ಶನಿವಾರಸಂತೆ, ನ.೨೯: ಉತ್ತರ ಪ್ರದೇಶದ ವಿಷನ್ ಸ್ಟಿçಂಗ್ ಸಂಸ್ಥೆ ಹಾಗೂ ಸಮೀಪದ ಕೂಜಗೇರಿ ಗ್ರಾಮದ ದಿವಂಗತ ಹೊನ್ನಮ್ಮ-ತಮ್ಮೇಗೌಡ ದಂಪತಿಯ ಸ್ಮರಣಾರ್ಥವಾಗಿ ಅವರ ಪುತ್ರ ಪ್ರಗತಿಪರ ಕೃಷಿಕ ಕೆ.ಟಿ. ಹರೀಶ್ ಹಾಗೂ ಮನು ಅವರುಗಳು ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ದುಂಡಳ್ಳಿ ಗ್ರಾಮದ ಕೃಷಿ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಪ್ರಾಯೋಜಕ ಕೆ.ಟಿ. ಹರೀಶ್ ಮಾತನಾಡಿ, ಮಾನವ ದೇಹದ ಪಂಚೇAದ್ರಿಯಗಳಲ್ಲಿ ಕಣ್ಣು ಪ್ರಮುಖ ಅಂಗವಾಗಿದೆ. ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಗ್ರಾಮಸ್ಥರು ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಷನ್ ಸ್ಟಿçಂಗ್ ಸಂಸ್ಥೆಯ ನೇತ್ರ ವೈದ್ಯಾಧಿಕಾರಿ ಡಾ.ಜಬೀರ್ ಖಾನ್ ಹಾಗೂ ತಂಡದ ವೈದ್ಯರು, ಸಿಬ್ಬಂದಿ ಆಶಿಶ್ ಚೌದರಿ, ಅಜಯ್, ಅಮಿತ್ ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿದರು. ಶಿಬಿರದಲ್ಲಿ ೧೫೦ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ಕನ್ನಡಕದ ಅವಶ್ಯಕತೆ ಇದ್ದವರಿಗೆ ರೂ.೮೦ ಕ್ಕೆ ಕನ್ನಡಕವನ್ನು ವಿತರಿಸಲಾಯಿತು.