ಮಡಿಕೇರಿ, ನ. ೨೯: ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿ ಕಡಂಗ, ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ವೀರಾಜಪೇಟೆ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಅಲ್ ಅನ್ಸಾರ್ ಆಸ್ಪತ್ರೆ ಮೈಸೂರು ಇವರ ಸಹಯೋಗದೊಂದಿಗೆ ೨ನೇ ವರ್ಷದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. ೧ರಂದು ಆಯೋಜಿಸಲಾಗಿದೆ. ಎಂದು ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿಯ ಪ್ರಧಾನ ಕಾರ್ಯದರ್ಶಿ ಆಶಿಕ್ ಸಿ.ಎಂ. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ತಾಲೂಕು ಕೋಶಾಧಿಕಾರಿ ಹಾಗೂ ಕೆಡಿಎಸ್ ಚಾರಿಟಿಯ ಆಡಳಿತ ಮಂಡಳಿ ಸದಸ್ಯ ಅಶ್ರಫ್ ಸಿ.ಎ. ಮಾಹಿತಿ ನೀಡಿ ಅಂದು ಪೂರ್ವಾಹ್ನ ೧೦.೩೦ ರಿಂದ ಶಿಬಿರ ಆರಂಭಗೊಳ್ಳಲಿದ್ದು ಅಪರಾಹ್ನ ೨ ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ಅಲ್ ಅನ್ಸಾರ್ ಆಸ್ಪತ್ರೆಯ ನಾಲ್ಕು ನುರಿತ ವೈದ್ಯರು ಸ್ತಿçÃರೋಗ, ಪ್ರಸೂತಿ, ದಂತ ಚಿಕಿತ್ಸೆ ವೈದ್ಯಕೀಯ ತಜ್ಞರ ಪರೀಕ್ಷೆ, ಶಸ್ತçಚಿಕಿತ್ಸಾ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಶಿಬಿರದಲ್ಲಿ ಇಸಿಜಿ ಸೌಲಭ್ಯವಿರಲಿದ್ದು, ಔಷದಿಗಳನ್ನು ಉಚಿತವಾಗಿ ನೀಡಲಾಗುವುದು. ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ತಾಲೂಕು ಅಧ್ಯಕ್ಷ ಫತಾಯಿ ಸಿ.ಎ. ವಹಿಸಲಿದ್ದು, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ರಾಷ್ಟಿçÃಯ ಅಧ್ಯಕ್ಷ ನಸೀರ್ ಅಹ್ಮದ್, ಸೇವ್ ದಿ ಡ್ರಿಮ್ಸ್ ಚಾರಿಟಿ ನಾಪೋಕ್ಲು ಇದರ ಚೆರ್ಮೆನ್ ಜಾಬಿರ್ ನಿಜಾಮಿ, ಎಐಎಂಡಿಎಫ್ ರಾಷ್ಟಿçÃಯ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಜಿಪ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕೆಡಿಎಸ್ ಚಾರಿಟಿಯ ಅಧ್ಯಕ್ಷ ಜುನೈದ್ ಸಿ.ಎ., ಮತಿತ್ತರ ರಾಜಕೀಯ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಿಬಿರಕ್ಕೆ ಹೆಸರು ನೋಂದಾಯಿಸಲು ೯೩೮೦೨೮೫೦೭೮, :೯೪೮೨೬೧೬೮೩೫, ೯೭೪೦೩೨೬೩೬೮ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಕೆಡಿಎಸ್ ಚಾರಿಟಿಯ ಕೋಶಾಧಿಕಾರಿ ರಜಾಕ್ ಸಿ.ಎ., ಆಡಳಿತ ಮಂಡಳಿಯ ಸದಸ್ಯ ಸೌಕತ್ ಪಿ.ಎಂ., ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ತಾಲೂಕು ಸಹಕಾರ್ಯದರ್ಶಿ ಸೈಫುದ್ದಿನ್ ಚಾಮಿಯಾಲ, ಹ್ಯಾರಿಸ್ ಕೊಂಡAಗೇರಿ ಉಪಸ್ಥಿತರಿದ್ದರು.