ಮುಳ್ಳೂರು, ನ. ೨೯: ಶಾಲೆಯ ಶಿಕ್ಷಣ ಸಂಸ್ಥೆಯ ವರ್ಷವಿಡೀ ನಡೆಯುವ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಮತ್ತು ಮೌಲ್ಯಯುತ ಕ್ರೀಯಾಶೀಲತೆಯನ್ನು ಪರಿಗಣಿಸಿ ಪಂಜಾಬಿನ ಫೆಡರಲ್ ಸ್ಕೂಲ್ ಅಸೋಸಿಯೇಶನ್ ಸಂಸ್ಥೆ ವತಿಯಿಂದ ಸಾಧಕ ಶಿಕ್ಷಕರಿಗೆ ಕೊಡ ಮಾಡಲಾಗುವ ಎಫ್.ಎ.ಪಿ ರಾಷ್ಟಿçÃಯ ಪ್ರಶಸ್ತಿಗೆ ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಭಾಜನರಾಗಿದ್ದಾರೆ.