಇಂದಿರಾ ಅಯ್ಯಪ್ಪ ಅವರುಗಳು ಮುಂದಿನ ೩ ವರ್ಷಗಳ ಅವಧಿಗೆ ಆಯ್ಕೆಗೊಂಡರು.

ಸಭೆಯಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಉಪಾಧ್ಯಕ್ಷ ಕುಟ್ಟಂಡ ಚಿಣ್ಣಪ್ಪ, ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ, ಖಜಾಂಚಿ ಮಾಚಿಮಂಡ ಜಯಾ ಉತ್ತಪ್ಪ ಹಾಗೂ ನಿರ್ದೇಶಕರುಗಳಾದ ನೆಲ್ಲಚಂಡ ಭೀಮಯ್ಯ, ಮಚ್ಚಾರಂಡ ಅಚ್ಚಯ್ಯ, ಪೂದ್ರಮಾಡ ನೀಲ್ ಗಣಪತಿ, ಮನೆಯಪಂಡ ಧನ್ಯ ದೇವಯ್ಯ ಹಾಗೂ ಚೋವಂಡ ಪ್ರಭು ಹಾಜರಿದ್ದರು. ಸಮಾಜದ ನಿರ್ದೇಶಕಿ ಕೋಡಿಮಣಿಯಂಡ ಅಶ್ವಿನಿ ಗಣಪತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಕುಟ್ಟಂಡ ರೀಟಾ ಚಿಣ್ಣಪ್ಪ ಪ್ರಾರ್ಥಿಸಿದರು.