ಶ್ರೀಮಂಗಲ, ನ. ೨೯: ಕೊಡವ ಹಿತರಕ್ಷಣಾ ಬಳಗ ಕ್ಗ್ಗಟ್ಟ್ನಾಡ್ ಪೊನ್ನಂಪೇಟೆಯ ಆಶ್ರಯದಲ್ಲಿ ತೋಕ್ ನಮ್ಮೆಯನ್ನು ಆಯೋಜಿಸಲಾಗಿದೆ. ಪೊನ್ನಂಪೇಟೆ ಕೊಡವ ಸಮಾಜ ಸಮೀಪದ ಸರಕಾರಿ ಶಾಲಾ ಮೈದಾನದಲ್ಲಿ ಡಿಸೆಂಬರ್ ೮ ರಂದು ಭಾನುವಾರ ಪೂರ್ವಾಹ್ನ ೯ ಗಂಟೆಯಿAದ ಸ್ಪರ್ಧೆ ನಡೆಯಲಿದೆ.
ಪಾಯಿಂಟ್ ೨೨ ಕೋವಿ ಬಳಸಿ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಇದಾಗಿದೆ ಎಂದು ಸಂಸ್ಥೆ ಪ್ರಮುಖರು ಸಭೆಯಲ್ಲಿ ಮಾಹಿತಿ ನೀಡಿದರು. ೧೨ ವರ್ಷ ಮೇಲ್ಪಟ್ಟು ಮಕ್ಕಳು, ಮಹಿಳೆಯರು, ಪುರುಷರಿಗೆ ಮುಕ್ತ ಪೈಪೋಟಿ ಇದ್ದು, ಪ್ರಥಮ ರೂ. ೨೦ ಸಾವಿರ, ದ್ವಿತೀಯ ರೂ. ೧೫ ಸಾವಿರ, ತೃತೀಯ ರೂ. ೧೦ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು. ಹೆಚ್ಚಿನ ವಿವರಕ್ಕೆ ೯೭೪೯೫೦೮೦೭೬ ೯೮೮೦೨೦೭೬೪೦ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೆರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೇರ ಕಿಶನ್ ಉತ್ತಪ್ಪ, ಸದಸ್ಯರಾದ ಅಡ್ಡಂಡ ಡಾಲಿ ಜನಾರ್ಧನ, ಮಲಚಿರ ಉತ್ತಪ್ಪ, ಅಜ್ಜಿಕುಟ್ಟಿರ ಶುಭ ಮುತ್ತಪ್ಪ, ಅಡ್ಡಂಡ ಸುನಿಲ್ ಸೋಮಯ್ಯ ಮತ್ತಿತರರು ಇದ್ದರು.