ವೀರಾಜಪೇಟೆ, ನ. ೨೯: ಕೊಡವ ಸಮಾಜದ ಒಕ್ಕೂಟದಿಂದ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಅಮ್ಮತ್ತಿ, ಮೂರ್ನಾಡು, ಮಡಿಕೇರಿ ಕೊಡವ ಸಮಾಜಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಮೊದಲ ಪಂದ್ಯದಲ್ಲಿ ವೀರಾಜಪೇಟೆ ಕೊಡವ ಸಮಾಜ ತಂಡವು ೨-೦ ಗೋಲುಗಳಿಂದ ಮರೆನಾಡ್ ಕೊಡವ ಸಮಾಜ ತಂಡವನ್ನು ಪರಾಭವಗೊಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ವೀರಾಜಪೇಟೆ ತಂಡದ ಪರ ಐಚೆಟ್ಟಿರ ವೇದ್ ಗೋಲು ದಾಖಲಿಸಿದರು.

ಅಮ್ಮತ್ತಿ ಕೊಡವ ಸಮಾಜ ತಂಡವು ೪-೦ ಗೋಲುಗಳಿಂದ ಹುದಿಕೇರಿ ಕೊಡವ ಸಮಾಜ ತಂಡವನ್ನು ನಿರಾಯಾಸವಾಗಿ ಮಣಿಸಿತು. ಅಮ್ಮತ್ತಿ ತಂಡದ ಪರ ಐನಂಡ ಆಕಾಶ್, ನೆಲ್ಲಮಕ್ಕಡ ಮ್ಯಾಕ್ ತಲಾ ಒಂದು ಗೋಲು ಬಾರಿಸಿದರು.

ಮಡಿಕೇರಿ ಕೊಡವ ಸಮಾಜ ತಂಡವು ೫-೪ ಗೋಲುಗಳಿಂದ ಕುಟ್ಟ ಕೊಡವ ಸಮಾಜ ತಂಡವನ್ನು ಪೆನಾಲ್ಟಿ ಸ್ಟೊçÃಕ್‌ನಲ್ಲಿ ಪರಾಭವಗೊಳಿಸಿದರು. ನಿಗದಿತ ಸಮಯದಲ್ಲಿ ಎರಡು ತಂಡಗಳು ೧-೧ ಗೋಲಿನಿಂದ ಸಮಬಲ ಸಾಧಿಸಿದವು. ಮಡಿಕೇರಿ ತಂಡದ ಪರ ಕನ್ನಂಡ ಹ್ಯಾಲನ್, ಪೆನಾಲ್ಟಿ ಸ್ಟೊçÃಕ್‌ನಲ್ಲಿ ಕುಂಚೇಟಿರ ಅಯ್ಯಪ್ಪ, ಹ್ಯಾಲನ್, ನಿಹಾಲ್, ಸುಬ್ಬಯ್ಯ ಗೋಲು ದಾಖಲಿಸಿದರು. ಕುಟ್ಟ ತಂಡದ ಪರ ಆದೇಂಗಡ ಚಿಣ್ಣಪ್ಪ, ಬೋಪಣ್ಣ, ಚೆಪ್ಪುಡಿರ ಚೇತನ್, ಮುತ್ತಣ್ಣ ಗೋಲು ದಾಖಲಿಸಿದರು.

ಮೂರ್ನಾಡು ಕೊಡವ ಸಮಾಜ ತಂಡವು ೩-೨ ಗೋಲುಗಳಿಂದ ವೀರಾಜಪೇಟೆ ಕೊಡವ ಸಮಾಜ ತಂಡವನ್ನು ಸೋಲಿಸಿತು. ಮೂರ್ನಾಡು ತಂಡದ ಪರ ಪುದಿಯೊಕ್ಕಡ ಮಿಥನ್, ನೆರವಂಡ ದೇವಯ್ಯ, ಅವರೆಮಾದಂಡ ನಿಕಿಲ್, ವೀರಾಜಪೇಟೆ ತಂಡದ ಪರ ಐನಂಡ ನಾಚಪ್ಪ, ಕುಂಬೇರ ಅದ್ವಿತ್ ನಾಚಪ್ಪ ಗೋಲು ದಾಖಲಿಸಿದರು.

ಪಂದ್ಯಾಟದ ತೀರ್ಪುಗಾರರಾಗಿ ಅಂತರರಾಷ್ಟಿçÃಯ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಮೈದಂಪAಡ ಡ್ಯಾನಿ, ಬಲ್ಲಚಂಡ ನಾಣಯ್ಯ, ಅರೆಯಡ ಚಿಣ್ಣಪ್ಪ, ಚೆಕ್ಕೆರ ಆದರ್ಶ್, ನೆಲ್ಲಮಕ್ಕಡ ಪವನ್, ಕನ್ನಂಬಿರ ಚಿಣ್ಣಪ್ಪ, ತಾಂತ್ರಿಕ ನಿರ್ದೆಶಕರಾಗಿ ಮಾದೆಯಂಡ ಸಂಪಿ ಪೂಣಚ್ಚ ಕಾರ್ಯ ನಿರ್ವಹಿಸಿದರು.