ಕಣಿವೆ, ಜ. ೯: ದಶಕಗಳಿಂದಲೂ ದುರಸ್ತಿ ಕಾಣದೇ ಶಿಥಿಲಾವಸ್ಥೆ ತಲುಪಿರುವ ಬೈಚನಹಳ್ಳಿಯ ಕನ್ನಂಬಾಡಮ್ಮ ದೇವರ ಜೀರ್ಣೋದ್ಧಾರಕ್ಕೆ ಸಕಾಲ ಒದಗಿ ಬಂದAತೆ ಗೋಚರವಾಗುತ್ತಿದೆ.

ಸ್ಥಳೀಯ ಪುರಸಭೆ ಸದಸ್ಯ ಜಗದೀಶ್ ಹಾಗೂ ಶಿವಕುಮಾರ್ ಅರ್ಚಕ ಕೃಷ್ಣಮೂರ್ತಿ ಭಟ್ ಅವರನ್ನು ಸಂಪರ್ಕಿಸಿ ಈ ಸಂಬAಧ ಮಾತುಕತೆ ನಡೆಸಿದ್ದಾರೆ. ಅಷ್ಟಮಂಗಲ ಪ್ರಶ್ನೆ ಹಾಕಿಸಿ ದೇವಾಲಯದ ಪುನರುಜ್ಜೀವನದ ಬಗ್ಗೆ ಯೋಜಿಸಿ ಎಂದು ಕೃಷ್ಣಮೂರ್ತಿ ಸಲಹೆ ನೀಡಿದ್ದಾರೆ.

ಈ ಬಗ್ಗೆ ಗ್ರಾಮದ ಎಲ್ಲಾ ನಿವಾಸಿಗಳೊಂದಿಗೆ ಸಮಾಲೋಚಿಸಿ ಎಲ್ಲರ ಸಹಕಾರದೊಂದಿಗೆ ಮುಂದಿನ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಗದೀಶ್ ತಿಳಿಸಿದ್ದಾರೆ.

ದೇವಾಲಯದ ಗೋಡೆಗಳ ಸುತ್ತಲೂ ಅರಳಿ ಮರದ ಬೇರುಗಳು ಹೆಣೆದುಕೊಂಡಿದ್ದು ದೇವಾಲಯ ಬೀಳುವ ಹಂತದಲ್ಲಿರುವ ಕಾರಣ ಯಾವ ಭಕ್ತಾದಿಗಳೂ ಕೂಡ ದೇವಾಲಯದತ್ತ ಮುಖ ಮಾಡುತ್ತಿರಲಿಲ್ಲ.

ಈ ಬಗ್ಗೆ ಸ್ಥಳೀಯ ಹಿರಿಯ ನಿವಾಸಿಗಳನ್ನು ಮಾತನಾಡಿಸಿದಾಗ ದೇವಾಲಯದ ಸ್ಥಿತಿ ಗತಿ ಕಂಡು ಅನೇಕರು ‘ಶಕ್ತಿ'ಯೊಂದಿಗೆ ನೋವು ತೋಡಿಕೊಂಡಿದ್ದರು. ಈ ಬಗ್ಗೆ ‘ಶಕ್ತಿ’ ಸವಿವರವಾಗಿ ಮಾಹಿತಿ ಪ್ರಕಟಿಸಿ ಗಮನ ಸೆಳೆದಿತ್ತು.