ಮಡಿಕೇರಿ, ಜ. ೯: ಕಾಪ್ಸ್ ಶಾಲಾ ವಿದ್ಯಾರ್ಥಿ ನೀಲ್ ಕುಶಾಲಪ್ಪ ಗಿನ್ನಿಸ್ ವರ್ಲ್ಡ್ ಆಫ್ ರೆಕಾರ್ಡ್ಸ್ ಎರಡು ವಿಭಾಗಗಳಲ್ಲಿ ಮೂರು ದಾಖಲೆ ಮೂಲಕ ಕೊಡಗಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.

೨೦೨೧ ರಲ್ಲಿ ಒಂದು ನಿಮಿಷದಲ್ಲಿ ಅತ್ಯಧಿಕ ಜಂಪಿAಗ್ ಜ್ಯಾಕ್ಸ್ ಮೂಲಕ ಅತ್ಯಧಿಕ ಜಂಪಿAಗ್ ಜ್ಯಾಕ್ಸ್ ದಾಖಲೆ ಮಾಡಿದ್ದ ನೀಲ್, ನವೆಂಬರ್ ೬ ರಂದು ಮತ್ತೆ ನೀಲ್ ಕುಶಾಲಪ್ಪ ೧೩೬ ಜಂಪಿAಗ್ ಜ್ಯಾಕ್ಸ್ ಮೂಲಕ ಚಾಂಪಿಯನ್ ಪಟ್ಟಕ್ಕೇರಿದ್ದಾನೆ. ಮತ್ತೊಮ್ಮೆ ಡಿಸೆಂಬರ್ ೨೧ ರಂದು ವರ್ಚುವಲ್ ಮೆಡಿಟೇಶನ್ ತರಗತಿಗೆ ಹಾಜರಾದ ವಿದ್ಯಾರ್ಥಿ ಎಂಬ ವಿಶ್ವದಾಖಲೆ ಮಾಡಿದ್ದಾನೆ.