ಮಡಿಕೇರಿ, ಡಿ. ೫: ಕಾಫಿ ಕೃಷಿರಂಗದ ಮೇಲೆ ಪರಿಣಾಮ ಬೀರುವ ಸರ್ಫೇಸಿ ಕಾಯಿದೆ ಸಂಬAಧಿತ ಲೋಕಸಭೆಯಲ್ಲಿ ಗಮನ ಸೆಳೆದು ಕಾಫಿ ಕೃಷಿಯು ಸರ್ಫೇಸಿ ಕಾಯಿದೆಯಡಿ ಬರುವುದಿಲ್ಲ ಎಂಬ ನಿರ್ಣಾಯಕ ಉತ್ತರಕ್ಕೆ ಕಾರಣರಾದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದ ಬಗ್ಗೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟ ಹರ್ಷ ವ್ಯಕ್ತಪಡಿಸಿದೆ. ಈಗಾಗಲೇ ತೀವ್ರ ನೈಸರ್ಗಿಕ ವಿಕೋಪಗಳು, ನಿರಂತರ ಬೆಳೆ ವೈಫಲ್ಯಗಳು ಮತ್ತು ಕಡಿಮೆ ಸರಕು ಬೆಲೆ ಸಂಕಷ್ಟ ಎದುರಿಸುತ್ತಿರುವ ಕಾಫಿ ಕೃಷಿಕರ ಮೇಲೆ ಸರ್ಫೇಸಿ ಕಾಯಿದೆಯು ಮತ್ತೊಂದು ಮಾನಸಿಕ, ಆರ್ಥಿಕ ಹೊಡೆತದಂತಿತ್ತು, ಕಾಫಿ ಕೃಷಿಕರು ಬ್ಯಾಂಕ್‌ನಲ್ಲಿ ಮಾಡಿರುವ ಸಾಲದ ವಸೂಲಾತಿಗೆ ಸರ್ಫೇಸಿ ಕಾಯಿದೆ ಬಳಸಿಕೊಂಡು ಸಾಲಗಾರ ಕೃಷಿಕನ ಕಾಫಿ ತೋಟವನ್ನು ಬ್ಯಾಂಕ್‌ಗಳು ಜಪ್ತಿ ಮಾಡುವ ಮೂಲಕ ಕೃಷಿಕರ ಆತಂಕಕ್ಕೆ ಕಾರಣವಾಗಿತ್ತು. ಕಾಯಿದೆಯನ್ವಯ ಬ್ಯಾಂಕಿAಗ್ ವಲಯವು ಜಾರಿಗೊಳಿಸುತ್ತಿದ್ದ ಹಿನೆÀ್ನಲೆಯಲ್ಲಿ ಅನೇಕ ಕಾಫಿ ಬೆಳೆಗಾರರು ತಮ್ಮ ಅಮೂಲ್ಯ ಕಾಫಿ ತೋಟಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು.
ಸಂಸತ್ತಿನ ಅಧಿವೇಶನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆಯುವ ಪ್ರಶ್ನೆಯಾಗಿದ್ದ ಕಾಫಿ ಕೃಷಿಯು ಸರ್ಫೇಸಿ ಕಾಯಿದೆಯಡಿ ಬರುತ್ತದೆಯೇ ಎಂಬ ಗಮನ ಸೆಳೆಯುವ ಪ್ರಶ್ನೆಗೆ
(ಮೊದಲ ಪುಟದಿಂದ) ಕಾಫಿ ಕೃಷಿ ಸರ್ಫೇಸಿ ಕಾಯಿದೆಯಡಿ ಬರುವುದಿಲ್ಲ ಎಂಬ ಸ್ಪಷ್ಟ ಉತ್ತರವನ್ನೂ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ನೀಡಿದ್ದಾರೆ.
ಈ ಸ್ಪಷ್ಟ ಉತ್ತರದ ಮೂಲಕ ಕಾಫಿ ಬೆಳೆಗಾರರು ಸರ್ಫೇಸಿ ಕಾಯಿದೆಯಿಂದ ಎದುರಿಸುತ್ತಿದ್ದ ಮಾನಸಿಕ ಮತ್ತು ಆರ್ಥಿಕ ಒತ್ತಡದ ಸಮಸ್ಯೆಗಳಿಂದ ದೂರವಾಗಲಿದ್ದಾರೆ. ಈ ಉತ್ತರವು ಕಾಫಿ ಕೃಷಿಕರಿಗೆ ಕಾನೂನಿನ ರಕ್ಷಣೆ ನೀಡಿದಂತಾಗಿದೆ ಎಂದು ಅPಂ ಅಧ್ಯಕ್ಷ ಎ. ನಂದಾ ಬೆಳ್ಯಪ್ಪ ಹಾಗೂ ಏPಂ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್ ಹೇಳಿದ್ದಾರೆ.
ಕಾಫಿ ಕೃಷಿಕರಿಗೆ ಮುಂದಿನ ದಿನಗಳಲ್ಲಿ ಸರ್ಫೇಸಿ ಕಾಯಿದೆಯನ್ನು ಬಳಸಿಕೊಂಡು ಅನಗತ್ಯವಾಗಿ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಬೆಳೆಗಾರ ಸಂಘಟನೆಗಳು ಎಚ್ಚರಿಸಿದೆ.