ಸೋಮವಾರಪೇಟೆ, ಡಿ. ೫: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ೨೦೨೨ರ ಜುಲೈನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಕೊಡಗಿನ ೬ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿ, ಸಂಶಯಾಸ್ಪದ ವ್ಯಕ್ತಿಗಳ ಮನೆಗಳಿಂದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಮಡಿಕೇರಿ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆಯಲ್ಲಿ ಶಸ್ತçಸಜ್ಜಿತ ಸಿಬ್ಬಂದಿಗಳ ಸಹಿತ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ, ಪರೋಕ್ಷ ವಾಗಿ ಸಹಕರಿಸಿರುವ, ಆರೋಪಿಗಳೊಂದಿಗೆ ನಿಕಟಸಂಪರ್ಕ ಇಟ್ಟುಕೊಂಡಿರುವ ಸಂಶಯದ ಮೇರೆ ಒಟ್ಟು ೬ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮಡಿಕೇರಿಯ ಕಾವೇರಿ ಲೇಔಟ್‌ನ ಮುಸ್ತಫಾ (ಚಿಲ್ಲಿ), ಸೋಮವಾರಪೇಟೆಯ ಹೊಸತೋಟ ನಿವಾಸಿ, ಐಗೂರು ಗ್ರಾ.ಪಂ. ಸದಸ್ಯ ಜುನೈದ್, ಆಲೇಕಟ್ಟೆ ರಸ್ತೆಯ ತೌಫೀಕ್, ತಣ್ಣೀರುಹಳ್ಳದ ನೌಷಾದ್ ಅವರುಗಳ ಮನೆಗಳ ಮೇಲೆ ಏಕಕಾಲದಲ್ಲಿ ಧಾಳಿ ನಡೆದಿದೆ. ಹೊಸತೋಟದ ಮನೆಗೆ ತನಿಖಾ ತಂಡ ತೆರಳಿದ ಸಂದರ್ಭ ಜುನೈದ್ ಸುಂಟಿಕೊಪ್ಪದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ನಂತರ ಅಧಿಕಾರಿಗಳು ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ರಫೀಕ್ ಎಂಬವರ ಮನೆಯಲ್ಲಿದ್ದ ಜುನೈದ್‌ನಿಂದ ಮಾಹಿತಿ ಸಂಗ್ರಹಿಸಿದ್ದಾರೆ.
(ಮೊದಲ ಪುಟದಿಂದ) ಇದರೊಂದಿಗೆ ಈಗಾಗಲೇ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ದಾಖಲಾಗಿರುವ, ಸದ್ಯ ತಲೆಮರೆಸಿಕೊಂಡಿರುವ ಕಲ್ಕಂದೂರಿನ ಅಬ್ದುಲ್ ರೆಹಮಾನ್ (ಅದ್ರಾಮ), ಕಾನ್ವೆಂಟ್ ಬಾಣೆಯ ಅಬ್ದುಲ್ ನಾಸೀರ್ ಅವರುಗಳ ಮನೆ ಮೇಲೂ ಎನ್‌ಐಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.
ಕಳೆದ ಒಂದು ತಿಂಗಳ ಹಿಂದೆಯೇ ಸಂಶಯಾಸ್ಪದ ವ್ಯಕ್ತಿಗಳ ಚಲನ ವಲನ, ಮನೆಗಳ ಬಗ್ಗೆ ಮಾಹಿತಿ ಪಡೆದಿದ್ದ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು, ನಿನ್ನೆ ರಾತ್ರಿ ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗಳು, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೆಳಿಗ್ಗೆ ಸಿದ್ಧರಿರುವಂತೆ ಮಾಹಿತಿ ನೀಡಿದ್ದರು. ಆದರೆ ಕಾರ್ಯಾಚರಣೆಯ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇಂದು ಬೆಳಿಗ್ಗೆ ೫.೩೦ಕ್ಕೆ ಪೊಲೀಸ್ ಠಾಣೆ ಬಳಿಯಿಂದ ನೇರವಾಗಿ ಸಂಶಯಾಸ್ಪದ ವ್ಯಕ್ತಿಗಳ ಮನೆಗೆ ಪ್ರತ್ಯೇಕ ತಂಡದೊAದಿಗೆ ತೆರಳಿದ್ದಾರೆ.
ಸೋಮವಾರಪೇಟೆ ಭಾಗದಲ್ಲಿಯೇ ಒಟ್ಟು ಆರು ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಈ ಭಾಗದಲ್ಲಿ ರಾಷ್ಟಿçÃಯ ತನಿಖಾ ದಳದ ಡಿವೈಎಸ್‌ಪಿ ಸೇರಿದಂತೆ ಒಂದು ತಂಡದಲ್ಲಿ ಶಸ್ತçಸಜ್ಜಿತ ಓರ್ವ ಸಿಬ್ಬಂದಿ ಸಹಿತ ಮೂವರು ಅಧಿಕಾರಿಗಳು, ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಯ ಈರ್ವರು ಸಿಬ್ಬಂದಿಗಳು (ಓರ್ವ ಮಹಿಳಾ ಪೇದೆ) ತಂಡದಲ್ಲಿದ್ದು, ಒಂದು ಮನೆಯಲ್ಲಿ ಸುಮಾರು ೬ ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು.
ಈ ಸಂದರ್ಭ ಶಂಕಿತ ವ್ಯಕ್ತಿಗಳು ಬಳಸುತ್ತಿದ್ದ ಮೊಬೈಲ್‌ಗಳ ಸಹಿತ ಹಳೆಯ ಮೊಬೈಲ್‌ಗಳು, ಮೆಮೊರಿ ಕಾರ್ಡ್ಗಳು ಮನೆಯಲ್ಲಿದ್ದ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಪ್ರಕರಣದ ಎಫ್‌ಐಆರ್‌ನಲ್ಲಿ ಹೆಸರು ದಾಖಲಾಗಿರುವ ಕಾನ್ವೆಂಟ್ ಬಾಣೆಯ ಅಬ್ದುಲ್ ನಾಸೀರ್ ಪತ್ನಿಯ ಮೊಬೈಲ್, ಕಲ್ಕಂದೂರಿನ ಅಬ್ದುಲ್ ರೆಹಮಾನ್‌ನ ಪೋಷಕರ ಮೊಬೈಲ್‌ಗಳ ಸಹಿತ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದರೊAದಿಗೆ ಶಂಕಿತರಿಗೆ ಎನ್‌ಐಎ ಅಧಿಕಾರಿಗಳು ನೋಟೀಸ್ ನೀಡಿದ್ದು, ತಾ. ೧೦ರಂದು ರಾಷ್ಟಿçÃಯ ತನಿಖಾ ದಳದ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಾರ್ಯಾಚರಣೆ ಸಂದರ್ಭ ಸ್ಥಳೀಯ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳನ್ನು ಕರೆದೊಯ್ದಿದ್ದ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು, ಇವರುಗಳ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ, ವರದಿ ತಯಾರಿಸಿದ್ದಾರೆ.
ಕಳೆದ ೨೦೨೩ರ ಜೂನ್ ೨೭ರಂದು ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಸೋಮವಾರಪೇಟೆಗೆ ಆಗಮಿಸಿ, ಕಾನ್ವೆಂಟ್ ಬಾಣೆಯ ಅಬ್ದುಲ್ ನಾಸಿರ್, ಕಲ್ಕಂದೂರಿನ ಅಬ್ದುಲ್ ರೆಹಮಾನ್ ಅವರುಗಳ ಮನೆ ಮೇಲೆ ಧಾಳಿ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಇದಾದ ನಂತರ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಈರ್ವರ ಪತ್ತೆಗೆ ಎನ್‌ಐಎ ವತಿಯಿಂದ ನಗದು ಬಹುಮಾನ ಘೋಷಿಸಿದ ಪೋಸ್ಟರ್‌ಗಳನ್ನೂ ಅಂಟಿಸಲಾಗಿತ್ತು. ಆದರೆ ಈರ್ವರೂ ಸಹ ಈವರೆಗೆ ಪತ್ತೆಯಾಗಿಲ್ಲ.
ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇವರುಗಳ ಪಾಲುದಾರಿಕೆ ಇದ್ದ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿತ್ತು. ಅದಾಗಿ ಒಂದೂವರೆ ವರ್ಷದ ನಂತರ ಮತ್ತೆ ಇಂದು ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೆ ಕಾರ್ಯಾಚರಣೆ ನಡೆಸಿ, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕಳೆದ ೨೦೨೨ರ ಜುಲೈ ೨೬ರಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಜುಲೈ ೨೭ರಂದು ಬೆಳ್ಳಾರೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಘಟನೆಯ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮಾತ್ರವಲ್ಲದೆ, ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಸುಳ್ಯದ ಶಾಸಕ ಅಂಗಾರ ಸೇರಿದಂತೆ ಮುಖಂಡರುಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಾದ ನಂತರ ೨೦೨೨ರ ಆಗಸ್ಟ್ ೪ರಂದು ಪ್ರಕರಣವನ್ನು ಅಂದಿನ ರಾಜ್ಯ ಸರ್ಕಾರ ಎನ್‌ಐಎಗೆ ವಹಿಸಿದ್ದು, ತನಿಖೆ ಆರಂಭಿಸಿದ ಅಧಿಕಾರಿಗಳು ಪ್ರಕರಣದಲ್ಲಿ ಈವರೆಗೆ ಒಟ್ಟು ೨೧ ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕೃತ್ಯದ ಮಾಸ್ಟರ್‌ಮೈಂಡ್ ಎನ್ನಲಾಗಿರುವ ಮಡಿಕೇರಿಯ ತುಫೈಲ್‌ನನ್ನು ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಯುಎಪಿಎ ಕಾಯ್ದೆಯಡಿ ಒಟ್ಟು ಈ ಪ್ರಕರಣದಲ್ಲಿ ೨೧ ಮಂದಿಯ ವಿರುದ್ದ ಆರೋಪಪಟ್ಟಿ ಸಲ್ಲಿಸಿರುವ ಬಗ್ಗೆ ಎನ್‌ಐಎ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ೧೯ ಆರೋಪಿಗಳನ್ನು ಬಂಧಿಸಲಾಗಿದೆ. ಜನವರಿ ೨೦ರಂದು ಸಲ್ಲಿಸಲಾದ ವರದಿಯಲ್ಲಿ ಪಿಎಫ್‌ಐ ತನ್ನ ವೈರಿಗಳ ಹತ್ಯೆ ಮಾಡಲು ‘ಹಿಟ್ ಸ್ಕಾ÷್ವಡ್’ ರಚಿಸಿ ಅದರ ಮೂಲಕ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಬಹಿರಂಗಪಡಿಸಿತ್ತು.
ಇAದು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮನೆಗಳಿಂದ ಅಗತ್ಯ ದಾಖಲೆಗಳನ್ನಷ್ಟೇ ಸಂಗ್ರಹಿಸಿದ್ದು, ಸಂಶಯಾಸ್ಪದ ವ್ಯಕ್ತಿಗಳಿಂದ ಕೆಲವೊಂದು ಮಾಹಿತಿಗಳನ್ನು ಪಡೆದಿದ್ದಾರೆ. ಯಾರನ್ನೂ ಸಹ ಅಧಿಕೃತವಾಗಿ ವಶಕ್ಕೆ ಪಡೆದಿಲ್ಲ. ಮುಂದಿನ ವಿಚಾರಣೆಯ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕರ್ನಾಟಕದ ೧೬ ಸ್ಥಳಗಳಲ್ಲಿ ಧಾಳಿ ನಡೆಸಿದ್ದು, ಇದರಲ್ಲಿ ಕೊಡಗಿನ ಆರು ಸ್ಥಳಗಳು ಸೇರಿವೆ.