ಕುಶಾಲನಗರ, ಜ. ೯: ಕುಶಾಲನಗರ ಕೊಡವ ಸಮಾಜದ ಪುತ್ತರಿ ಊರೊರ್ಮೆ ಸಂತೋಷ ಕೂಟವು ಕೊಡವ ಸಮಾಜದ ಅಧ್ಯಕ್ಷರಾದ ವಾಂಚೀರ ಮನು ನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಭಾಗವಹಿಸಿ ಪುತ್ತರಿ ಹಬ್ಬದ ಬಗ್ಗೆ ಮಾಹಿತಿ ನೀಡಿದರು. ಪದ್ದತಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವತ್ತ ಗಮನಹರಿಸಬೇಕು ಮತ್ತು ಹೊಸ ಪೀಳಿಗೆಗೆ ಇದರ ಮಹತ್ವದ ಬಗ್ಗೆ ತಿಳುವಳಿಕೆ ನೀಡಬೇಕೆಂದರು.

ಅಧ್ಯಕ್ಷರಾದ ವಾಂಚೀರ ಮನು ನಂಜುAಡ ಅವರು ಮಾತನಾಡಿ, ನಮ್ಮ ಜನಾಂಗದ ಆಚಾರ ವಿಚಾರವನ್ನು ಎಲ್ಲರೂ ಚಾಚೂತಪ್ಪದೆ ಬೆಳಸಿಕೊಂಡು ಯುವಪೀಳಿಗೆಗೆ ಕಲಿಸಿಕೊಡುವ ಕೆಲಸವನ್ನು ಮಾಡಬೇಕು ಹಾಗಿದ್ದರೆ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ನಮ್ಮ ಮಕ್ಕಳ ಸಂಖ್ಯಾಬಲ ಕಮ್ಮಿಯಾಗುತ್ತಿದೆ ಆದುದರಿಂದ ಅದನ್ನು ಮನದಟ್ಟುಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಟ್ಟೆಮಾಡು ದೇವಸ್ಥಾನದಲ್ಲಿ ತೆಗೆದುಕೊಂಡ ನಿರ್ಣಯ ನಮ್ಮ ಜನಾಂಗ ಒಪ್ಪುವಂತದಲ್ಲ, ನಮ್ಮ ಕುಪ್ಪಸ ಮತ್ತು ಆಚಾರ ವಿಚಾರಕ್ಕೆ ದಕ್ಕೆ ಬಂದಾಗ ನಾವೆಲ್ಲ ಒಂದಾಗಿ ಖಂಡಿಸಬೇಕು ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ ಮತ್ತು ಖಜಾಂಚಿ ಬೊಳ್ಳಚಂಡ ಸನ್ನಿ ಮುತ್ತಣ್ಣ ಉಪಸ್ಥಿತರಿದ್ದರು. ಮಕ್ಕಳು ಕೊಡವ ಹಾಡಿಗೆ ನೃತ್ಯ ಮಾಡಿದರು ಮತ್ತು ಕೊಡಗಿನ ಕಲೆಯಾದ ಉಮ್ಮತಾಟ್, ಪರೆಯಕಳಿಯನ್ನು ಪ್ರದರ್ಶಿಸಿದರು. ಉತ್ತಮ ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸಮಾಜಸೇವೆ ಮಾಡಿದ ಹಿರಿಯ ಸದಸ್ಯರಾದ ಬಲ್ಲಾರಂಡ ಜಾಲಿ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಅಯಿಲಪಂಡ ಸಂಜು ಸ್ವಾಗತಿಸಿದರು, ಕಾರ್ಯದರ್ಶಿ ಮೈಂದಪAಡ ಜಗದೀಶ್, ನಂದಿನೆರವAಡ ನಳಿನಿ ಜಗದೀಶ್, ಚೆರುಮಂದAಡ ಪ್ರಕಾಶ್ ಪಳಂಗಪ್ಪ ಮತ್ತು ಅಲ್ಲಾರಂಡ ಹೇಮಾವತಿ ನಿರೂಪಿಸಿದರು.