ಕಣಿವೆ, ಜ. ೯: ಕಾಡಾನೆಯೊಂದು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಹಣ್ಣುಗಳನ್ನು ತಿಂದು ನಾಶಗೊಳಿಸಿದ ಘಟನೆ ಹೆರೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರಶೇಖರ್ ಎಂಬವರ ತೋಟದಲ್ಲಿ ಸಂಚರಿಸಿರುವ ಕಾಡಾನೆ ಕಟಾವಿಗೆ ಸಿದ್ಧವಿದ್ದ ಕಾಫಿ ಹಣ್ಣುಗಳನ್ನು ತಿಂದು ತೆರಳಿದೆ. ಜೊತೆಗೆ ಕಾಡಾನೆ ಸಂಚರಿಸಿರುವ ಮಾರ್ಗದಲ್ಲಿ ೨೦ಕ್ಕೂ ಹೆಚ್ಚಿನ ಕಾಫಿ ಗಿಡಗಳು ನೆಲಕಚ್ಚಿರುವ ಬಗ್ಗೆ ಚಂದ್ರಶೇಖರ್ ‘ಶಕ್ತಿ'ಯೊಂದಿಗೆ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಮಳೆಗಾಲದ ಅವಧಿಯಲ್ಲಿ ಅಡಿಕೆ ತೋಟಕ್ಕೂ ದಾಳಿಯಿಟ್ಟ ಕಾಡಾನೆ ಫಸಲಿಗೆ ಬಂದಿದ್ದ ಅಪಾರ ಅಡಿಕೆ ಮರಗಳನ್ನು ಉರುಳಿಸಿತ್ತು. ಈ ಸಂಬAಧ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ವರ್ಷ ಕಳೆಯುತ್ತಾ ಬಂದರೂ ಅರಣ್ಯ ಇಲಾಖೆಯಿಂದ ಪರಿಹಾರ ದೊರೆತ್ತಿಲ್ಲ ಎಂದು ಚಂದ್ರಶೇಖರ್ ದೂರಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅರಣ್ಯಾಧಿಕಾರಿಗಳ ಕಚೇರಿ ಬಳಿ ನೊಂದ ಬೆಳೆಗಾರರೆಲ್ಲಾ ಬಂದು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.