ಮಡಿಕೇರಿ, ಡಿ. ೪: ಫೀ. ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣವನ್ನು ಮರೆನಾಡು ಕೊಡವ ಸಮಾಜ ಖಂಡಿಸಿದೆ. ವಕೀಲ ವಿದ್ಯಾಧರ್ ಎಂಬವರು ಮಾಡಿರುವ ಈ ಕೃತ್ಯಕ್ಕೆ ಸೂಕ್ತ ತನಿಖೆ ಮೂಲಕ ಶಿಕ್ಷೆಯಾಗಬೇಕಿದೆ. ಈ ನಿಟ್ಟಿನಲ್ಲಿ ಒತ್ತಾಯಪಡಿಸಿ ತಾ.೬ರಂದು ಮಾಜಿ ಸೈನಿಕರ ಸಂಘ ಕರೆ ನೀಡಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ಸಮಾಜದ ಅಧ್ಯಕ್ಷರಾದ ಕುಪ್ಪುಡೀರ ಪೊನ್ನು ಮುತ್ತಪ್ಪ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.