ಮಡಿಕೇರಿ, ಜ. ೧೦ : ಗೌಡ ಜನಾಂಗದವರು ಆಂಧ್ರ ಪ್ರದೇಶದವರು ಹಾಗೂ ಗೌಡರು ಮತ್ತು ಒಕ್ಕಲಿಗರಿಗೆ ಯಾವದೇ ಸಂಬAಧವಿಲ್ಲವೆAದು ಕೆಲವರು ಹೇಳಿರುವದನ್ನು ಗೌಡ ಹಾಗೂ ಒಕ್ಕಲಿಗ ಸಮುದಾಯ ಖಂಡಿಸಿದೆ. ಕೊಡಗಿನಲ್ಲಿ ಕೊಡವ ಮತ್ತು ಗೌಡ ಜನಾಂಗದವರು ಅನ್ಯೋನ್ಯತೆಯಿಂದ ಬಾಳುತ್ತಿರುವುದನ್ನು ಸಹಿಸದೆ ಕೆಲವು ಮಂದಿ ಈ ರೀತಿ ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ; ಕಟ್ಟೆಮಾಡು ದೇವಾಲಯದಲ್ಲಿ ನಡೆದ ಘಟನೆಗೆ ಇದೀಗ ಜಾತಿಯ ಬಣ್ಣ ಹಚ್ಚಲಾಗಿದೆ, ಈ ಸಮಸ್ಯೆಯನ್ನು ಆಡಳಿತ ಮಂಡಳಿ, ಕೊಡವ, ಗೌಡ ಸಮಾಜ ಹಾಗೂ ಜಿಲ್ಲಾಡಳಿತ ಸಮಾಲೋಚಿಸಿ ತೀರ್ಮಾನಕ್ಕೆ ಬರಬೇಕು. ಅದು ಬಿಟ್ಟು ಸಿಎನ್‌ಸಿಯ ನಾಚಪ್ಪ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಗೌಡರನ್ನು ಕೆಟ್ಟದಾಗಿ ನಿಂದನೆ ಮಾಡಿದ್ದಾರೆ. ಅವರ ಸಹಚರರು ಗೌಡರು ಗೌಡರಲ್ಲ, ಅವರು ಆಂಧ್ರ ಪ್ರದೇಶದವರು ಎಂದು ನಿಂದಿಸಿದ್ದಾರೆ. ನಾವು ಎಲ್ಲಿಂದಲೋ ಬಂದವರಲ್ಲ. ತಲತಲಾಂತರದಿAದ ಇಲ್ಲಿಯೇ ಹುಟ್ಟಿ ಬೆಳೆದವರು. ಇಲ್ಲಿ ಎಲ್ಲ ಸಮುದಾಯದವರು ಅನ್ಯೋನ್ಯತೆಯಿಂದ ಇದ್ದಾರೆ. ಈಚೆಗೆ ಚೇರಂಬಾಣೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವರು ವೀರ ಸೇನಾನಿಗಳಾದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರುಗಳನ್ನು ನಮ್ಮವರು ಎಂದು ಘೋಷಣೆ ಕೂಗುತ್ತಿದ್ದರು. ಆವರುಗಳು ದೇಶಕ್ಕಾಗಿ ಹೋರಾಡಿದವರು; ಅವರು ನಮ್ಮವರು ಎಂದು ಹೇಳಿಕೊಳ್ಳಲು ನಮಗೂ ಹೆಮ್ಮೆಯಾಗುತ್ತದೆ. ಕೊಡಗು ಕೊಡಗಾಗಿ ಉಳಿಯಬೇಕೆಂದರೆ ಎಲ್ಲರೂ ಒಂದಾಗಬೇಕು; ಎಲ್ಲರೂ ಸೇರಿ ಕೊಡಗನ್ನು ಉಳಿಸೋಣವೆಂದು ಹೇಳಿದರು.

ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕ ಕೊಡಗನ ತೀರ್ಥಪ್ರಸಾದ್ ಮಾತನಾಡಿ; ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯದವರು ಪ್ರೀತಿ, ಬಾಂಧವ್ಯದಿAದ ಬಾಳುತ್ತಿದ್ದೇವೆ. ಪೊನ್ನಂಪೇಟೆ ಭಾಗದ ಸಿಎನ್‌ಸಿಯ ಕೆಲವರು ಅರೆಭಾಷೆ ಗೌಡ ಜನಾಂಗದವರು ಆಂಧ್ರದಿAದ ಬಂದವರು, ಇಲ್ಲಿನ ಗೌಡರು ಅಲ್ಲವೆಂದು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಯಿಂದ ಸಮಾಜವನ್ನು ಒಡೆಯುವ, ಶಾಂತಿ ಕದಡುವ ಪ್ರಯತ್ನವಾಗುತ್ತಿದೆ ಎಂದು ಆರೋಪಿಸಿದರು.

ಒಕ್ಕಲಿಗ ಗೌಡ ಹಾಗೂ ಗೌಡ ಜನಾಂಗದವರೊAದಿಗೆ ಉತ್ತಮ ಬಾಂಧವ್ಯವಿದೆ, ಕೊಡವ ಜನಾಂಗದವರೊAದಿಗೂ ಉತ್ತಮ ಬಾಂಧವ್ಯವಿದೆ. ಜಿಲ್ಲೆಯಲ್ಲಿ ಜನಾಂಗಗಳ ನಡುವೆ ಜಾತೀಯ ಬೀಜ ಬಿತ್ತುವದು ಸರಿಯಲ್ಲ, ಜಾತಿ ವಿರೋಧಿಗಳ ಮಾತಿಗೆ ಯಾರೂ ಮರುಳಾಗದೆ ಉತ್ತಮ ಬಾಂಧವ್ಯದಿAದ ಜೀವನ ನಡೆಸುತ್ತಾ, ಎಲ್ಲ ಜನಾಂಗದವರು ಆತ್ಮೀಯತೆಯಿಂದ ಬಾಳೋಣವೆಂದು ಹೇಳಿದರು.

ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ; ಮೃತ್ಯುಂಜಯ ದೇವಸ್ಥಾನದ ವಸ್ತç ಸಂಹಿತೆ ವಿಚಾರ ದೇವಸ್ಥಾನ ಮತ್ತು ಆ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾಧಿಕಾರಿಯವರು ದೇವಸ್ಥಾನ ಸಮಿತಿಯವರಿಗೆ ಫೆ.೧೦ರವರೆಗೆ ಸಮಯಾವಕಾಶ ನೀಡಿದ್ದಾರೆ. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊAಡು ಗೌಡ ಜನಾಂಗದವರನ್ನು, ಸಂಪ್ರದಾಯವನ್ನು ನಿಂದಿಸುತ್ತಿರುವದು ಸರಿಯಲ್ಲ, ಕೊಡಗಿನ ಎರಡು ಪ್ರಬಲ ಜನಾಂಗಗಳಾದ ಅರೆಭಾಷೆ ಗೌಡರು ಹಾಗೂ ಕೊಡವರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಕೇವಲ ಬೆರಳೆಣಿಕೆಯ ಮಂದಿ ಎರಡು ಜನಾಂಗಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದು ಇವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿದರು.

ಯಾರೂ ಕೂಡ ಜಾತಿ ನಿಂದನೆ ಮಾಡಿ ಕೊಡಗಿನಲ್ಲಿ ಶಾಂತಿ ಕದಡುವ ಬದಲಿಗೆ ತಮ್ಮ ಜಾತಿಯ ವಿರುದ್ಧ ಯಾರೇ ನಿಂದನೆ ಮಾಡಿದಲ್ಲಿ ತಿರುಗಿಸಿ ಉತ್ತರ ನೀಡದೆ ಪೊಲೀಸ್ ಇಲಾಖೆಗೆ ದೂರು ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕೊಡಗು ಗೌಡ ವಿದ್ಯಾ ಸಂಘದ ನಿರ್ದೇಶಕ ತಳೂರು ದಿನೇಶ್ ಕುಮಾರ್ ಮಾತನಾಡಿ; ಕಟ್ಟೆಮಾಡು ಗ್ರಾಮಸ್ಥರೆಲ್ಲ ಸೇರಿ ಒಂದು ಭವ್ಯವಾದ ದೇವಾಲಯ ನಿರ್ಮಿಸಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ದೇವಾಲಯ ಇದೀಗ ರಾಷ್ಟçಮಟ್ಟದಲ್ಲಿ ಹೆಸರು ಮಾಡಿದೆ. ಆದರೆ, ಹೆಸರು ಮಾಡಿದ ರೀತಿ ನೋಡಿದಾಗ ಎಲ್ಲರಿಗೂ ದುಃಖ ಆವರಿಸಿಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎಲ್ಲರೂ ಉತ್ತಮ ಬಾಂಧವ್ಯದಿAದ ಜೀವನ ಸಾಗಿಸುತ್ತಿರುವಾಗ ನಾಚಪ್ಪ ಮತ್ತು ಅನುಯಾಯಿಗಳು ಆರೋಪ ಮಾಡಿರುವುದು ಖಂಡನೀಯ ಎಂದರು. ನಾಚಪ್ಪ ಅವರು ಕೊಡವರ ಏಳಿಗೆಗಾಗಿ ದುಡಿಯುವದನ್ನು ಮುಕ್ತ ಕಂಠದಿAದ ಸ್ವಾಗತಿಸುತ್ತೇವೆ. ಆದರೆ, ಇತರ ಜನಾಂಗದವರನ್ನು ನಿಂದಿಸುವದನ್ನು ಖಂಡಿಸುವದಾಗಿ ಹೇಳಿದರು.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೊಡವರು ಹಾಗೂ ಗೌಡರು ಒಂದಾಗಿ ಗದ್ದೆ ಕೆಲಸ, ತೋಟ ಕೆಲಸ ಮಾಡುವದು, ಸಮಾರಂಭಗಳಿಗೆ ಒಟ್ಟಾಗಿ ಹೋಗುವದನ್ನು ಕಾಣಬಹುದಾಗಿದೆ. ಆದರೆ, ಮೊನ್ನೆ ದಿನ ಹಿರಿಯರೊಬ್ಬರು ಗೌಡರು ಆಂಧ್ರದಿAದ ಬಂದವರೆAದೂ ಒಕ್ಕಲಿಗರೊಂದಿಗೆ ಯಾವದೇ ಸಂಬAಧವಿಲ್ಲವೆAದು ಹೇಳಿರುವದು ಸರಿಯಲ್ಲ, ಗೌಡರು ಹಾಗೂ ಒಕ್ಕಲಿಗರು ಒಂದೇ ನಾಣ್ಯದ ಎರಡು ಮುಖಗಳು; ನಮ್ಮಲ್ಲಿ ಅನ್ಯೋನ್ಯವಾದ ಸಂಬAಧಗಳಿವೆ. ನಾವೆಲ್ಲರೂ ಸೇರಿ ಕೊಡಗಿನ ಘನತೆಯನ್ನು ಎತ್ತಿ ಹಿಡಿದು ಜಾತಿ ಎಂಬ ವಿಷಬೀಜವನ್ನು ತೊಲಗಿಸೋಣ ಎಂದು ಅಭಿಪ್ರಾಯಪಟ್ಟರು.

ಗೌಡ ಜನಾಂಗದ ಮುಖಂಡ ರ‍್ಮಾಲೆ ಗಣೇಶ್ ಮಾತನಾಡಿ; ಪೊನ್ನಂಪೇಟೆ ತಾಲೂಕಿನಲ್ಲಿ ಬಹುತೇಕ ಕೊಡವ ಸಮುದಾಯದವರಿದ್ದಾರೆ, ನಾವು ಬೆರಳೆಣಿಕೆಯಷ್ಟು ಮಾತ್ರ ಗೌಡ ಸಮುದಾಯದವರಿದ್ದು, ಎಲ್ಲರೂ ಅನ್ಯೋನ್ಯತೆÀಯಿಂದ ಇದ್ದೇವೆ. ನಮ್ಮಲ್ಲಿ ಯಾವದೇ ಭಿನ್ನಾಭಿಪ್ರಾಯಗಳಿಲ್ಲ, ಹೀಗಿರುವಾಗ ಜಾತಿ ನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಿ.ಎನ್. ಸುರೇಶ್ ಮಾತನಾಡಿ; ಗೌಡರು ಪರಕೀಯರು ಎಂಬAತೆ ಹೇಳಿಕೆ ನೀಡಿರುವದನ್ನು ಖಂಡಿಸುತ್ತೇವೆ. ಅದೇರೀತಿ ಗೌಡರಿಗೂ ಒಕ್ಕಲಿಗರಿಗೂ ಸಂಬAಧವಿಲ್ಲ ಎಂದು ಹೇಳಿರುವದು ಸರಿಯಲ್ಲ, ಒಕ್ಕಲಿಗರ ಸಂಘದಲ್ಲಿ ಗೌಡ ಜನಾಂಗದವರು ಉಪಾಧ್ಯಕ್ಷರಾಗಿದ್ದಾರೆ. ಸರಿಯಾದ ಮಾಹಿತಿ ಇಲ್ಲದವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಗೌಡ ಜನಾಂಗದಲ್ಲಿ ಕೆದಂಬಾಡಿ ರಾಮಯ್ಯ, ಗುಡ್ಡೆಮನೆ ಅಪ್ಪಯ್ಯ ಗೌಡರಂತಹ ಸ್ವಾತಂತ್ರö್ಯ ಹೋರಾಟಗಾರರಿದ್ದಾರೆ. ಎರಡೂ ಜನಾಂಗದಲ್ಲೂ ಆಚಾರ ವಿಚಾರಗಳಿವೆ, ಹೀಗಿರುವಾಗ ಜಾತಿ ನಿಂದನೆ ಮಾಡಿದವರ ಮೇಲೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.