*ಗೋಣಿಕೊಪ್ಪ, ಡಿ. ೫: ಕ್ರಿಕೆಟ್‌ನಲ್ಲಿ ಕೊಡಗಿನಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸುತ್ತಿರುವ ಗೋಣಿಕೊಪ್ಪ ಜಿ.ಪಿ.ಲ್ ಪ್ರೀಮಿಯ ಲೀಗ್ ಎಂಟನೇ ಆವೃತ್ತಿಯ ಪ್ರಾರಂ ಭಕ್ಕೆ ಉದ್ಯಮಿ ಮಾಚ್ಚಮಾಡ ಅನೀಶ್ ಮಾದಪ್ಪ, ಜಿಪಿಲ್ ಅಸೋಸಿಯೇಷನ್ ಅಧ್ಯಕ್ಷ ಸಿಂಗಿ ಸತೀಶ್ ಉಪಸ್ಥಿತಿಯಲ್ಲಿ ಮೊದಲ ದಿನದ ಕ್ರಿಕೆಟ್ ಸಂಭ್ರಮಕ್ಕೆ ಚಾಲನೆ ನೀಡಿದರು.

ಮಹಾಲಕ್ಷಿö್ಮ ದೇವಸ್ಥಾನದ ಮುಂಭಾಗದಲ್ಲಿ ಜಿ.ಪಿ.ಎಲ್ ಅಸೋ ಸಿಯೇಷನ್ ಕ್ರೀಡಾ ಸ್ಪರ್ಧಿಗಳೊಂದಿಗೆ ಹಮ್ಮಿಕೊಂಡ ಮೆರವಣಿಗೆಗೆ ಚಾಲನೆ ನೀಡಿ ಕ್ರಿಕೆಟ್ ಉತ್ಸವಕ್ಕೆ ಲವಲವಿಕೆ ತುಂಬಿದರು. ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನ ನಡೆಯುವ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗೆ ಹತ್ತು ಫ್ರಾಂಚೈಸಿ ತಂಡಗಳು ಆಟಗಾರರನ್ನು ಖರೀದಿಸಿ ೧೨೦ಕ್ಕೂ ಹೆಚ್ಚು ಆಟಗಾರರು ಸೆಣೆ ಸಾಡಲು ಮೈದಾನಕ್ಕೆ ಇಳಿದಿದ್ದಾರೆ.

ಕಳೆದ ಏಳು ವರ್ಷಗಳಿಂದ ಕ್ರಿಕೆಟ್ ಪ್ರಿಯರ ಗಮನ ಸೆಳೆಯುವಲ್ಲಿ ಜಿಪಿಎಲ್ ಸಂಸ್ಥೆಯ ಕ್ರಿಕೆಟ್ ಪಂದ್ಯಾಟ ಗೆದ್ದಿದೆ. ವಿಶೇಷವಾಗಿ ತಂಡಗಳಿಗೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಚೆನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರಾಯಲ್ಸ್ ಚಾಲೆಂಜರ್ಸ್ ಬೆಂಗ ಳೂರು, ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿ ಟಲ್, ಲಕ್ನೋ ಹೆಸರಿನ ತಂಡಗಳು ಸೆಣೆಸಾಟ ನಡೆಸಲಿವೆ.

ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೧,೧,೧೧೧ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦,೫೫೫ ನಗದು ಬಹುಮಾನ ದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ ೪ನೇ ಸ್ಥಾನ ಪಡೆಯುವ ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ರೂ. ೫ ಸಾವಿರ ನಗದು ನೀಡಲಾಗುತ್ತಿದೆ. ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೂ ವೈಯಕ್ತಿಕ ಬಹುಮಾನ ನೀಡಲಾಗುತ್ತಿದೆ.

ಪ್ರೀಮಿಯರ್ ಲೀಗ್ ಕ್ಲಬ್ ಆರೋಗ್ಯ ಸಲಹೆಗಾರರಾಗಿರುವ ಡಾ. ಅಮೃತ್ ನಾಣಯ್ಯ, ಕಾನೂನು ಸಲಹೆಗಾರರಾಗಿರುವ ಕಶ್ಯಪ್, ಮಾಧ್ಯಮ ಸಲಹೆಗಾರರಾಗಿರುವ ಜಗದೀಶ್ ಜೋಡುಬೀಟಿ, ಅಧ್ಯಕ್ಷರಾ ಗಿರುವ ಸಿಂಗಿ ಸತೀಶ್, ಸ್ಥಾಪಕಾಧ್ಯಕ್ಷ ಸರ್ಫುದ್ದೀನ್, ಗೌರವ ಅಧ್ಯಕ್ಷ ಹಕೀಂ, ಕ್ರೀಡಾ ಸಂಚಾಲಕರಾಗಿ ಶಾಜಿ, ಪ್ರಧಾನ ಕಾರ್ಯದರ್ಶಿ ಶಮ್ಮು, ನಿರ್ದೇಶಕರುಗಳಾದ ಅವಿನಾಶ್, ಮುನೀರ್, ರಂಶದ್, ಚಿದು, ಹಮೀದ್, ಅಫ್ಸಲ್, ಉಮೇಶ್, ಶಿಜು, ರಮೇಶ್, ಸಿರಾಜ್, ಲಾಲು ಸ್ಟಾö್ಯನ್ಲಿ, ಶ್ರೀಕುಮಾರ್ ಸೇರಿದಂತೆ ತಂಡದ ಮಾಲೀಕರು, ವ್ಯವಸ್ಥಾಪಕರು, ತರಬೇತುದಾರರು, ಕ್ರೀಡಾಪಟುಗಳು ಇದ್ದರು.