ಆಶಾ ಕಾರ್ಯಕರ್ತೆಯರೊಂದಿಗೆ ದಿನೇಶ್ ಗುಂಡೂರಾವ್ ಸಭೆ ವಿಫಲ

ಬೆಂಗಳೂರು, ಜ. ೯: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ. ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುತ್ತದೆ. ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಕ್ಸಲರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಕೋರ್ಟ್

ಬೆಂಗಳೂರು, ಜ. ೯: ಶಸ್ತಾçಸ್ತç ತ್ಯಜಿಸಿ ಸಿಎಂ ಸಿದ್ದರಾಮಯ್ಯ ಮುಂದೆ ಆರು ನಕ್ಸಲೀಯರು ಶರಣಾಗಿದ್ದರು. ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್., ಮಾರೆಪ್ಪ ಅರೋಲಿ ಅವರಿಗೆ ಎನ್‌ಐಎ ವಿಶೇಷ ಕೋರ್ಟ್ ತಾ. ೩೧ ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಅವರು ನಕ್ಸಲ್ ನಾಯಕರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್‌ಐಎ ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ಗಂಗಾಧರ್ ಅವರ ಮುಂದೆ ಹಾಜರುಪಡಿಸಿದ್ದರು. ಇದರ ಸಂಕೇತವಾಗಿ ಮುಂಡಗಾರು ಲತಾ ನಕ್ಸಲ್ ಸಮವಸ್ತçವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದರು. ಬಳಿಕ ಸಿದ್ದರಾಮಯ್ಯ ಸಂವಿಧಾನದ ಪ್ರತಿ ಹಾಗೂ ಹೂಗಳನ್ನು ಅವರಿಗೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಂಡಿದ್ದರು

ನಿರ್ಮಾಣ ಹಂತದ ಸ್ಥಾವರದಲ್ಲಿ ಚಿಮಣಿ ಕುಸಿತ, ಹಲವು ಕಾರ್ಮಿಕರು ಸಾವು ಶಂಕೆ

ರಾಯ್‌ಗಢ, ಜ. ೯: ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ಕಬ್ಬಿಣ ತಯಾರಿಸುವ ನಿರ್ಮಾಣ ಹಂತದ ಸ್ಥಾವರದಲ್ಲಿ ಗುರುವಾರ ಭಾರೀ ಗಾತ್ರದ ಚಿಮಣಿ ಕುಸಿದು ಬಿದ್ದಿದ್ದು, ಹಲವು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವುನೋವುಗಳು ಅಥವಾ ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲೆಯ ಸರಗಾಂವ್ ಪ್ರದೇಶದಲ್ಲಿರುವ ಸ್ಥಾವರದಲ್ಲಿ ಇಂದು ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ಮುಂಗೇಲಿ ಪೊಲೀಸ್ ವರಿಷ್ಠಾಧಿಕಾರಿ ಭೋಜ್ರಾಮ್ ಪಟೇಲ್ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಿಮಿಣಿ ಕುಸಿದು ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ಅದರಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮುಂಗೇಲಿ ಪೊಲೀಸ್ ವರಿಷ್ಠಾಧಿಕಾರಿ ಭೋಜ್ರಾಮ್ ಪಟೇಲ್ ತಿಳಿಸಿದ್ದಾರೆ. ಅವರನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್: ಮೂವರು ನಕ್ಸಲರ ಹತ್ಯೆ

ಸುಕ್ಮಾ, ಜ. ೯: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ. ಸುಕ್ಮಾದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಯಶಸ್ಸನ್ನು ಸಾಧಿಸಿವೆ ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ, ಮೂವರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಗೃಹ ಖಾತೆಯನ್ನು ಹೊಂದಿರುವ ಶರ್ಮಾ ರಾಯ್‌ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. "ನಾನು ಅವರನ್ನು (ಭದ್ರತಾ ಪಡೆಗಳು) ಭೇಟಿಯಾಗಿದ್ದೇನೆ. ನಮ್ಮ ಯೋಧರ ಶಕ್ತಿ ಮತ್ತು ಧೈರ್ಯದಿಂದ, ನಿಗದಿತ ಸಮಯದೊಳಗೆ ನಕ್ಸಲ್ ಬೆದರಿಕೆಯನ್ನು ನಿರ್ಮೂಲನೆ ಮಾಡಲಾಗುವುದು ಎಂದು ಪುನರುಚ್ಚರಿಸುತ್ತೇನೆ" ಎಂದರು.

ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ

ನವದೆಹಲಿ, ಜ. ೯: ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಭಾರತದ ಸುಪ್ರೀಂಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಬ್ ಭೌಮಿಕ್ ೯೪,೦೦೦ ರೂಪಾಯಿಗಳನ್ನು ಮರುಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶಿಸಿದೆ. ಈ ಪ್ರಕರಣವು ತಮ್ಮ ಗ್ರಾಹಕರ ಹಣವನ್ನು ವಂಚನೆಯ ಚಟುವಟಿಕೆಗಳಿಂದ ರಕ್ಷಿಸುವಲ್ಲಿ ಹಣಕಾಸು ಸಂಸ್ಥೆಗಳ ಜವಾಬ್ದಾರಿಗಳನ್ನು ತೀವ್ರವಾಗಿ ಎತ್ತಿ ತೋರಿಸಿದೆ. ಪಲ್ಲಬ್ ಭೌಮಿಕ್ ಎನ್ನುವವರು ಆನ್ ಲೈನಲ್ಲಿ ಮೂಲ ವಸ್ತುವೊಂದನ್ನು ಖರೀದಿಸಿದ್ದರು. ರೂ. ೪,೦೦೦ ಮೌಲ್ಯದ ಲೂಯಿಸ್ ಫಿಲಿಪ್ ಪ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ, ವಂಚಕರು ಬಲಿಪಶುವನ್ನು ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವಂತೆ ಮೋಸಗೊಳಿಸಿದರು. ವಂಚನೆಯ ಬಗ್ಗೆ ಪ್ರತಿಕ್ರಿಯಿಸದ ಬಲಿಪಶು ಗುವಾಹಟಿ ಹೈಕೋರ್ಟ್ ಮೂಲಕ ಕಾನೂನು ಪರಿಹಾರಗಳನ್ನು ಅನುಸರಿಸಿದನು. ಇದು ವಂಚನೆಯ ಗಂಟೆಗಳಲ್ಲಿ ತಿಳಿಸಿದ್ದರೂ ಸಹ ಸಕಾಲಿಕ ಕ್ರಮ ಕೈಗೊಳ್ಳದಿದ್ದಕ್ಕಾಗಿ ಎಸ್.ಬಿ.ಐ. ತಪ್ಪಿತಸ್ಥನೆಂದು ಕಂಡುಹಿಡಿದಿದೆ. ಹೈಕೋರ್ಟ್ ಬ್ಯಾಂಕಿಗೆ ಪೂರ್ಣ ಮೊತ್ತವನ್ನು ಮರುಪಾವತಿಸಲು ಅದೇಶಿಸಿತು.