ಗೋಣಿಕೊಪ್ಪಲು, ನ. ೨೯: ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿAದ ನೀಡಲಾಗುವ ಸಹಾಯಧನ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರಿಗೆ ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.

ಕಾಫಿ ಮಂಡಳಿಯು ಕಾಫಿ ಬೆಳೆಗಾರರಿಗೆ ಸಹಾಯ ಧನ ನೀಡಲು ಯೋಜನೆ ಹಮ್ಮಿಕೊಂಡಿದೆ. ಈ ಸಂಬAಧ ಅರ್ಜಿ ನೀಡಲು ಸೆ. ೩೦ ಕೊನೆಯ ದಿನಾಂಕವೆAದು ತಿಳಿಸಿದ ನಂತರ ಅ. ೧೦ ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿತ್ತು. ಮಂಡಳಿಯ ಸೂಚನೆಯಂತೆ ಬೆಳೆಗಾರರು ಅರ್ಜಿಗಳನ್ನು ಸಲ್ಲಿಸಿದ್ದು, ಆದರೆ ಕಾಫಿ ಮಂಡಳಿ ಇದೀಗ ಸಹಾಯ ಧನ ನೀಡಲು ಆರ್ಥಿಕ ಸಮಸ್ಯೆ ಇದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯೆಂದು ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಎಂದು ಸಮಿತಿ ಪ್ರಮುಖರು ಆರೋಪಿಸಿದ್ದಾರೆ.

ಇದರಿಂದ ಕಾಫಿ ಬೆಳೆಗಾರರಿಗೆ ಅನ್ಯಾಯವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಾಫಿ ಮಂಡಳಿಯಿAದ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಬಗ್ಗೆ ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಗೌರವ ಅಧ್ಯಕ್ಷ ಸಣ್ಣುವಂಡ ರಮೇಶ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಅದರಲ್ಲೂ ಸಣ್ಣ ಬೆಳೆಗಾರರಿಗೆ ತುಂಬಾ ತೊಂದರೆ ಆಗುತ್ತಿದೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಸಹಾಯಧನ ನೀಡಲು ಹಣಕಾಸನ್ನು ಮಂಜೂರಾರಿಗೆ ಆಸಕ್ತಿ ವಹಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಪೊನ್ನಂಪೇಟೆ ತಾಲೂಕಿನಲ್ಲಿ ವನ್ಯಜೀವಿ ಹಾವಳಿ ಮಿತಿಮೀರಿದ್ದು ಇದರಿಂದ ಕಾಫಿ ಬೆಳೆಗಾರರ ಕಾಫಿ ತೋಟ ಹಾಳಾಗುತ್ತಿದೆ ಮತ್ತು ಬೆಳೆಗಾರರು ಅಪಾರ ನಷ್ಟವನ್ನು ಹೊಂದುತ್ತಿದ್ದಾರೆ. ಅರಣ್ಯ ಇಲಾಖೆಯು ಬೆಳೆಗಾರರಿಗೆ ಕನಿಷ್ಟ ಪರಿಹಾರವನ್ನು ನೀಡುತ್ತಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಹಾವಳಿಯು ಅಧಿಕಗೊಳ್ಳುತ್ತಿದ್ದು ಕಾಫಿ, ಮೆಣಸು, ಅಡಿಕೆ, ತೆಂಗು ಮುಂತಾದ ಬೆಳೆಗಳು ಹಾನಿಯಾಗುತ್ತಿವೆ. ಕೇಂದ್ರದ ಸಚಿವಾಲಯದೊಂದಿಗೆ ವ್ಯವಹರಿಸಿ ಸೂಕ್ತ ಶಾಶ್ವತ ಪರಿಹಾರ ಮಾಡಲು ಕ್ರಮ ತೆಗೆದುಕೊಳ್ಳಲು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.

ಭೇಟಿಯ ವೇಳೆ ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಉಪಾಧ್ಯಕ್ಷ ಆಪಟ್ಟಿರ ಸಿ. ಪ್ರದೀಪ್, ನಿರ್ದೇಶಕರುಗಳಾದÀ ಚೆಪ್ಪುಡೀರ ಅಪ್ಪಣ್ಣ, ಆಪಟ್ಟಿರ ಎ. ಬೋಪಣ್ಣ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.