ಮಡಿಕೇರಿ, ಡಿ. ೪: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ಇದರ ೫೦ನೆ ವರ್ಷದ ಸಂಭ್ರಮದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಮಡಿಕೇರಿಯಲ್ಲಿ ಏರ್ಪಡಿಸಲಾಗಿದೆ. ಸ್ಪರ್ಧೆಯನ್ನು ತಾ. ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ (ಶತಮಾನ ಭವನ) ವಿಪ್ರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಯೋಜಿಸಲಾಗಿದೆ.
ಜಾನಪದ ನೃತ್ಯ ಸ್ಪರ್ಧೆ (ಮಹಿಳೆಯರಿಗೆ): ಸಮಯ ೧೦ ನಿಮಿಷ, ಕನಿಷ್ಟ ೮ ರಿಂದ ೧೦ ಮಂದಿ ಭಾಗವಹಿಸಬಹುದು. ಭಾರತದ ಯಾವ ನೃತ್ಯ ಪ್ರಕಾರವನ್ನಾದರೂ ಮಾಡಬಹುದು. ವಿಭಾಗ ೧ - ೧೮ ವರ್ಷದಿಂದ ೩೫ ವರ್ಷದ ಪ್ರಾಯದ ಮಹಿಳೆಯರು ಭಾಗವಹಿಸಬಹುದು. ವಿಭಾಗ ೨ - ೩೫ ವರ್ಷ ಪ್ರಾಯ ಮೇಲ್ಪಟ್ಟ ಮಹಿಳೆಯರು ಭಾಗವಹಿಸಬಹುದು.
ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ಸ್ಪರ್ಧೆ: ವಿಭಾಗ ೧ - ೮ ರಿಂದ ೧೨ ವರ್ಷ ಪ್ರಾಯದ ಮಕ್ಕಳಿಗೆ - ಅಧ್ಯಾಯ ೧೨ ಅಥವಾ ೧೩ (೩ ನಿಮಿಷ). ವಿಭಾಗ ೨ - ೧೩ ರಿಂದ ೧೭ ವರ್ಷ ಪ್ರಾಯದವರಿಗೆ ಅಧ್ಯಾಯ ೬ ಅಥವಾ ೭ (೩ ನಿಮಿಷ). ಹೆಸರನ್ನು ನೋಂದಾಯಿಸಲು ತಾ. ೧೨ ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರು ಬೆಂಗಳೂರಿನಲ್ಲಿ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ತಾ. ೧೭ ರಂದು ಬೆಂಗಳೂರಿನಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಬ್ರಾಹ್ಮಣ ಮಹಾಸಭಾದ ಸಂಚಾಲಕಿ ಗೀತಾ ಸಂಪತ್ ಕುಮಾರ್ - ಮೊ: ೭೨೦೪೬೮೭೩೭೬, ಸಹ ಸಂಚಾಲಕಿ ಸವಿತಾ ಯೋಗೇಶ್ - ಮೊ: ೮೭೬೨೧೧೦೬೦೯ ಅಥವಾ ನಿರ್ದೇಶಕಿ ಲಲಿತಾ ಹರಿ - ಮೊ: ೯೪೮೦೨೯೦೩೨೪, ಇವರುಗಳನ್ನು ಸಂಪರ್ಕಿಸಬಹುದು.