ವೀರಾಜಪೇಟೆ, ಡಿ. ೫: ದೇಶದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ನವ ಮಾಧ್ಯಮಗಳು ಅತೀ ಮುಖ್ಯವಾಗಿವೆ ಎಂದು ವೀರಾಜಪೇಟೆ ಬಿಂಬ ಮಾಧ್ಯಮ ಮನೆಯ ಉಷಾ ಪ್ರೀತಮ್ ಹೇಳಿದರು.
ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೨೬ನೇ ಮಾಸಿಕ ತತ್ತ÷್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ‘ಸಮಾಜದ ಮೇಲೆ ನವ ಮಾಧ್ಯಮಗಳ ಪ್ರಭಾವ' ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದು, ನವ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದೆ. ಯಾವುದೇ ವಿಚಾರಗಳನ್ನು ಜಾಲತಾಣದಲ್ಲಿ ಹರಿಬಿಡುವ ಮುನ್ನ ವಿಚಾರದಲ್ಲಿ ಸತ್ಯಾಂಶವಿದೆಯೇ ಎಂಬ ಬಗ್ಗೆ ಯೋಚಿಸಬೇಕು ಎಂದು ಹೇಳಿದ ಉಷಾ ಪ್ರೀತಮ್ ಇಂದು ಜಗತ್ತಿನಲ್ಲಿ ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳುವಂತಹ ಸೌಲಭ್ಯಗಳು ನಮ್ಮ ದೇಶದಲ್ಲಿವೆ ಎಂದರು. ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ. ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಲ್ಲಿ ಸುದ್ಧಿ ಮಾಧ್ಯಮಗಳ ಕೊಡುಗೆ ಅಪಾರ ಎಂದರು.
ಹೊಂಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉತ್ತಮ ಸಮಾಜ ನಿರ್ಮಾಣವಾಗಲು ಮಾಧ್ಯಮಗಳ ಮಾತ್ರ ಬಹುಮುಖ್ಯ ಎಂದರು. ವಿದ್ಯಾರ್ಥಿ ಸಂಧ್ಯಾ ಸ್ವಾಗತಿಸಿದರು, ಜ್ಞಾನಲತ ನಿರೂಪಿಸಿ, ವರ್ಷಿಣಿ ವಂದಿಸಿದರು.