ಮಡಿಕೇರಿ, ಜ. ೧೦: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಶ್ರೀ ಗಣಪತಿ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ, ಶತ ರುದ್ರಾಭಿಶೇಕ ಪಠಣ ಹಾಗೂ ಚಂಡಿಕಾ ಹೋಮ ತಾ.೧೫ರಂದು ಭಾಗಮಂಡಲದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ನ ಅಧ್ಯಕ್ಷ ಮುದ್ದಂಡ ದೇವಯ್ಯ, ಅಷ್ಟ ಮಂಗಲ ಪ್ರಶ್ನೆಯಲ್ಲಿ ಮಾನವ ಕುಲಕ್ಕೆ ದೋಷವಿದೆ ಎಂದು ಕಂಡುಬAದ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಟ್ರಸ್ಟ್ ರಚನೆ ಮಾಡಿಕೊಂಡು ಕಳೆದ ಹನ್ನೆರಡು ವರ್ಷಗಳಿಂದ ಭಾಗಮಂಡಲದ ಸಂಗಮದ ತೀರದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ೪೮ ದಿನಗಳಿಂದ ವ್ರತದಲ್ಲಿದ್ದು, ಶುದ್ಧಮುದ್ರಿಕೆಯೊಂದಿಗೆ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇವೆ. ತಾ.೧೫ ರಂದು ಬೆಳಿಗ್ಗೆ ೭ ಗಂಟೆಯಿAದ ಪೂಜೆ ಪ್ರಾರಂಭಗೊಳ್ಳಲಿದೆ. ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಯಾವದೇ ಜಾತಿ, ಮತ ಪಂಥವಿಲ್ಲದೆ ಎಲ್ಲರೂ ಈ ಪೂಜಾ ಕಾರ್ಯದಲ್ಲಿ ಭಾಗವಹಿಸಬಹುದೆಂದು ತಿಳಿಸಿದರು.
ಕಟ್ಟಡ ನಿರ್ಮಾಣ
ಭಾಗಮಂಡಲದ ಸಂಗಮದ ಬಳಿ ಟ್ರಸ್ಟ್ಗೆ ಸೇರಿದ ೪.೫ ಸೆಂಟ್ ಜಾಗವಿದ್ದು, ಸಮುದಾಯ ಭವನ ನಿರ್ಮಾಣಕ್ಕಾಗಿ ಸರಕಾರದಿಂದ ಒಂದು ಕೋಟಿ ಅನುದಾನ ಮಂಜೂರಾಗಿದೆ. ಸದ್ಯಕ್ಕೆ ಅಷ್ಟಕ್ಕೆ ಸೀಮಿತವಾಗಿ ಕಟ್ಟಡ ಕಟ್ಟಲು ಯೋಜನೆ ರೂಪಿಸಲಾಗಿದೆ. ಪೂಜೆಯ ಬಳಿಕ ಸಭೆಯಲ್ಲಿ ಚರ್ಚಿಸಿ ನಿರ್ಮಾಣ ಕಾರ್ಯಕ್ಕೆ ಮುಂದಾಗಲು ಚಿಂತಿಸಲಾಗಿದೆ. ಕ್ಷೇತ್ರಕ್ಕೆ ಬರುವವರಿಗೆ ಬಟ್ಟೆ ಬದಲಿಸಲು, ತಂಗಲು ವ್ಯವಸ್ಥೆಯೊಂದಿಗೆ ಭವನ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಟ್ರಸ್ಟಿಗಳಾದ ನಾಯಕಂಡ ಅಯ್ಯಣ್ಣ, ನೆರಿಯಂಡಮ್ಮAಡ ಪ್ರಭು, ತೋಲಂಡ ಸೋಮಯ್ಯ, ಹಂಚೆಟ್ಟಿರ ಮನು ಮುದ್ದಪ್ಪ, ಕುಕ್ಕೇರ ಶ್ಯಾಮಲ ಇದ್ದರು.