ಕುಶಾಲನಗರ, ಜ. ೯: ಕುಶಾಲನಗರ ಸಮೀಪ ಅತ್ತೂರು ಮೀಸಲು ಅರಣ್ಯದಲ್ಲಿ ಹಲವು ತಿಂಗಳಿAದ ಸತ್ತು ಬಿದ್ದು ಕೊಳೆತು ಹೋಗಿರುವ ಕಾಡಾನೆಯ ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಶಕಿ’್ತಯಲ್ಲಿ ಘಟನೆ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ಅವರು ವನ್ಯಜೀವಿ ತಜ್ಞರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಯ ಸಾವಿಗೆ ಕಾರಣ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವುದಾಗಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಮೃತಪಟ್ಟ ಆನೆಯ ಕಾಲಿಗೆ ತೀವ್ರ ಏಟು ಉಂಟಾಗಿ ಇದರಿಂದ ಕುಸಿದು ಬಿದ್ದ ಆನೆ ಸಾವಿಗೀಡಾಗಿರುವ ಸಾಧ್ಯತೆ ಇರುವುದಾಗಿ ಅವರು ತಿಳಿಸಿದ್ದಾರೆ. ಸಂಬAಧಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಇಲಾಖೆ ನಿಯಮಗಳ ಪ್ರಕಾರ ನೋಟೀಸ್ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅತ್ತೂರು ಅರಣ್ಯದ ಕೆರೆ ಬಳಿ ಈ ಆನೆ ಕಾಲಿಗೆ ತೀವ್ರ ಏಟು ಉಂಟಾಗಿ ಬಳಲುತ್ತಿರುವ ವಿಷಯ ‘ಶಕ್ತಿ’ಯಲ್ಲಿ ಪ್ರಕಟಗೊಂಡರೂ ಇಲಾಖೆ ವತಿಯಿಂದ ಆನೆಗೆ ಚಿಕಿತ್ಸೆ ನೀಡಲು ಅಥವಾ ಗಾಯ ಗೊಂಡ ಆನೆಯನ್ನು ಶಿಬಿರಕ್ಕೆ ಸೇರಿಸಿ ಸಂರಕ್ಷಿಸಲು ವಿಫಲರಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಫ್‌ಓ ಭಾಸ್ಕರ್, ಹಾರಂಗಿ ಹಿನ್ನೀರಿನ ಪ್ರಮಾಣ ಏರಿಕೆ ಇದ್ದ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.