ಕುಶಾಲನಗರದಲ್ಲಿ
ಕುಶಾಲನಗರ, ಡಿ. ೫: ಕುಶಾಲನಗರ ಕೆಹೆಚ್‌ಬಿ ಕಾಲೋನಿಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ತಾ. ೬ರಿಂದ (ಇಂದಿನಿAದ) ಎರಡು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನ ಸೇವಾ ಮತ್ತು ಕಲಾ ಟ್ರಸ್ಟ್ ಆಶ್ರಯದಲ್ಲಿ ಬೆಳಿಗ್ಗೆ ೭ ಗಂಟೆಯಿAದ ಷಷ್ಠಿ, ಪಂಚಮಿ ಪೂಜೆ ಆರಂಭಗೊAಡು ಗಣಹೋಮ, ನವಗ್ರಹ ಪೂಜಾ ಕಾರ್ಯಕ್ರಮ, ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳಿಂದ ಸಾಮೂಹಿಕ ಪೂಜಾ ಕಾರ್ಯಕ್ರಮ ನಂತರ ಕಲಶಾಭಿಷೇಕ, ಮಹಾಮಂಗಳಾರತಿ ನಡೆದು ತೀರ್ಥಪ್ರಸಾದ ವಿನಿಯೋಗ ಜರುಗಲಿದೆ.
ಸಂಜೆ ೬ ಗಂಟೆಗೆ ಸ್ವಾಮಿಯ ಪಲ್ಲಕ್ಕಿ ಉತ್ಸವ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆಯುವುದು.
ತಾ. ೭ ರಂದು ಬೆಳಿಗ್ಗೆ ೫ ಗಂಟೆಯಿAದ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮತ್ತು ಷಷ್ಠಿ ಪೂಜೆ ಆರಂಭಗೊಳ್ಳುವುದು.
ಬೆಳಿಗ್ಗೆ ೬ ಗಂಟೆಗೆ ಪುಷ್ಪ ಅಲಂಕಾರ, ೮ ಗಂಟೆಗೆ ವಸ್ತಾçಲಂಕಾರ ೧೧ ಗಂಟೆಗೆ ಷಷ್ಠಿ ಪೂಜೆ ಆರಂಭವಾಗಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಸಂಜೆ ೬ ಗಂಟೆಗೆ ಅಲಂಕೃತ ಭವ್ಯ ಮಂಟಪದಲ್ಲಿ ಮಂಗಳವಾದ್ಯ ಕಲಾತಂಡದೊAದಿಗೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಸನ್ನಿಧಿಗೆ ಹಿಂತಿರುಗಲಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಡಿ.ಆರ್. ಚಿಕ್ಕೆಗೌಡ ತಿಳಿಸಿದ್ದಾರೆ.
ಮುತ್ತಪ್ಪ ದೇವಾಲಯ
ಮಡಿಕೇರಿ, ಡಿ. ೫: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾ.೬ ಮತ್ತು ೭ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಪೂಜೆಯನ್ನು ಏರ್ಪಡಿಸಲಾಗಿದೆ.
ತಾ. ೬ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ಕಳಸ ಪೂಜೆಗಳು ಮತ್ತು ಸಂಜೆ ೬.೩೦ ಗಂಟೆಗೆ ಮಹಾ ಸುದರ್ಶನ ಹೋಮ ನಡೆಯಲಿದೆ.
ತಾ.೭ರಂದು ಬೆಳಿಗ್ಗೆ ೬.೩೦ ಗಂಟೆಯಿAದ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚ ಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆ, ಇತ್ಯಾದಿ ಸೇವೆಗಳು ನಡೆಯಲಿವೆ.
ಬೆಳಿಗ್ಗೆ ೯ ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವರ ಕ್ಷೇತ್ರ ಪ್ರದಕ್ಷಿಣೆ, ೧೨.೩೦ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಭಜನಾ ಕಾರ್ಯಕ್ರಮ, ೭ ಗಂಟೆಗೆ ರಂಗಪೂಜೆ, ೮ ಗಂಟೆಗೆ ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಪಲ್ಲಕ್ಕಿ ಉತ್ಸವ
ಕೂಡಿಗೆ, ಡಿ. ೫: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ಮಹಾ ರಥೋತ್ಸವದ ಮುನ್ನಾ ದಿನವಾದ ತಾ. ೬ ರಂದು (ಇಂದು) ಪಲ್ಲಕ್ಕಿ ಉತ್ಸವ ನಡೆಯಲಿದೆ.
ಬೆಳಿಗ್ಗೆ ಪುಣ್ಯಾಹ ಪಂಚಗವ್ಯಶುದ್ಧಿ ಅಂಕುರಾರ್ಪಣೆ, ಧ್ವಜಾರೋಹಣ, ಗಣಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆದು ೧೨.೩೦ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ ೭ ಗಂಟೆಗೆ ಮಹಾಪೂಜೆ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ನಡೆದ ನಂತರ ವಿದ್ಯುತ್ ಅಲಂಕೃತ ಭವ್ಯಮಂಟಪದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮೆರವಣಿಗೆ ದೇವಸ್ಥಾನದಿಂದ ಹೊರಟು ಕೂಡಿಗೆ-ಕೂಡುಮಂಗಳೂರುವರೆಗೆ ರಾಜಬೀದಿಯಲ್ಲಿ ಸಾಗಲಿದೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.
ಕೋಟೆ ಮಾರಿಯಮ್ಮ ದೇವಾಲಯದಲ್ಲಿ
ಮಡಿಕೇರಿ, ಡಿ. ೫: ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ತಾ.೭ರಂದು ನಗರದ ಕೋಟೆ ಮಾರಿಯಮ್ಮ ದೇವಾಲಯದ ನಾಗದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ೭.೩೦ ರಿಂದ ೧೧.೩೦ ಗಂಟೆಯವರೆಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ಮಂಗಳಾರತಿ, ಹಣ್ಣು ಕಾಯಿ ಪೂಜೆ, ಪ್ರಾರ್ಥನೆ ಹಾಗೂ ಮಹಾಪೂಜೆ ಇತ್ಯಾದಿ ಸೇವೆಗಳು ನಡೆಯಲಿದೆ.
ಸಿದ್ದಾಪುರ
ಸಿದ್ದಾಪುರ, ಡಿ. ೫: ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ತಾ.೭ರಂದು ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ನಂತರ ಅಭಿಷೇಕ ಪೂಜೆ ೭ ಗಂಟೆಗೆ ಅರ್ಧನಾರೀಶ್ವರ ಪೂಜೆ ೧೦:೪೫ ರಿಂದ ೧೧.೪೫ ರವರೆಗೆ ಮಹಾಮಂಗಳಾರತಿ ಹಾಗೂ ಸುಬ್ರಹ್ಮಣ್ಯ ಪೂಜೆ ನಡೆಯಲಿದೆ. ಮಧ್ಯಾಹ್ನ ೧೨:೩೦ಕ್ಕೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಮುಖ್ಯಸ್ಥ ಮಣಿ ಮಾಹಿತಿ ನೀಡಿದ್ದಾರೆ.
ಕೆದಕಲ್
ಮಡಿಕೇರಿ, ಡಿ. ೫: ಕೆದಕಲ್ ಗ್ರಾಮದ ಶ್ರೀಭದ್ರಕಾಳೇಶ್ವರಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಉತ್ಸವ ತಾ.೭ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಪ್ರಾರಂಭಗೊಳ್ಳಲಿದ್ದು, ಪಂಚಗವ್ಯ ಪ್ರಗ್ಯಾಹ, ನವಕಳಶ ಪೂಜೆ, ಸುಬ್ರಹ್ಮಣ್ಯ ದೇವರಿಗೆ ಕ್ಷೀರಾಭಿಷೇಕ, ನಾಗಕಟ್ಟೆಯಲ್ಲಿ ಷಷ್ಠಿ ಪೂಜೆ, ಮಹಾಬಲಿ ಪೀಠಕ್ಕೆ ಅಭಿಷೇಕ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಧನುಗಾಲ
*ಗೋಣಿಕೊಪ್ಪಲು, ಡಿ. ೫: ಧನುಗಾಲ ಗ್ರಾಮದ ಶ್ರೀ ಮುರುಡೇಶ್ವರ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ತಾ. ೭ರಂದು ಚಂಪಾ ಷಷ್ಠಿ ಆಚರಿಸಲಾಗುತ್ತದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಟಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ೭ ಗಂಟೆಯಿAದ ಸ್ವಾಮಿಗೆ ಅಷ್ಟೋತ್ತರ, ಅಭಿಷೇಕ ಮತ್ತಿತರ ಸೇವೆಗಳು ನಡೆಯಲಿವೆ. ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ.
ಕಕ್ಕುಂದಕಾಡು
ನಾಪೋಕ್ಲು, ಡಿ. ೫: ಇಲ್ಲಿಗೆ ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ತಾ. ೭ ರಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಬೆಳಿಗ್ಗೆ ೭ ಗಂಟೆಗೆ ಅಭಿಷೇಕ, ೧೨.೩೦ಕ್ಕೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭ ದೇವರ ಸಿರಿ ಮುಡಿ ಗಂಧ ಪ್ರಸಾದ ವಿತರಿಸಲಾಗುತ್ತದೆ.
ಹಾತೂರು
ಮಡಿಕೇರಿ, ಡಿ. ೫: ಹಾತೂರು ಶ್ರೀ ನಾಗ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಾ. ೯ ರಂದು ಷಷ್ಠಿ ಪ್ರಯುಕ್ತ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ಪೂಜೆ ನಡೆಯಲಿದೆ. ನಂತರ ತೀರ್ಥ-ಪ್ರಸಾದ ಹಾಗೂ ಅನ್ನದಾನ ನೆರವೇರಲಿದೆ.