ಮಡಿಕೇರಿ, ಜ. ೯: ಭದ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ಮುಚ್ಚಿಸಿದ್ದ ಕೆ. ನಿಡುಗಣೆ ಪಂಚಾಯಿತಿ ಕಚೇರಿ ಸಮೀಪದ ಗ್ಲಾಸ್ ಬ್ರಿಡ್ಜ್ ಅನ್ನು ನಿರ್ವಹಣೆ ನಡೆಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ.
ಕಳೆದ ಜೂನ್ ೩೦ ರಿಂದ ಮುಚ್ಚಲ್ಪಟ್ಟಿದ್ದ ಗ್ಲಾಸ್ ಬ್ರಿಡ್ಜ್ ತೆರೆಯಲು ಅನುಮತಿ ಕೋರಿ ಮಾಲೀಕರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಗ್ರಾಮ ಪಂಚಾಯಿತಿಗಳಲ್ಲಿ ತಾಂತ್ರಿಕ ತಜ್ಞರು ಇಲ್ಲದ್ದರಿಂದ ಕೇವಲ ಕಟ್ಟಡ ಮತ್ತು ಮನೆಗಳನ್ನು ನಿರ್ಮಿಸಲು ಅನುಮತಿ ನೀಡುವಷ್ಟೇ ಅವಕಾಶ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿತು. ಗ್ಲಾಸ್ ಬ್ರಿಡ್ಜ್ ನಿರ್ಮಾಣ,ಕಟ್ಟಡದ ವಿನ್ಯಾಸವನ್ನು ಹೊಂದಿಲ್ಲದ ಕಾರಣ ಪಂಚಾಯಿತಿಗಳು ಅವುಗಳಿಗೆ ಅನುಮತಿ ನೀಡುವುದು ಕಷ್ಟ ಸಾಧ್ಯ ಎಂದು ಹೇಳಿತು. ಇಂತಹ ನಿರ್ಮಾಣಗಳಿಗೆ ಅನುಮತಿ ನೀಡಲು ವಿವಿಧ ಇಲಾಖೆಗಳಲ್ಲಿ ತಂತ್ರಜ್ಞರು ಇರುವುದನ್ನು ಪತ್ತೆ ಹಚ್ಚಿ ನ್ಯಾಯಾಲಯದ ಗಮನಕ್ಕೆ ತರುವಂತೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರಿಗೆ ಸೂಚಿಸಿತು. ಆ ಮೂಲಕ ಅರ್ಜಿದಾರರು ಅನುಮತಿಯನ್ನು ಪಡೆಯಲು ನ್ಯಾಯಾಲಯ ಸೂಚಿಸಬಹುದು ಎಂದು ಅಭಿಪ್ರಾಯ ಪಟ್ಟಿತು.
ಇದೇ ಸಂದರ್ಭ ಅರ್ಜಿದಾರರ ಪರ ಮಾತನಾಡಿದ ಹಿರಿಯ ವಕೀಲರು, ಕಳೆದ ಜೂನ್ ತಿಂಗಳಿನಿAದ ಗ್ಲಾಸ್ ಬ್ರಿಡ್ಜ್ ಕಾರ್ಯನಿರ್ವಹಿಸದೆ ಕಬ್ಬಿಣಗಳೆಲ್ಲ ತುಕ್ಕು ಹಿಡಿಯುವ ಸಾಧ್ಯತೆ ಇರುವುದರಿಂದ ಅವುಗಳ ನಿರ್ವಹಣೆಗೆ ಅನುಮತಿ ನೀಡುವಂತೆ ಕೋರಿದರು. ಸಮ್ಮತಿಸಿದ ನ್ಯಾಯಾಧೀಶರು ಜಿಲ್ಲಾಧಿಕಾರಿಗಳು ಅದಕ್ಕೆ ಹಾಕಿರುವ ಬೀಗವನ್ನು ತೆರವುಗೊಳಿಸುವಂತೆ ಸೂಚಿಸಿದರು. ಅಲ್ಲದೆ ಈ ಅನುಮತಿ ಕೇವಲ ೧೫ ದಿನಕ್ಕೆ ನೀಡಿದ್ದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಿಬ್ಬಂದಿ ಒಬ್ಬರನ್ನು ನಿರ್ವಹಣೆ ಸಂದರ್ಭ ನೇಮಿಸುವಂತೆ ಆದೇಶಿಸಿದರು. ವಿಚಾರಣೆಯನ್ನು ತಾರೀಕು ೨೦ಕ್ಕೆ ಮುಂದೂಡಲಾಯಿತು.