ಸಿದ್ದಾಪುರ, ಡಿ. ೫: ವನ್ಯಜೀವಿ ವಲಯದ ಸಂರಕ್ಷಿತ ಅರಣ್ಯದಲ್ಲಿ ಜಿಂಕೆಯೊAದನ್ನು ಬೇಟೆಯಾಡಿ ಮಾಂಸವಾಗಿ ಪರಿವರ್ತಿಸಿ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಹುಣಸೂರು ವನ್ಯಜೀವಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆಚೌಕೂರು ವನ್ಯಜೀವಿ ವಲಯದ ಚೆನ್ನಂಗಿ ಪಾರದಕಟ್ಟೆ ಹಂದಿಗುಡ್ಡ ಸಂರಕ್ಷಿತ ಅರಣ್ಯದಲ್ಲಿ ಜಿಂಕೆಯೊAದನ್ನು ಬೇಟೆಯಾಡಿ ಅದರ ಮಾಂಸ ಮಾರಾಟಕ್ಕೆ ಯತ್ನಿಸಿದ ಆರೋಪದಡಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಕೋಗಿಲವಾಡಿ ಗ್ರಾಮದ ಮುತ್ತುರಾಜು ಬಿನ್ ರಾಮಚಂದ್ರ (೨೭) ಎಂಬಾತನನ್ನು ಇತ್ತೀಚೆಗೆ ಬಂಧಿಸ ಲಾಗಿತ್ತು. ಬಂಧನ ವೇಳೆ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪರಾರಿಯಾಗಿದ್ದ ಮತ್ತಿಬ್ಬರಾದ ಚೌತಿ ಗ್ರಾಮದ ಕಿಟ್ಟಿ (ಕೃಷ್ಣ ನಾಯಕ), ಕೋಗಿಲವಾಡಿ ಗ್ರಾಮದ ಸತೀಶ್ ಕುಮಾರ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಲ್. ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಕೆ.ಈ. ಸುಬ್ರಹ್ಮಣ್ಯ, ಉಪ ವಲಯ ಅರಣ್ಯ ಅಧಿಕಾರಿ ಮಧು ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಲಾಲ್ ಮೊಹಮ್ಮದ್, ರವಿ ಲಮಾಣಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.
-ಮುಬಾರಕ್