ಮಡಿಕೇರಿ, ಜ. ೯: ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದ ಸಂದರ್ಭ ಜಿಲ್ಲೆಯ ಎರಡು ಜಾತಿಯ ಮಧ್ಯೆ ವಸ್ತç ಸಂಹಿತೆ ಕುರಿತು ಉಂಟಾದ ಕಲಹದಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಸೂಕ್ಷö್ಮತೆಯಿಂದ ಇರುವ ಸಂದರ್ಭದಲ್ಲಿ ಸಿ.ಎನ್.ಸಿ ಸಂಘಟನೆಯ ಎನ್.ಯು. ನಾಚಪ್ಪ ಹಾಗೂ ಅವರ ಸಹಚರರಿಂದ ಜಿಲ್ಲೆಯಲ್ಲಿ ಗೌಡರು ಮತ್ತು ಕೊಡವರ ಜಾತಿಗಳ ಮಧ್ಯೆ ಕಿಚ್ಚು ಹಚ್ಚುವ ಪ್ರಯತ್ನಗಳು ಮುಂದುವರಿಯುತ್ತಿದೆ ಎಂದು ಚೆಟ್ಟಳ್ಳಿ ಚೇರಳಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕೆಡಿಸುತ್ತಿರುವ ಸಿ.ಎನ್.ಸಿ ಸಂಘಟನೆಯ ಕಾರ್ಯಕರ್ತರಾದ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಕಿರಿಯಮಾಡ ಶರೀನ್, ಅಜ್ಜಿಕುಟ್ಟಿರ ಲೋಕೇಶ, ಮಚ್ಚಮಾಡ ರಂಜಿ ಎಂಬ ವ್ಯಕ್ತಿಗಳು ತಾ. ೬ ರಂದು ಪೊನ್ನಂಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೊಡಗಿನ ಗೌಡರ ಅವಹೇಳನ ಮಾಡಿದ್ದಾರೆ.

ಈ ಹಿಂದೆ ತಾ. ೨೮.೧೨.೨೦೨೪ ರಂದು ಮಾಡಿದ ನಾಚಪ್ಪ ಅವರ ಪ್ರಚೋದನಾಕಾರಿ ಸಂದೇಶದ ವಿರುದ್ಧ ಈಗಾಗಲೇ ದೂರು ಸಲ್ಲಿಸಿದ್ದು, ಇನ್ನೂ ಕ್ರಮಕ್ಕೆ ಬಾಕಿ ಇದೆ. ಆದರೆ ಮತ್ತೆ ಜ.೭ ರಂದು ಇನ್ನೊಂದು ಪ್ರಚೋದನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ನಾಚಪ್ಪ ನೀಡಿದ್ದು, ಇವರ ಇಂತಹ ಹೇಳಿಕೆಗಳಿಂದ ಕೊಡಗಿನ ಗೌಡ ಜನಾಂಗದವರು ಕುಪಿತರಾಗಿದ್ದು, ತೀವ್ರ ತರಹದ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಗೌಡ ಜನಾಂಗದವರು ಜಿಲ್ಲಾಡಳಿತ ಮತ್ತು ಕೊಡಗು ಜಿಲ್ಲಾ ಪೊಲೀಸ್ ನೀಡಿದ ಕಾನೂನು ಹಾಗೂ ಶಾಂತಿ ಕಾಪಾಡುವ ಕರೆಗೆ ಸೌಮ್ಯವಾಗಿ ಸ್ಪಂದಿಸಿದ್ದಾರೆ.

ನಾವು ಗೌಡ ಜನಾಂಗದವರು ಎಲ್ಲರೂ ಸಮಾನತೆಯಿಂದ ಇರುವವರು. ಕಟ್ಟೆಮಾಡು ಮಹಾಮೃತ್ಯುಂಜಯ ಶ್ರೀ ಕ್ಷೇತ್ರವನ್ನು ಆ ಗ್ರಾಮಸ್ಥರೇ ಕಷ್ಟಪಟ್ಟು ಕಟ್ಟಿದಂತಹ ಒಂದು ಕ್ಷೇತ್ರ. ಹಾಗಾಗಿ ಮೂರನೇಯವರು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಇಲ್ಲಿ ಜಿಲ್ಲಾಡಳಿತ ಯಾವ ಕಾನೂನು ಕ್ರಮವನ್ನು ಕೈಗೊಳ್ಳುವುದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ.

ಈ ಕ್ಷೇತ್ರದ ವಿಷಯವನ್ನು ನೆಪಮಾಡಿಕೊಂಡು ಗೌಡ ಜನಾಂಗವನ್ನು ದೂಷಣೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಕೋವಿ ವಿಷಯಕ್ಕೆ ಸಂಬAಧಿಸಿದAತೆ ಹಾಗೂ ಸೈನಿಕರ ನಿಂದನೆಗೆ ಸಂಬAಧಪಟ್ಟAತೆ ಪ್ರತಿಯೊಂದು ವಿಷಯಗಳಲ್ಲಿ ಗೌಡ ಜನಾಂಗವನ್ನು ದೂಷಣೆ ಮಾಡುವುದು ಖಂಡನೀಯ. ಕೊಡಗಿನಲ್ಲಿ ವಿಷ ಬೀಜ ಬಿತ್ತಲು ಪ್ರಚೋದನೆ ನೀಡುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಗಡಿಪಾರು ಮಾಡಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಗೌಡ ಸಂಘದ ಉಪ ಖಜಾಂಚಿ ಪೇರಿಯನ ಉದಯ ಮಾತನಾಡಿ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಕಟ್ಟುಪಾಡುಗಳಿಗೂ ನಮಗೂ ಯಾವುದೇ ಸಂಬAಧವಿಲ್ಲ, ಗ್ರಾಮಸ್ಥರೆಲ್ಲರು ಸೇರಿ ಮಾಡಿದ ಬೈಲಾದ ಪ್ರಕಾರ ಎಲ್ಲವೂ ನಡೆಯುತ್ತಿದೆ. ಆದರೆ ಇಲ್ಲಿನ ವಿಚಾರವನ್ನು ಮುಂದಿಟ್ಟುಕೊAಡು ಗೌಡರನ್ನು ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲವೆಂದರು.

ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜಾತಿ ಜನಾಂಗದವರು ಒಗ್ಗಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸಂಘಟನೆಯೊAದು ಪ್ರಚೋದನೆ ನೀಡುತ್ತಾ ಒಡಕು ಮೂಡಿಸುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೊಸಮನೆ ಟಿ.ಪೂವಯ್ಯ, ಕಾರ್ಯದರ್ಶಿ ಆಜೀರ ಧನಂಜಯ, ಉಪ ಕಾರ್ಯದರ್ಶಿ ಮರದಾಳು ಜನಾರ್ಧನ ಹಾಗೂ ಖಜಾಂಚಿ ಮುಕ್ಕಾಟಿ ಪಳಂಗಪ್ಪ ಉಪಸ್ಥಿತರಿದ್ದರು.