ಕರಿಕೆ, ಜ. ೯: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಂಬಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಕಂದಕಕ್ಕೆ ಉರುಳಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ. ಕರಿಕೆಯ ನಿವಾಸಿ ಕೋಡಿ ಸೀತಾರಾಮ ಎಂಬವರು ಭಾಗಮಂಡಲ ದಿಂದ ಕರಿಕೆ ಯ ತಮ್ಮ ಮನೆಯತ್ತ ಚಲಾಯಿಸುತ್ತಿದ್ದ ಕಾರು (ಕೆ.ಎ. ೦೫ ಎಂ.ಸಿ. ೨೫೦೧) ಎಸ್ ತಿರುವು ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಮರಕ್ಕೆ ಅಪ್ಪಳಿಸಿದೆ. ಸೀತಾರಾಮ ಅವರ ತಲೆಗೆ ಪೆಟ್ಟಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.