ಕಣಿವೆ, ಜ. ೧೦: ಕುಶಾಲನಗರ ಪಟ್ಟಣದ ರಥಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರವನ್ನು ನಿರ್ಮಿಸಲಾಗಿತ್ತು. ಏಕಾದಶಿ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ ಹಾಗೂ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಉತ್ತರ ದ್ವಾರದಲ್ಲಿ ಮಹಾವಿಷ್ಣುವಿನ ದ್ವಾರವನ್ನು ನಿರ್ಮಾಣ ಮಾಡಲಾಗಿತ್ತು.
ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಭಕ್ತಾದಿಗಳು ಆಗಮಿಸಿ ಮಹಾವಿಷ್ಣುವಿನ ದರ್ಶನ ಪಡೆದು ವೈಕುಂಠ ದ್ವಾರದಲ್ಲಿ ಪ್ರವೇಶಿಸಿ ಪುನೀತರಾದರು.
ದೇವಾಲಯದಲ್ಲಿನ ವಿವಿಧ ದೇವತಾ ಮೂರ್ತಿಗಳನ್ನು ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ದಿನದ ಮಹತ್ವ ಸಾರಿದ ದೇವಾಲಯದ ಅರ್ಚಕರಾದ ಗಿರೀಶ್ ಭಟ್ ಹಾಗೂ ಯೋಗೇಶ ಭಟ್ ಮಾತನಾಡಿ, ವೈಕುಂಠ ಎಂಬುದು ಮಹಾವಿಷ್ಣುವಿನ ಸನ್ನಿಧಿ. ನಮ್ಮ ಅಂತರAಗದಲ್ಲಿ ನೆಮ್ಮದಿಯ ಬೆಳಕನ್ನು ಕಂಡು ಕೊಂಡಾಗ ದೈವತ್ವ ನೆಲೆಸಿತು ಎಂಬರ್ಥವಾಗಿದೆ ಎಂದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಕಾರ್ಯದರ್ಶಿ ಬಿ.ಎಲ್. ಅಶೋಕ್ ಕುಮಾರ್, ಪ್ರಮುಖರಾದ ಎಸ್.ಎನ್. ನಾಗೇಂದ್ರ, ಎಂ.ಪಿ. ಸತ್ಯನಾರಾಯಣ, ಬಿ.ಆರ್. ನಟರಾಜು, ಎಸ್.ಕೆ. ಸತೀಶ್, ಕೆ.ಜೆ. ರಮೇಶ್, ಲಕ್ಷಿö್ಮ ಶ್ರೀನಿವಾಸ್, ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್ ಇತರರಿದ್ದರು.