ಮಡಿಕೇರಿ, ಜ. ೧೦ : ಕಟ್ಟೆಮಾಡುವಿನ ಮಹಾ ಮೃತ್ಯುಂಜಯ ಮಹದೇಶ್ವರ ದೇವಾಲಯದಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬAಧಿಸಿದAತೆ ದೇವಾಲಯ ಸಮಿತಿ ಹಾಗೂ ಕಟ್ಟೆಮಾಡು ಗ್ರಾಮದ ಸರ್ವರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದೆಂದು ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಎಲ್ಲ ದೇವಾಲಯಗಳಲ್ಲೂ ಕಟ್ಟುಪಾಡುಗಳಿರುತ್ತವೆ. ಹಾಗೆಯೇ ಹೊಸದಾಗಿ ನಿರ್ಮಾಣಗೊಂಡಿರುವ ಮೃತ್ಯುಂಜಯ ದೇವಾಲಯದಲ್ಲೂ ಕೂಡ ಕಟ್ಟುಪಾಡುಗಳೊಂದಿಗೆ ಬೈಲಾ ರಚನೆ ಮಾಡಲಾಗಿದೆ. ಆದರೂ ಕಳೆದ ಉತ್ಸವದ ಕೊನೆ ಘಳಿಗೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದೀಗ ಜಿಲ್ಲಾಡಳಿತ ಮಧ್ಯಪ್ರವೇಶಿಸಿದ್ದು, ತೀರ್ಮಾನ ಕೈಗೊಳ್ಳಲು ಫೆ.೧೦ರವರೆಗೆ ಕಾಲಾವಕಾಶ ನೀಡಿದ್ದಾರೆ. ಕಟ್ಟೆಮಾಡುವಿನಲ್ಲಿ ಎಲ್ಲ ಸಮುದಾಯದವರು ವಾಸವಿದ್ದಾರೆ. ಅದರಲ್ಲೂ ಶೇ.೭೦ರಷ್ಟು ಇತರ ಸಮುದಾಯದವರಿದ್ದಾರೆ. ಹಾಗಾಗಿ ಸಂವಿಧಾನಬದ್ಧವಾಗಿ ಎಲ್ಲರಿಗೂ ಸಮಾನತೆ ಸಿಗಬೇಕೆಂಬ ನಿಟ್ಟಿನಲ್ಲಿ ಬೈಲಾ ರಚನೆ ಮಾಡಿದ್ದು, ಯಾವದೇ ಸಮುದಾಯದವರು ಸಾಂಪ್ರದಾಯಿಕ ಉಡುಪು ಧರಿಸುವಂತಿಲ್ಲವೆAದು ನಿಯಮ ಅಳವಡಿಸಲಾಗಿದೆ.
ಇದೀಗ ಜಿಲ್ಲಾಧಿಕಾರಿಗಳು ನೀಡಿರುವ ಕಾಲಾವಕಾಶದೊಳಗಡೆ ಕಟ್ಟೆಮಾಡು ಗ್ರಾಮಸ್ಥರ ಸಭೆ ಕರೆದು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದು ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದೆಂದು ತಿಳಿಸಿದರು. ದೇವಾಲಯ ನಿರ್ಮಾಣವಾದ ರೀತಿ, ದಾನಿಗಳ ನೆರವಿನೊಂದಿಗೆ ದೇವಾಲಯ ಕಟ್ಟಿದ ಬಗ್ಗೆ, ಅದರ ಹಿಂದಿನ ಶ್ರಮದ ಬಗ್ಗೆ ವಿವರವಾಗಿ ತಿಳಿಸಿದರು.
ಆಡಳಿತ ಮಂಡಳಿಯ ಮರಾಠಿ ದೇವಪ್ಪ ಮಾತನಾಡಿ; ಕಟ್ಟೆಮಾಡುವಿನಲ್ಲಿ ಎಲ್ಲ ವರ್ಗದವರು ಇದ್ದಾರೆ. ಎಲ್ಲರೂ ಒಂದೇ ರೀತಿಯಲ್ಲಿ ಸಮವಸ್ತçದಂತೆ ಉಡುಪು ಧರಿಸಿಕೊಂಡು ಬರುವಂತೆ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಬೈಲಾ ರಚನೆ ಮಾಡಲಾಗಿದೆ. ಆದರೆ, ಮಹಿಳೆಯರು ಇಂತಹದ್ದೇ ವಸ್ತç ಧರಿಸಬೇಕೆಂದು ಹೇಳಿಲ್ಲವೆಂದು ತಿಳಿಸಿದರು.
ಗೋಷ್ಠಿಯಲ್ಲಿ ಉಪ ಕಾರ್ಯದರ್ಶಿ ಬಿ.ಕೆ. ಮಹೇಶ್, ನಿರ್ದೇಶಕರುಗಳಾದ ಪಿ.ಎನ್.ದೇವಪ್ಪ, ಎಂ.ಎಸ್.ಪುರುಷೋತ್ತಮ, ಸದಸ್ಯ ವೇಣುಗೋಪಾಲ್ ಇದ್ದರು.