ಮಡಿಕೇರಿ, ಜ. ೯: ಸ್ವಾತಂತ್ರö್ಯ ಪೂರ್ವ ನಾವು ಬ್ರಿಟಿಷರ ಗುಲಾಮ ರಾಗಿದ್ದೆವು. ಆದರೆ ಇದೀಗ ದಲ್ಲಾಳಿ ಹಾಗೂ ಅಧಿಕಾರಿಗಳ ಗುಲಾಮ ರಾಗಿರುವಂತೆ ಭಾಸವಾಗುತ್ತಿದೆ. ರಾಜ್ಯದ ಹಾಗೂ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿ ಕೆಲ ಅಧಿಕಾರಿಗಳು ಇವರುಗಳೊಂದಿಗೆ ಶಾಮೀಲಾಗಿ ದುಡ್ಡು ಮಾಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಎಸ್. ಕಟ್ಟಿ ಮಂದಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲಿ ದಲ್ಲಾಳಿಗಳು ಇಲ್ಲದೇ ಜನರ ಕೆಲಸವೇ ಆಗುವುದಿಲ್ಲ ಎಂಬAತಾಗಿದೆ. ಸಾರ್ವಜನಿಕರಿಂದ ಲಂಚ ಪಡೆದ ನಂತರವಷ್ಟೆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ವಾರವಷ್ಟೆ ವೀರಾಜಪೇಟೆ ತಹಶೀಲ್ದಾರರು, ಮಧ್ಯವರ್ತಿಗಳಿಗೆ ಕಡಿವಾಣ ಹಾಕುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದನ್ನು ಅವರು ಕಾರ್ಯಗತಗೊಳಿಸಬೇಕೆಂದರು. ದಲ್ಲಾಳಿಗಳ ಮೇಲೆ ನಿಗಾವಹಿಸಲು ಸರಕಾರಿ ಕಚೇರಿಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಆ ಮೂಲಕ ಅವರುಗಳ ಚಲನ-ವಲನದ ಮೇಲೂ ನಿಗಾ ವಹಿಸುವಂತಾಗಬೇಕೆAದರು.
ಆರ್.ಟಿ.ಸಿ.ಯಲ್ಲಿ ರೈತರ ಹೆಸರು ಶಾಶ್ವತವಾಗಿರುವಂತೆ ಒತ್ತಾಯ
ಇತರ ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಹಲವಾರು ಬೆಳೆಗಳನ್ನು ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆಯುತ್ತಾರೆ. ಈ ಕಾರಣದಿಂದ ರೈತರ ಪಹಣಿಯ ೯ನೇ ಕಾಲಂನಲ್ಲಿ ರೈತರ ಹೆಸರನ್ನು ತೆಗೆಯುವುದು ಹಾಗೂ ಮತ್ತೇ ಸೇರಿಸುವುದು ಸಮಂಜಸ. ಆದರೆ ಕೊಡಗಿನಲ್ಲಿ ಶಾಶ್ವತವಾಗಿ ಕಾಫಿ, ಭತ್ತವನ್ನು ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವುದರಿಂದ ಈ ಕ್ರಮ ನಮ್ಮ ಜಿಲ್ಲೆಗೆ ಸರಿಯಲ್ಲ. ಪಹಣಿಯಲ್ಲಿ ರೈತರ ಹೆಸರನ್ನು ಶಾಶ್ವತವಾಗಿ ಇರಿಸುವಂತಾಗಬೇಕೆAದು ಕಟ್ಟಿ ಮಂದಯ್ಯ ಅವರು ಒತ್ತಾಯಿಸಿದರು.
ಸರಕಾರಿ ಕಚೇರಿಗಳಲ್ಲಿ ಎಷ್ಟು ಕಡತಗಳು ವಿಲೇವಾರಿಯಾಗಿವೆ, ಎಷ್ಟು ಕಡತಗಳು ಬಾಕಿ ಇವೆ ಎಂಬ ಮಾಹಿತಿಯನ್ನು ಸಂಘ-ಸAಸ್ಥೆಗಳಿಗೆ ಮಾಹಿತಿ ಹಕ್ಕಿನ ಮೂಲಕ ನೀಡುವಂತೆ ವ್ಯವಸ್ಥೆ ಜಾರಿಯಾಗಬೇಕು, ಸಾರ್ವಜನಿಕರು ತಮಗೆ ಸರಕಾರ ದಿಂದ ಸಿಗುವ ಪ್ರಯೋಜನಗಳಿಗೆ ಮತ್ತು ವ್ಯಯಕ್ತಿಕ ಉಪಯೋಗಕ್ಕೆ ಸಲ್ಲಿಸುವ ಅರ್ಜಿಗಳಿಗೆ ಸ್ವೀಕೃತಿ ಪತ್ರಗಳನ್ನು ಒದಗಿಸುವ ವ್ಯವಸ್ಥೆಯೂ ಜಾರಿಯಾಗಬೇಕೆಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಸಕಾಲ ಯೋಜನೆ ಅನುಷ್ಠಾನಕ್ಕೆ ಒತ್ತಾಯ
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಹಿತರಕ್ಷಣಾ ವೇದಿಕೆಯ ಕಾರ್ಯಾಧ್ಯಕ್ಷ ಬಿ.ಎಸ್. ಕಾಶಿ ಕಾರ್ಯಪ್ಪ ಅವರು ಮಾತನಾಡಿ, ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸಕಾಲ ಯೋಜನೆಯನ್ನು ಜಾರಿಗೆ ತಂದಿದ್ದರು. ಪ್ರತಿ ಸರಕಾರಿ ಕಚೇರಿಯಲ್ಲಿ ಈ ಯೋಜನೆಯ ಫಲಕವಿದೆ. ಯಾವ ಕೆಲಸಕ್ಕೆ ಎಷ್ಟು ಜನ ಹಾಗೂ ಎಷ್ಟು ಸಮಯ ಬೇಕಾಗುತ್ತದೆ ಎಂಬ ವಿವರ ಇದೆ. ಆದರೆ ಈ ಯೋಜನೆಯು ಇದೀಗ ಪಾಲನೆ ಆಗುತ್ತಿಲ್ಲ. ಕೇವಲ ಮಧ್ಯವರ್ತಿಗಳಿದ್ದರೆ ಮಾತ್ರ ಕೆಲಸ ಆಗುವಂತಾಗಿದೆ. ಹೊರಜಿಲ್ಲೆಯಿಂದ ಇಲ್ಲಿನ ಕಚೇರಿಗಳಿಗೆ ಉದ್ಯೋಗ ನಿಮಿತ್ತ ನೇಮಕವಾಗುವ ಸಿಬ್ಬಂದಿಗಳಿಗೆ ಇಲ್ಲಿನ ಭೂ-ದಾಖಲೆಗಳ ಬಗ್ಗೆ, ವಿಶೇಷವಾಗಿ ಜಮ್ಮಾ ವಿಚಾರವಾಗಿ ಅರಿವು ಇರುವುದಿಲ್ಲ. ಅವರುಗಳಿಗೆ ಸಾರ್ವಜನಿಕರೇ ತಿಳುವಿಕೆ ನೀಡಿ ದಾಖಲೆಗಳನ್ನು ಸರಿಪಡಿಸುವಂತಾಗಿದೆ ಎಂದರು. ಸರಕಾರಿ ಕಚೇರಿಗಳಲ್ಲಿ ಉದ್ಯೋಗಿಗಳ ಸಂಖ್ಯೆಯೂ ಕಡಿಮೆ ಇರುವುದರಿಂದ ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ೫ ಜನರ ಕೆಲಸವನ್ನು ಒಬ್ಬರೇ ಮಾಡುವಂತಾಗಿದೆ ಎಂದರು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ಹಾಗೂ ೫ ತಾಲೂಕುಗಳ ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ ಎಂದು ಈ ಸಂದರ್ಭ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ರತ್ನ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ದಿಲೀಪ್ ಗಣಪತಿ ಹಾಗೂ ನಿರ್ದೇಶಕ ವಿಜಯ್ ನಂಜಪ್ಪ ಹಾಜರಿದ್ದರು.