ವೀರಾಜಪೇಟೆ, ಜ. ೯: ವೀರಾಜಪೇಟೆ-ಪೊನ್ನಂಪೇಟೆ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ನ ೨೦೨೫-೩೦ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಮ್ಮತ್ತಿ ನಾಡು ಸಾಮಾನ್ಯ ಕ್ಷೇತ್ರದಿಂದ ಕೆ.ಪಿ. ನಾಗರಾಜು, ವೀರಾಜಪೇಟೆ ನಾಡು ಸಾಮಾನ್ಯ ಕ್ಷೇತ್ರದಿಂದ ಬೊಳ್ಯಪಂಡ ಜೆ. ಬೋಪಣ್ಣ, ಪಟ್ರಪಂಡ ಎಂ. ಕರುಂಬಯ್ಯ, ಪೊನ್ನಂಪೇಟೆ ನಾಡು ಸಾಮಾನ್ಯ ಕ್ಷೇತ್ರದಿಂದ ವಾಟೇರಿರ ಎ. ಅಪ್ಪಚ್ಚು, ದಯಾನಂದ ಪಿ.ಬಿ., ಶ್ರೀಮಂಗಲ ನಾಡು ಸಾಮಾನ್ಯ ಕೇತ್ರದಿಂದ ಬೊಟ್ಟಂಗಡ ಬಿ. ಮುತ್ತಪ್ಪ, ಬೊಜ್ಜಂಗಡ ಪಿ. ಗಣೇಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗೋಪಾಲ ರಾಜ್, ಪರಿಶಿಷ್ಟ ಪಂಗಡ ಕೇತ್ರದಿಂದ ಕೆ.ಬಿ. ಪ್ರತಾಪ್, ಮಹಿಳಾ ಕ್ಷೇತ್ರದಿಂದ ಪೊರುಕೊಂಡ ಬಿ ಸವಿತ, ಚೇರಂಡ ಎಂ. ಕಾವೇರಮ್ಮ, ಹಿಂದುಳಿದ ವರ್ಗ ಪ್ರವರ್ಗ (ಎ) ಕೇತ್ರದಿಂದ ಬಾನಂಡ ಕೆ. ಅಶೋಕ್ ಕುಮಾರ್, ಹಿಂದುಳಿದ ವರ್ಗ ಪ್ರವರ್ಗ (ಬಿ) ಮಾಚೆಟ್ಟಿರ ಕೆ. ಮಂದಣ್ಣ, ಸಾಲಗಾರರಲ್ಲದ ಕ್ಷೇತ್ರದಿಂದ ಕೇಳಪಂಡ ವಿಶ್ವನಾಥ್ ಅವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪಿ.ಬಿ. ಮೋಹನ್ ಕಾರ್ಯ ನಿರ್ವಹಿಸಿದರು.