ಮೂರ್ನಾಡು, ನ. ೨೯: ಮೂರು ನಾಡು ಎಂಬ ಖ್ಯಾತಿ ಹೊಂದಿರುವ., ಬಹಳಷ್ಟು ಸಾಹಿತಿಗಳಿಗೆ ನೆಲೆ ಕಲ್ಪಿಸಿಕೊಟ್ಟಿರುವ ಪುಟ್ಟ ಗ್ರಾಮದಲ್ಲಿ ಕನ್ನಡದ ಕಂಪು ಸೂಸಿತು., ಕನ್ನಡ ಧ್ವಜವನ್ನು ಎತ್ತಿ ಹಿಡಿಯುವದ ರೊಂದಿಗೆ ಮೆರವಣಿಗೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಾಡಿನ ಜನರು ಕನ್ನಡದ ಕಹಳೆ ಮೊಳಗಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಹಾಗೂ ಮೂರ್ನಾಡು ಹೋಬಳಿ ಘಟಕ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯ್ತಿ, ಪಿ.ಎಂ.ಶ್ರೀ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಮೂರ್ನಾಡು ಹೋಬಳಿ ಘಟಕದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಏರ್ಪಡಿಸಲಾಗಿದ್ದ ೬೬ನೇ ಕನ್ನಡ ರಾಜ್ಯೋತ್ಸವ- ಕನ್ನಡ ಹಬ್ಬ ವಿಜೃಂಭಣೆಯಿAದ ನಡೆಯಿತು.
ಆಕರ್ಷಕ ಮೆರವಣಿಗೆ
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಹೊರಟ ಮೆರವಣಿಗೆಗೆ ಹಿರಿಯ ಸಾಹಿತಿ ನಾಗೇಶ್ ಕಾಲೂರು ಹಾಗೂ ಪ್ರಬಾರ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕ ರವಿ ಚಾಲನೆ ನೀಡಿದರು. ಕಳಸದೊಂದಿಗೆ ಮುಂಚೂಣಿಯಲ್ಲಿದ್ದ ಮಹಿಳೆಯರು, ತಾಯಿ ಭುವನೇಶ್ವರಿಯ ಕಲಾಕೃತಿ ಯನ್ನು ಹೊತ್ತ ಅಲಂಕೃತ ವಾಹನ ದೊಂದಿಗೆ ನಾಡಿನ ದಾರ್ಶನಿಕರ ವೇಷ ಧರಿಸಿದ್ದ ಮಕ್ಕಳ ಸ್ಥಬ್ಧ ಚಿತ್ರಗಳು, ಡೊಳ್ಳು ಕುಣಿತ ಮತ್ತಿತರ ಕಲಾತಂಡಗಳು, ಅತಿಥಿ ಗಣ್ಯರು, ಶಾಲಾ ಮಕ್ಕಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಧ್ವಜಾರೋಹಣ
ಮೆರವಣಿಗೆಯ ಬಳಿಕ ಕಾರ್ಯಕ್ರಮ ಏರ್ಪಾಡಾಗಿದ್ದ ಶಾಲಾ ಸಭಾಂಗಣದ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ರಾಷ್ಟç ಧ್ವಜವನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ನೆರವೇರಿಸಿದರೆ, ನಾಡ ಧ್ವಜವನ್ನು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ನೆರವೇರಿಸಿದರು.
ಸಾಧಕರಿಗೆ ಸನ್ಮಾನ
ನಂತರ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕೊರೊನ ಸಂದರ್ಭದಲ್ಲಿ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ ಕುಟ್ಟಪ್ಪ, ಅಬೂಬಕರ್, ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ನಿವೃತ್ತ ಶಿಕ್ಷಕಿ ಬಾಚೆಟ್ಟಿರ ಕಮಲು ಸುಬ್ಬಯ್ಯ, ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ಅತಿ
ಹೆಚ್ಚು ಅಂಕ
(ಮೊದಲ ಪುಟದಿಂದ) ಪಡೆಯುವದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ ನಿಶ್ಮಿತಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ‘ಪವಿತ್ರ ಪ್ರೀತಿ ಪ್ರಾಪ್ತಿ’ ಎಂಬ ಪು¸ಕವನ್ನು ಬಿಡುಗಡೆಗೊಳಿಸಲಾಯಿತು. ಕಿಗ್ಗಾಲು ಗಿರೀಶ್ ಬಿಡುಗಡೆಗೊಳಿಸಿದರು.
ಸಾಂಸ್ಕೃತಿಕ ರಂಗು
ಕಾರ್ಯಕ್ರಮಕ್ಕೆ ರಂಗು ತುಂಬುವ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು, ನೃತ್ಯಶಾಲಾ ಮಕ್ಕಳು ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕುವದರೊಂದಿಗೆ ರಂಗು ಚೆಲ್ಲಿದರು. ನೆರೆದಿದ್ದ ಕನ್ನಡಾಭಿಮಾನಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು ಕನ್ನಡ ಹಬ್ಬದ ಯಶಸ್ಸಿಗಾಗಿ ಕೈ ಜೋಡಿಸಿದರು. -ಕುಡೆಕಲ್ ಸಂತೋಷ್/ ಟಿ.ಸಿ.ನಾಗರಾಜ್