ಮಡಿಕೇರಿ, ಡಿ. ೫: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಮಡಿಕೇರಿಯಲ್ಲಿ ಹಿಂದೂ ಸಂಘಟನೆಗಳಿAದ ಬೃಹತ್ ಮೆರವಣಿಗೆ ಹಾಗೂ ಜಾಗೃತಿ ಜಾಥಾ ನಡೆಯಿತು. ಬೆಳಿಗ್ಗೆ ೧೧ ಗಂಟೆಗೆ ಮಹದೇವಪೇಟೆ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಂಖ ನಾದದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಬೃಹತ್ ಮೆರವಣಿಗೆಂiÀಲ್ಲಿ ಹಿಂದೂ ಬಾಂಧವರು, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸುವ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಂದರ್ಭ ನಗರದ ಮುಖ್ಯ ಬೀದಿಗಳಲ್ಲಿ ಹಿಂದೂ ವ್ಯಾಪಾರಿಗಳು ಅಂಗಡಿ - ವಹಿವಾಟುಗಳನ್ನು ಮುಚ್ಚಿ ತಮ್ಮ ಬೆಂಬಲ ಸೂಚಿಸಿದರು. ತಿಮ್ಮಯ್ಯ ವೃತ್ತ ಸಾಗಿ ಬಂದ ಮೆರವಣಿಗೆ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡಿತು.

ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಜಿಲ್ಲೆಯಲ್ಲಿ ಬೇರೂರಿರುವ ಬಾಂಗ್ಲಾದೇಶದ ನುಸುಳುಕೋರರನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿ ದೇಶದಿಂದ ಹೊರಗಟ್ಟುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ, ಹಿಂದೂ ಪರ ಮುಖಂಡ ಮುರುಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.

ನಗರದಲ್ಲಿ ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಡೆದ ಜಾಗೃತಿ ಸಭೆಯಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಮುರುಳಿಕೃಷ್ಣ, ರಾಜಕೀಯ ಅರಾಜಕತೆಯನ್ನು ಭಯೋತ್ಪಾದಕರು ಸೃಷ್ಟಿಸಿ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದ್ದಾರೆ. ೧೯೪೭ರಿಂದಲೂ ಹಿಂದೂಗಳ ದÀಮನಕ್ಕೆ ಪ್ರಯತ್ನಗಳು ನಡೆಯತ್ತಲಿವೆ. ಭಾರತದ ನೆರವಿನಿಂದ ಬಾಂಗ್ಲ್ಲಾದೇಶ ಸ್ವಾತಂತ್ರö್ಯ ರಾಷ್ಟçವಾಗಿ ಪರಿವರ್ತನೆಯಾಯಿತು. ಬಾಂಗ್ಲಾ ವಿಮೋಚನ ಯುದ್ಧದಲ್ಲಿಯೂ ಅನೇಕ ಹಿಂದೂಗಳು ಜೀವ ಕಳೆದುಕೊಂಡಿದ್ದಾರೆ. ೩ ಕೋಟಿ ಹಿಂದೂಗಳ ಹತ್ಯೆ ಪೂರ್ವ, ಪಶ್ಚಿಮ ಪಾಕಿಸ್ತಾನದಲ್ಲಾಗಿದೆ. ಇದೀಗ ಭಾರತದ ಮೂಲನಿವಾಸಿಗಳಾದ ಹಿಂದೂಗಳ ವಿರುದ್ಧ ಬಾಂಗ್ಲಾದ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕರು ನಡೆಸುತ್ತಿರುವ ದಾಳಿಗಳನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

೧೯೭೧ರ ತನಕ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾವನ್ನು ಸ್ವ್ವಾತಂತ್ರö್ಯಗೊಳಿಸಲು ಭಾರತ ಸಹಾಯ ಮಾಡಿತ್ತು. ೧೩ ದಿನಗಳ ಕಾಲದ ಯುದ್ಧದಲ್ಲಿ ಭಾರತೀಯ ಯೋಧರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದರು. ಬಾಂಗ್ಲಾದ ಭದ್ರತೆಯಲ್ಲಿ ಭಾರತೀಯ ಸೇನೆಯ ಅಮೂಲಾಗ್ರ ಕೊಡುಗೆಯೂ ಇತ್ತು. ಇತ್ತೀಚೆಗೆ ಪ್ರಧಾನಿ ಶೇಖ್ ಹಸೀನ ಮಂಡಿಸಿದ ಮೀಸಲಾತಿ ಮಸೂದೆ ಮುಂದಿಟ್ಟುಕೊAಡು ಸರಕಾರದ ವಿರುದ್ಧ

(ಮೊದಲ ಪುಟದಿಂದ) ಪ್ರತಿಭಟಿಸಬೇಕಾದವರು ಹಿಂದೂಗಳ ಮೇಲೆ ದೌರ್ಜನ್ಯ ಮಾಡಿ ದೇವಾಲಯಗಳ ಧ್ವಂಸಗೊಳಿಸಿರುವುದು ಮತಾಂಧತೆಗೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯ ಜೊತೆಗೆ ಇಷ್ಟೆಲ್ಲ ಬೆಳವಣಿಗೆ ನಡೆದರೂ ಹಿಂದೂಗಳ ಪರ ಪ್ರಗತಿಪರರು, ಜಾತ್ಯತೀಯ ನಿಲುವಿನವರು ಧ್ವನಿ ಎತ್ತದಿರುವುದು ವಿಪರ್ಯಾಸವಾಗಿದೆ. ಹಿಂದೂ ಸಮಾಜದ ರಕ್ಷಣೆಗೆ ಹಿಂದೂಗಳೇ ಮುಂದಾಗಬೇಕು. ಭಾರತವನ್ನು ಮಟ್ಟಹಾಕಲು ಪಾಶ್ಚಮಾತ್ಯ ಹಾಗೂ ಇಸ್ಲಾಮಿಕ್ ರಾಷ್ಟçಗಳು ಕುತಂತ್ರ ನಡೆಸುತ್ತಿವೆ. ಇದರೆಲ್ಲದರ ಕುರಿತು ಭಾರತದ ಹಿಂದೂಗಳು ಜಾಗೃತಗೊಳ್ಳಬೇಕು. ಹಿಂದೂ ಸಮಾಜ ಒಗ್ಗಟ್ಟು ಕಾಯ್ದುಕೊಂಡು ನಿಲ್ಲಬೇಕು ಎಂದು ಕರೆ ನೀಡಿದರು.

ವಿಷಕಾರಿ ಹಾವಿಗೆ ಹಾಲೆರೆಯುತ್ತಿದ್ದೇವೆ

ಬಾಂಗ್ಲಾದಿAದ ಬಂದ ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡುವ ಮೂಲಕ ವಿಷಕಾರಿ ಹಾವಿಗೆ ಹಾಲೆರೆಯುವ ಕೆಲಸ ಮಾಡುತ್ತಿದ್ದೇವೆ ಎಂದು ಮುರುಳಿಕೃಷ್ಣ ಹಸಂತಡ್ಕ ಹೇಳಿದರು.

ಕೊಡಗಿನ ಎಸ್ಟೇಟ್‌ಗಳಲ್ಲಿ ಅಸ್ಸಾಂ ಹೆಸರಿನಲ್ಲಿ ಬಂದಿರುವ ಬಾಂಗ್ಲಾದೇಶಿಗರ ಬಗ್ಗೆ ಹಿಂದೂಗಳು ಯೋಚನೆ ಮಾಡಬೇಕು. ಹಿಂದೂ ಸಮಾಜ ಜಾಗೃತಿಗೊಳ್ಳದೆ ನಿರ್ಲಕ್ಷö್ಯತೆ ವಹಿಸಿದರೆ ಮುಂದಿನ ದಿನಗಳಲ್ಲಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಅಮಾನವೀಯ ಸಂಘರ್ಷಗಳು ಕೊಡಗು ಜಿಲ್ಲೆಯಲ್ಲಿಯೂ ನಡೆಯಬಹುದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರೆದರೆ ಕೊಡಗಿನಲ್ಲಿರುವ ಪ್ರತಿಯೊಬ್ಬ ಬಾಂಗ್ಲಾದವರನ್ನು ಹೊರಹಾಕುವ ಸಂಕಲ್ಪವನ್ನು ಮಾಡಬೇಕು.

ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ನಮ್ಮ ಕಣ್ಣೆದುರು ಇರುವ ಉದಾಹರಣೆಯಾಗಿದ್ದು, ನಾವು ವಿಷಕಾರಿ ಹಾವಿಗೆ ಹಾಲೆರೆದು ಪೋಷಿಸಿದರೆ ಭವಿಷ್ಯದಲ್ಲಿ ಸಮಸ್ಯೆಗೆ ತುತ್ತಾಗುವುದು ನಿಶ್ಚಿತ. ಭಾರತ ಶಾಸ್ತç ಹಾಗೂ ಶಸ್ತç ಎರಡನ್ನೂ ಆರಾಧನೆ ಮಾಡುತ್ತ ಬಂದಿದೆ. ಸ್ವಾತಂತ್ರö್ಯ ಭಾರತದ ಹಿಂದಿನ ಕ್ರಾಂತಿ ಮರೆಯಬೇಡಿ. ಹಿಂದೂಗಳಿಗೆ ಅನ್ಯಾಯವಾದರೆ ಹಿಂದೂ ಸಮಾಜ ಸುಮ್ಮನೆ ಇರಬಾರದು. ಬಾಂಗ್ಲಾದ ನುಸುಳುಕೋರರನ್ನು ಪತ್ತೆಹಚ್ಚದಿದ್ದರೆ ಹಿಂದೂಗಳು ಕೆರಳಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾದಲ್ಲಿ ಹಿಂದೂ ಸಮಾಜದ ಪರ ಧ್ವನಿ ಎತ್ತಿದ ಇಸ್ಕಾನ್ ಪ್ರಮುಖ ಚಿನ್ಮಯಿ ಕೃಷ್ಣದಾಸ್ ಅವರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದಲ್ಲಿ ಭೂಕಂಪ, ಪ್ರವಾಹ ಸಂದರ್ಭ ಅನ್ನ, ನೀರು ನೀಡಿದ ಚಿನ್ಮಯಿ ಕೃಷ್ಣದಾಸ್ ಅವರನ್ನು ಅಮಾನವೀಯವಾಗಿ ಬಂಧಿಸಿರುವುದು ಸರಿಯಲ್ಲ ಎಂದರು.

ಭಾರತ ಸರಕಾರ ನೆರವಾಗಲಿ

ಹಿಂದೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುಕ್ಕೇರ ಅಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಹಿಂದೆ ಬಾಂಗ್ಲಾ ಕೂಡ ಅಖಂಡ ಭಾರತದ ಭಾಗವಾಗಿತ್ತು. ಬಾಂಗ್ಲಾದ ಸೃಷ್ಟಿಗೆ ಭಾರತ ಕಾರಣವಾಗಿದ್ದು, ಇಂದು ಹಿಂದೂಗಳ ಮೇಲೆ ದಾಳಿ, ದೇವಾಲಯಗಳ ಧ್ವಂಸ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಲ್ಲಿನ ಹಿಂದೂಗಳ ನೋವು ಕೇಳುವವರಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದ್ದು, ಒಕ್ಕಲೆಬ್ಬಿಸಲು ಪ್ರಯತ್ನಗಳು ನಡೆಯುತ್ತಿವೆ. ಬಾಂಗ್ಲಾದಲ್ಲಿರುವ ಹಿಂದೂಗಳು ಭಾರತದ ನೆರವು ಬಯಸುತ್ತಿದ್ದಾರೆ. ರಕ್ಷಣೆಗೆ ಭಾರತ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ದೇಶಕ್ಕೆ ೪ ಕೋಟಿ ಬಾಂಗ್ಲಾ ನುಸುಳುಕೋರರು ಬಂದಿದ್ದಾರೆ. ಬಾಂಗ್ಲಾದಲ್ಲಿ ೧.೫೦ ಕೋಟಿ ಹಿಂದೂಗಳು ಜೀವಭಯದಲ್ಲಿದ್ದಾರೆ. ನಮ್ಮ ಬೇಡಿಕೆ ಮೂಲಕ ಕೇಂದ್ರ ಸರಕಾರವನ್ನು ಜಾಗೃತಿಗೊಳಿಸಿ ವಿಶ್ವಸಂಸ್ಥೆ ಮೂಲಕ ಬಾಂಗ್ಲಾದಲ್ಲಿರುವ ಹಿಂದೂಗಳಿಗೆ ಸಹಾಯ ದೊರೆಯಬೇಕು. ಪ್ಯಾಲಿಸ್ಟೆöÊನಿಯರಿಗಾಗಿ ಒಂದಾಗುವ ಜನ ಹಿಂದೂಗಳ ನೋವಿಗೆ ಧ್ವನಿಯಾಗದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅಜಿತ್, ಇಂತವರು ಪರೋಕ್ಷವಾಗಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರ್.ಎಸ್.ಎಸ್. ಪ್ರಮುಖ ಚೆಕ್ಕೇರ ಮನು ಕಾವೇರಪ್ಪ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಸುರೇಶ್ ಮುತ್ತಪ್ಪ, ಪ್ರಮುಖರಾದ ಮಹೇಶ್ ಜೈನಿ, ಸಂಪತ್ ಕುಮಾರ್, ಉಮೇಶ್ ಸುಬ್ರಮಣಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಎಸ್.ಜಿ. ಮೇದಪ್ಪ, ಮಂಡೆಪAಡ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಉಪಾಧ್ಯಕ್ಷರುಗಳಾದ ಕುಂಞAಡ ಅರುಣ್ ಭೀಮಯ್ಯ, ಮನುಮಹೇಶ್, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರುಗಳಾದ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಪಳೆಯಂಡ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಮಾಚಿಮಾಡ ಸುವಿನ್ ಗಣಪತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಶ್ವೇತಾ ಪ್ರಶಾಂತ್, ಸಬಿತಾ, ಅನಿತಾ ಪೂವಯ್ಯ, ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.