ಕುಶಾಲನಗರ, ನ. ೨೯: ಮದುವೆ ಸಮಾರಂಭದಲ್ಲಿ ವಧುವಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವÀ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ಗುರುವಾರ ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ವಧುವಿನ ತಾಯಿ ಕುಶಾಲನಗರ ನಾಗೇಗೌಡ ಬಡಾವಣೆಯ ನಿವಾಸಿ ಸುರೇಶ್ ಅವರ ಪತ್ನಿ ನಳಿನಿ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮದುವೆ ಸಂದರ್ಭದಲ್ಲಿ ವಧುವಿನ ಕೊಠಡಿಯಲ್ಲಿ ಇಟ್ಟಿದ್ದ ಒಂದು ಚಿನ್ನದ ಕಡಗ, ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ನೆಕ್ಲೆಸ್ ಮತ್ತು ಐದು ಸಾವಿರ ನಗದು ಕಳುವಾಗಿರುವುದಾಗಿ ದೂರಿನಲ್ಲಿ ನಳಿನಿ ತಿಳಿಸಿದ್ದಾರೆ. ಒಟ್ಟು ರೂ. ೧.೨೩ ಲಕ್ಷ ಮೌಲ್ಯದ ಸ್ವತ್ತು ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ ಮದುವೆಯ ಕಾರ್ಯಕ್ಕೆ ಚಿನ್ನದ ಆಭರಣಗಳನ್ನು ತಂದು ಬ್ಯಾಗ್‌ನಲ್ಲಿ ಇಡÀಲಾಗಿತ್ತು. ಸಭಾಂಗಣದ ವಧುವಿನ ಕೊಠಡಿಯಲ್ಲಿ ಮಂಚದ ಮೇಲೆ ಬ್ಯಾಗ್ ಇಟ್ಟು ಈ ಸಂದರ್ಭ ನೆಂಟರಿಷ್ಟರನ್ನು ಮಾತಾಡಿಸಲು ಕೊಠಡಿಯಿಂದ ಹೊರಗೆ ಹೋದಾಗ ಈ ಘಟನೆ ನಡೆದಿದೆ.

(ಮೊದಲ ಪುಟದಿಂದ) ಕಳ್ಳತನ ಮಾಡಿರುವ ಚಿನ್ನಾಭರಣ ಹಾಗೂ ನಗದು ಹಣವನ್ನು ಪತ್ತೆಹಚ್ಚಿ ಕೊಡುವಂತೆ ದೂರಿನಲ್ಲಿ ನಳಿನಿ ಅವರು ಕೋರಿದ್ದಾರೆ.

ಘಟನೆಯಿಂದ ವಿಚಲಿತರಾಗದ ವಧು ಮತ್ತು ವರನ ಕಡೆಯವರು ಯಾವುದೇ ವಿಘ್ನ ಇಲ್ಲದೆ ವಿವಾಹ ಮಹೋತ್ಸವವನ್ನು ಸಾಂಗವಾಗಿ ನೆರವೇರಿಸಿದರು.

ಕಲ್ಯಾಣ ಮಂಟಪದ ಸಿಸಿ ಕ್ಯಾಮರದ ದೃಶ್ಯಾವಳಿಗಳನ್ನು ಗಮನಿಸಿದ ಸಂದರ್ಭ ಓರ್ವ ಯುವಕ ಕೊಠಡಿಗೆ ಬಂದು ಹೋಗಿರುವ ಬಗ್ಗೆ ಸುಳಿವು ದೊರೆತಿದ್ದು, ಕುಶಾಲನಗರ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

-ಚAದ್ರಮೋಹನ್.