ಪೊನ್ನಂಪೇಟೆ, ನ. ೨೯: ಬೆಂಗಳೂರು ಜಯಪ್ರಕಾಶ್ ನಾರಾಯಣ್ ಸೆಂಟ್ರಲ್ ಯೂತ್ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಸ್ಟೇಡಿಯಂನಲ್ಲಿ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕೊಡಗಿನ ಮೂವರು ವಿದ್ಯಾರ್ಥಿಗಳು ಪದಕ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
೧೭ ವರ್ಷದೊಳಗಿನವರ ವಿಭಾಗದಲ್ಲಿ ಗೋಣಿಕೊಪ್ಪಲು ಪ್ರೌಢಶಾಲೆ ವಿದ್ಯಾರ್ಥಿ, ಜೋಡುಬೀಟಿ ಗ್ರಾಮದ ರವಿ ಮತ್ತು ವನಿತ ದಂಪತಿ ಪುತ್ರ ನಿರನ್ ಬೋಪಣ್ಣ ಚಿನ್ನದ ಪದಕ, ೧೪ ವರ್ಷದೊಳಗಿನವರ ವಿಭಾಗದಲ್ಲಿ ಅರ್ವತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿ, ಗೋಣಿಕೊಪ್ಪಲು ಗ್ರಾಮದ ಮಿನ್ನಂಡ ಜೋಯಪ್ಪ ಮತ್ತು ಪ್ರೀತ್ ದಂಪತಿಯ ಪುತ್ರ ಲಿಖಿತ್ ಚಿಣ್ಣಪ್ಪ ಹಾಗೂ ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿ ಪಾಲಿಬೆಟ್ಟ ಗ್ರಾಮದ ನೆಲ್ಲಮಕ್ಕಡ ಮಾದಯ್ಯ ಮತ್ತು ಪ್ರತಿಷ್ಠ ದಂಪತಿಯ ಪುತ್ರಿ ಡ್ಯಾನಿಕ ದೇಚಮ್ಮ ಕಂಚಿನ ಪದಕ ಪಡೆದುಕೊಳ್ಳುವ ಮೂಲಕ ದೆಹಲಿಯಲ್ಲಿ ನಡೆಯಲಿರುವ ರಾಷ್ಟçಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಚೆಪ್ಪುಡಿರ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ದೇಯಂಡ ಮೇದಪ್ಪ ಹಾಗೂ ಶರತ್ ತರಬೇತಿ ನೀಡುತ್ತಿದ್ದಾರೆ.