ಪೊನ್ನAಪೇಟೆ, ಡಿ. ೫: ಪೊನ್ನಂಪೇಟೆ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ, ಪೊನ್ನಂಪೇಟೆ ಪ್ರೀಮಿಯರ್ ಲೀಗ್ -೪ ರ ಚಾಂಪಿಯನ್ ಆಗಿ ರಾಜಸ್ಥಾನ್ ರಾಯಲ್ಸ್ ತಂಡ ಹೊರಹೊಮ್ಮಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‌ಗಳಲ್ಲಿ ೩೧ ರನ್‌ಗಳಿಸಿ, ಗೆಲ್ಲಲು ೩೨ ರನ್‌ಗಳ ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ ಓವರ್‌ಗಳಲ್ಲಿ ೨೭ ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕೊಲ್ಕತ್ತಾ ನೈಟ್ ರೈಡರ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಪಂಜಾಬ್ ಕಿಂಗ್ಸ್ ತೃತೀಯ ಹಾಗೂ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿ : ಸರಣಿ ಶ್ರೇಷ್ಠ ಆಟಗಾರನಾಗಿ ಸಲ್ಮಾನ್, ಉತ್ತಮ ಕ್ಷೇತ್ರ ರಕ್ಷಕನಾಗಿ ರಂಶದ್, ಉತ್ತಮ ಎಸೆತಗಾರನಾಗಿ ಸೆಂದಿಲ್, ಉತ್ತಮ ವಿಕೆಟ್ ಕೀಪರ್ ಆಗಿ ರಹೀಮ್, ಉದಯೋನ್ಮುಖ ಆಟಗಾರನಾಗಿ ದರ್ಶಿತ್, ಉತ್ತಮ ನಾಯಕನಾಗಿ ವಿನೋದ್, ಉತ್ತಮ ಬ್ಯಾಟುಗಾರನಾಗಿ ಪ್ರಶಾಂತ್, ಹೆಚ್ಚು ಸಿಕ್ಸರ್ ಹೊಡೆದ ಆಟಗಾರನಾಗಿ ಜುನೈದ್, ಹೆಚ್ಚು ಬೌಂಡರಿ ಹೊಡೆದ ಆಟಗಾರನಾಗಿ ಸಲ್ಮಾನ್ ಪ್ರಶಸ್ತಿ ಪಡೆದುಕೊಂಡರು.

ಉತ್ತಮ ತಂಡ ಪ್ರಶಸ್ತಿಯನ್ನು ಡೆಲ್ಲಿ ಕ್ಯಾಪಿಟಲ್ ತಂಡ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ನಾಗರಿಕ ವೇದಿಕೆಯ ಉಪಾಧ್ಯಕ್ಷ, ಆಲಿರ ಎರ್ಮು ಹಾಜಿ, ಹಿರಿಯ ವಾಲಿಬಾಲ್ ಆಟಗಾರ ಎ.ಎಂ. ರಶೀದ್, ಪಟ್ಟಣ ಪಂಚಾಯಿತಿ ಸದಸ್ಯ ಅಲಿರ ಅಜೀಜ್, ಗೋಣಿಕೊಪ್ಪಲಿನ ವರ್ತಕರಾದ ರಿಜ್ವಾನ್, ಲಕ್ಷ್ಮೀ ರೆಡ್ಡಿ, ಕಾರ್ತಿಕ್, ದಾನಿಗಳಾದ ಮತ್ರಂಡ ಪ್ರವೀಣ್, ಡಾ. ಬೋಪಣ್ಣ, ಪಂದ್ಯಾವಳಿ ಆಯೋಜನೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಬಹುಮಾನ ವಿತರಿಸಿದರು.