ಮಡಿಕೇರಿ, ನ. ೨೯: ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪಿ.ಯು. ಕಾಲೇಜಿನ ೧೯ನೆ ಕರ್ನಾಟಕ ಬ್ಯಾಟಾಲಿಯನ್ ಎನ್‌ಸಿಸಿ ಯೂನಿಟ್ ವತಿಯಿಂದ ಎನ್‌ಸಿಸಿ ದಿನಾಚರಣೆ - ೨೦೨೪, ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.
ಕೊಡಗು ಪಬ್ಲಿಕ್ ಶಾಲೆ ಮತ್ತು ಪಿ.ಯು. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ರಾಮಚಂದ್ರ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೆಡಿ, ಜೆಡಬ್ಲ್ಯೂ, ಎಸ್‌ಡಿ ಮತ್ತು ಎಸ್‌ಡಿಡಬ್ಲೂö್ಯ ಕ್ಯಾಡೆಟ್ಸ್ಗಳು ಭಾರತೀಯ ಸೇನೆಯ ವಿಷಯ ಮತ್ತು ವೈವಿಧ್ಯತೆಯಲ್ಲಿ ಏಕತೆ ಎಂಬ ವಿಷಯದ ಮೇಲೆ ನೃತ್ಯ ಪ್ರದರ್ಶನ ನೀಡಿದರು.
ಎನ್‌ಸಿಸಿಯ ವಿವಿಧ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಸಾರ್ಜೆಂಟ್ ಕೀಕಿರ ಧನ್ಯಾ ಅವರು ಮಂಡಿಸಿದರು. ಐಜಿಸಿ ಮತ್ತು ಪ್ರೀ-ಆರ್ಡಿಸಿನಲ್ಲಿ ಭಾಗವಹಿಸಿದ ಕ್ಯಾಡೆಟ್ಸ್ಗಳು ಹಾಗೂ ಇತರ ಜೆಡಿ, ಎಸ್‌ಡಿ ಮತ್ತು ಎಸ್‌ಡÀಬ್ಲ್ಯೂ ಕ್ಯಾಡೆಟ್ಸ್ಗಳನ್ನು ಕೂರ್ಗ್ ಪಬ್ಲಿಕ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕಿಶೋರ್‌ಕುಮಾರ್ ಗೌರವಿಸಿದರು.
ಪ್ರಶಸ್ತಿ ವಿಜೇತರ ವಿವರ
ಅತ್ಯುತ್ತಮ ಎನ್‌ಸಿಸಿ ಸಾಧನೆ ಪುರಸ್ಕಾರ - ಕರ್ಪೊರಲ್ ಧ್ಯಾನ್ ನಾಚಪ್ಪ (ಸೀನಿಯರ್ ವಿಭಾಗ) - ಐಜಿಸಿಯಲ್ಲಿ ಶೂಟಿಂಗ್ ಇವೆಂಟ್‌ನಲ್ಲಿ ಉತ್ತಮ ಪ್ರದರ್ಶನ, ಲ್ಯಾನ್ಸ್ ಕರ್ಪೊರಲ್ ಲೋಹಿತ್ ಯಾದವ್ (ಐಜಿಸಿ ಜೂನಿಯರ್ ವಿಭಾಗ) - ಬ್ಯಾಂಡ್ ಮಾಸ್ಟರ್‌ಗಾಗಿ ಮ್ಯೂಸಿಕ್ ಇವೆಂಟ್‌ನಲ್ಲಿ ಉತ್ತಮ ಸಾಧನೆ.
ಅತ್ಯುತ್ತಮ ಕೆಡೆಟ್ ಡೆಂಟ್ ಪುರಸ್ಕಾರ: ಕರ್ಪೊರಲ್ ಯತಿನ್ ಆರ್. (ಸೀನಿಯರ್ ವಿಭಾಗ), ಸಾರ್ಜೆಂಟ್ ಧನ್ಯಾ (ಸೀನಿಯರ್ ವಿಭಾಗ)
ಜೂನಿಯರ್ ವಿಭಾಗದಲ್ಲಿ : ಸಾರ್ಜೆಂಟ್ ಅಯ್ಯಪ್ಪ ಎಂ.ಪಿ., ಕೆಡೆಟ್ ಲಯಾ ದಿನಕರ್, ಅತ್ಯುತ್ತಮ ಪೇರೆಡ್ ಪುರಸ್ಕಾರ: ಎಲ್.ಸಿ.ಪಿಎಲ್. ನಿಶಾನ್ ಅಮರ್‌ನಾಥ್ ಮತ್ತು ಡೀನಾ ಪಿ.ಜಿ., ಅತ್ಯುತ್ತಮ ಪೈಲಟ್ ಪುರಸ್ಕಾರ: ಎಲ್.ಸಿ.ಪಿ.ಎಲ್ ಅನುಷಾ ಎಂ.ಬಿ. ಮತ್ತು ಕುಟ್ಟಪ್ಪ ಎಂ.ಎA.
ನೀರವ ಸೊಗಸಿನ ತೊಡಿಗೆ ಪುರಸ್ಕಾರ
ವೈಯಕ್ತಿಕ ವಿಭಾಗದಲ್ಲಿ: ವೇದಾಂತ್ ಪೂಜಾರಿ (ಎಸ್.ಡಿ), ಧನ್ನವಿ ಅಚಯ್ಯಾ (ಎಸ್ ಡಬ್ಲ್ಯೂ), ಜೂನಿಯರ್ ವಿಭಾಗದಲ್ಲಿ : ದೇವಯ್ಯ ಮತ್ತು ಜನ್ಯಾ, ಅತ್ಯುತ್ತಮ ಸ್ವಯಂ ಸೇವಕ ಪುರಸ್ಕಾರ: ಎಸ್‌ಡಿ - ಗಗನ್ ಎಂ.ಎಸ್.ಡಬ್ಲ್ಯೂ - ಶ್ರೇಯ ಎಂ.ಎಲ್., ಅತ್ಯುತ್ತಮ ಪರಿಶ್ರಮಿ ಪುರಸ್ಕಾರ: ಎಸ್.ಡಬ್ಲ್ಯೂ. - ರಿಯಾ ಅಪ್ಪಣ್ಣ.
ಉದಯೋನ್ಮುಖ ಕೆಡೆಟ್ ಪುರಸ್ಕಾರ: ಎಸ್.ಡಿ. ಮತ್ತು ಎಸ್.ಡಬ್ಲ್ಯೂ. ಕೆ.ಯು. ಶಾನ್ ಅಪ್ಪಚ್ಚು ಶೃಂಗ ಟಿ.ಸಿ. ಪಡೆದುಕೊಂಡರು. ಸಮಾರಂಭದ ಕೊನೆಯಲ್ಲಿ ಕ್ಯಾಡೆಟ್ ಡೀನಾ ಪಿ.ಜಿ. ವಂದನಾರ್ಪಣೆಗೈದರು. ಕೆಡಿಟ್ ಮನಸ್ವಿ ಪೊನ್ನಣ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು, ರೆಸಿಡೆಂಟ್ ಮ್ಯಾನೇಜರ್, ಬೋಧಕ ಮತ್ತು ಬೋಧಕೇತರ ವೃಂದದವರು ಹಾಜರಿದ್ದರು.