ಸೋಮವಾರಪೇಟೆ, ಜ. ೯: ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗದಲ್ಲಿರುವ ಗೊದ್ದು ಗ್ರಾಮದ ೧೬ನೇ ಶತಮಾನದ ಪ್ರಾಚೀನ ಇತಿಹಾಸ ಹೊಂದಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ೩೫೪ನೇ ಜಾತ್ರಾಮಹೋತ್ಸವ ತಾ. ೧೫ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಇಂದುಶೇಖರ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೬ರಿಂದ ಸಂಜೆ ೬ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹೆಗ್ಗಡಳ್ಳಿ ಮಠದ ಗೌರವಾಧ್ಯಕ್ಷ ಶ್ರೀ ಷಡ್ಭಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಹೆಗ್ಗಡಳ್ಳಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ದೇವಾಲಯ ಅರ್ಚಕ ಪ್ರಸಾದ್ ಉಚ್ಚಂಗಿ ಭಾಗವಹಿಸಲಿದ್ದಾರೆ. ಜಾತ್ರೋತ್ಸವದ ಪ್ರಯುಕ್ತ ತಾ. ೧೪ರಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.