ಶನಿವಾರಸAತೆ, ಡಿ. ೫: ಪಟ್ಟಣದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ೩ನೇ ವರ್ಷದ ಶ್ರೀಹನುಮ ಜಯಂತಿ ಹಾಗೂ ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮಗಳು ತಾ.೮ ರಂದು ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಪಟ್ಟಣವನ್ನು ಕೇಸರಿ ಬಣ್ಣದ ಬಂಟಿAಗ್ಸ್ ನಿಂದ ಅಲಂಕರಿಸಲಾಗಿದೆ.

ಅAದು ಬೆಳಿಗ್ಗೆ ೧೦ ಗಂಟೆಗೆ ತ್ಯಾಗರಾಜ ಕಾಲೋನಿಯಲ್ಲಿ ಇರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಗೋಪೂಜೆ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುವುದು.

ಸಂಜೆ ೪ ಗಂಟೆಗೆ ಶ್ರೀವಿಜಯ ವಿನಾಯಕ ದೇವಸ್ಥಾನದಲ್ಲಿ ಹೋಮ, ಮಹಾಮಂಗಳಾರತಿ ಪೂಜಾ ಕೈಂಕರ್ಯ ನೆರವೇರಲಿದೆ. ಸಂಜೆ ೫ ಗಂಟೆಯಿAದ ಶೋಭಾ ಯಾತ್ರೆ ಆರಂಭವಾಗಲಿದ್ದು, ಬೆಳ್ಳಿರಥದಲ್ಲಿ ೩ ಅಡಿ ಎತ್ತರದ ಪಂಚಲೋಹದ ಶ್ರೀವೀರಾಂಜನೇಯ ಉತ್ಸವ ಮೂರ್ತಿಯನ್ನು ಕಳ್ಳಿರಿಸಿ ನಾಸಿಕ್ ಬ್ಯಾಂಡ್, ಚಂಡೇ ವಾದ್ಯ, ವಿದ್ಯುತ್ ದೀಪಾಲಂಕಾರ, ಡಿ.ಜೆ, ಸಿಡಿಮದ್ದಿನ ಪ್ರದರ್ಶನದೊಂದಿಗೆ ಮೆರವಣಿಗೆ ನೆಡಯಲಿದ್ದು, ಬಳಿಕ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಬನ್ನಿ ಮಂಟಪದಲ್ಲಿ ಸಮಾವೇಶಗೊಳ್ಳಲಿದೆ. ರಾತ್ರಿ ೭ ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.