ಮಡಿಕೇರಿ, ಡಿ. ೬: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಮಹಾಮಾತೆ ಶ್ರೀ ಶಾರದಾದೇವಿಯವರ ೧೭೨ನೆ ಜನ್ಮದಿನವನ್ನು ತಾ. ೨೨ ರಂದು ಆಚರಿಸಲಾಗುವುದು. ಅಂದು ಬೆಳಿಗ್ಗೆ ೫.೩೦ಕ್ಕೆ ಮಂಗಳಾರತಿ ಹಾಗೂ ಉಷಾಕೀರ್ತನೆ ನೆರವೇರಲಿದೆ. ೭.೩೦ಕ್ಕೆ ವಿಶೇಷ ಪೂಜೆ, ೯.೩೦ಕ್ಕೆ ವೇದ ಪಾರಾಯಣ ಮತ್ತು ಭಜನೆ, ೧೦.೩೦ಕ್ಕೆ ಹೋಮ, ೧೧.೧೫ಕ್ಕೆ ಪ್ರವಚನ, ೧೨.೧೫ಕ್ಕೆ ಭಜನೆ, ೧೨.೪೫ಕ್ಕೆ ಮಹಾಮಂಗಳಾರತಿ ಮತ್ತು ಪುಷ್ಪಾಂಜಲಿ ಹಾಗೂ ೧ ಗಂಟೆಗೆ ಭೋಜನ ಪ್ರಸಾದ ನೆರವೇರಲಿದೆ. ಸಂಜೆ ೬.೩೦ಕ್ಕೆ ಆರತಿ ಮತ್ತು ವಿಶೇಷ ಭಜನೆ ನಡೆಯಲಿದೆ.