ಶ್ರೀಮಂಗಲ, ನ. ೨೯: ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀನಿವಾಡ ಗ್ರಾಮದಲ್ಲಿ ರೂ. ೧೫ ಲಕ್ಷ ಅನುದಾನದಲ್ಲಿ ಗ್ರಾಮದ ಮೂರು ರಸ್ತೆಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಆವರು, ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ ರೂ. ೫ ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಚೀನಿವಾಡ ಗ್ರಾಮದ ೩ ಕಾಮಗಾರಿಗೆ ತಲಾ ರೂ. ೫ ಲಕ್ಷದಂತೆ ಒಟ್ಟು ರೂ. ೧೫ ಲಕ್ಷ ಅನುದಾನದಲ್ಲಿ ಕಾಮಗಾರಿಗೆ ಭೂಮಿಪೂಜೆ ನಡೆಸಲಾಗಿದೆ ಎಂದರು.

ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳ ಬಗ್ಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಅಲೀರ ಅಹಮದ್, ಉಸ್ಮಾನ್, ಜಾಫರ್ ಕುಟುಂಬಸ್ಥರು ಅಲೀರ ನಾಸಿರ್, ರಝಕ್ ಅವರ ಕುಟುಂಬಸ್ಥರ ೩ ರಸ್ತೆಗಳಿಗೆ ತಲಾ ರೂ. ೫ ಲಕ್ಷದಂತೆ ಒಟ್ಟು ೧೫ ಲಕ್ಷ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗೋಪಿ, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಹುದಿಕೇರಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮತ್ರಂಡ ರೇಖಾ, ಪ್ರಮುಖರಾದ ಮೂಕಳೆರ ಕುಶಾಲಪ್ಪ, ಎರ್ಮು ಹಾಜಿ, ಸಾದಲಿ, ಬಾಜಿ, ಅಹಮದ್, ಬಾಬು, ಸಾಜಿ ಅಚ್ಚುತನ್, ಚಂಗುಲAಡ ಸೂರಜ್, ಮತ್ರಂಡ ಸುಕು, ಮತ್ತಿತರರು ಇದ್ದರು.