ಗೋಣಿಕೊಪ್ಪ ವರದಿ, ನ. ೨೯: ಹಾಕಿಕೂರ್ಗ್ ಸಹಯೋಗದಲ್ಲಿ ಕುಟ್ಟಂದಿ ಗ್ರಾಮದ ಬೇರಳಿನಾಡ್, ಕುತ್ತ್ನಾಡ್ ಪ್ರೌಢಶಾಲೆಯ ವಜ್ರಮಹೋತ್ಸವ ಪ್ರಯುಕ್ತ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಡ್ರಿಬ್ಲ್ ಹೆಂಪ್, ಮಹಾದೇವ ಸ್ಪೋರ್ಟ್, ಕೋಣನಕಟ್ಟೆ ಇಲೆವೆನ್ ಹಾಗೂ ಮೂರ್ನಾಡು ಬ್ಲೇಜ್ ತಂಡಗಳು ಉಪಾಂತ್ಯಕ್ಕೆ (ಸೆಮಿ ಫೈನಲ್) ಪ್ರವೇಶ ಪಡೆದುಕೊಂಡಿವೆ.
ಫಲಿತಾAಶ
ಕೋಣನಕಟ್ಟೆ ಇಲೆವೆನ್ ತಂಡವು ೪-೦ ಗೋಲುಗಳ ಅಂತರದಿAದ ಕಿರುಗೂರು ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು. ಕೋಣನಕಟ್ಟೆ ಪರವಾಗಿ ಯಶ್ವಿನ್ ೨ ಗೋಲು ಹೊಡೆದರು. ರಂಜಿತ್, ನರೇನ್ ತಲಾ ಒಂದೊAದು ಗೋಲು ಹೊಡೆದರು.
ಮೂರ್ನಾಡು ಬ್ಲೇಜ್ ತಂಡವು ಕಕ್ಕಬ್ಬೆ ಮಲ್ಮ ವಿರುದ್ಧ ೨-೦ ಗೋಲುಗಳ ಜಯ ಸಾಧನೆ ಮಾಡಿತು. ಬ್ಲೇಜ್ ಪರವಾಗಿ ಸಮೀರ್, ಹರ್ಪಾಲ್ ಒಂದೊAದು ಗೋಲು ದಾಖಲಿಸಿದರು. ಡ್ರಿಬ್ಲ್ ಹೆಂಪ್ ತಂಡವು ವೀರಾಜಪೇಟೆ ಕೆಎಸ್ಆರ್ಸಿ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶ ಪಡೆಯಿತು. ಹೆಂಪ್ ಪರವಾಗಿ ಮೋಕ್ಷಿತ್, ಸುಬ್ಬಯ್ಯ, ಪೊನ್ನಣ್ಣ ಗೋಲು ಬಾರಿಸಿದರು.
ಮಹಾದೇವ ಸ್ಪೋರ್ಟ್ ತಂಡವು ಕುಂದ ಬೊಟ್ಟಿಯತ್ನಾಡ್ ತಂಡದ ವಿರುದ್ಧ ಟೆöÊಬ್ರೇಕರ್ನಲ್ಲಿ ೪-೨ ಗೋಲುಗಳಿಂದ ಗೆದ್ದು ಬೀಗಿತು. ಉಭಯ ತಂಡಗಳು ೧-೧ ಸಮನಾಂತರ ಸಾಧಿಸಿತು. ಟೈಬ್ರೇಕರ್ನಲ್ಲಿ ಮಹಾದೇವ ಸ್ಪೋರ್ಟ್ಸ್ ತಂಡವು ೨ ಗೋಲು ಹೊಡೆದು ಗೆಲುವು ದಕ್ಕಿಸಿಕೊಂಡಿತು. ಮಹಾದೇವ ಪರ ಮಹಮದ್ ನಹೀಮ್ ೨, ಮೋಸಸ್, ಅದುತ್, ಬೊಟ್ಟಿಯತ್ನಾಡ್ ಪರ ಸೋಮಣ್ಣ, ಅಚ್ಚಯ್ಯ ಗೋಲು ಹೊಡೆದರು.
ಟೂರ್ನಿ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್, ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ಕಲ್ಮಾಡಂಡ ಸೋಮಣ್ಣ, ಬೊಳ್ಳಚಂಡ ನಾಣಯ್ಯ, ವಿನೋದ್ ಕುಮಾರ್, ಕರವಂಡ ಅಪ್ಪಣ್ಣ, ಪಟ್ರಪಂಡ ಸಚಿನ್ ಕಾರ್ಯನಿರ್ವಹಿಸಿದರು.