ಮಡಿಕೇರಿ, ಜ.೧೦ : ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಮುಂದಿನ ೫ ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ೧೫ ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ೧೫ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರ (ಸಾಮಾನ್ಯ) ರವಿ ಕಾಳನ, ಮಡಿಕೇರಿ ಕ್ಷೇತ್ರ (ಸಾಮಾನ್ಯ) ನಾಚಪ್ಪ ಮಾದೆಯಂಡ, ಹೊಸ್ಕೇರಿ ಕ್ಷೇತ್ರ ಸಾಮಾನ್ಯ ಪೂಣಚ್ಚ ಅಮ್ಮಾಟಂಡ, ಮೂರ್ನಾಡು ಕ್ಷೇತ್ರ (ಸಾಮಾನ್ಯ) ಪ್ರೀಣಾ ಮಡೆಯಂಡ, ಕಕ್ಕಬ್ಬೆ ಕ್ಷೇತ್ರ ಸಾಮಾನ್ಯ ರಮ್ಯ ಕೇಟೋಳಿರ, ನಾಪೋಕ್ಲು ಕ್ಷೇತ್ರ (ಸಾಮಾನ್ಯ), ಮುತ್ತಪ್ಪ ಅಪ್ಪಚೆಟ್ಟೋಳಂಡ, ಚೇರಂಬಾಣೆ ಕ್ಷೇತ್ರ (ಸಾಮಾನ್ಯ), ಮಾದಯ್ಯ ನಾಪಂಡ, ಪೆರಾಜೆ ಕ್ಷೇತ್ರ ಸಾಮಾನ್ಯ ಭುವನೇಶ್ವರ ನಿಡ್ಯಮಲೆ, ಸಂಪಾಜೆ ಕ್ಷೇತ್ರ (ಸಾಮಾನ್ಯ) ಜಯಪ್ರಕಾಶ್, (ಪರಿಶಿಷ್ಟ ಜಾತಿ) ವಾಸಪ್ಪ ಹೆಚ್.ಆರ್, (ಪರಿಶಿಷ್ಟ ಪಂಗಡ) ಕರಿಯಪ್ಪ ನಾಯ್ಕ, (ಹಿಂದುಳಿದ ಪ್ರವರ್ಗ-ಎ ಮೀಸಲು) ಮಹೇಶ್ ಪಾಡಿಯಮ್ಮನ, (ಹಿಂದುಳಿದ ಪ್ರವರ್ಗ-ಬಿ) ಮೀಸಲು ಬೀನಾ ಬೊಳ್ಳಮ್ಮ ಅಲ್ಲಾರಂಡ, (ಮಹಿಳಾ ಕ್ಷೇತ್ರ - ೨) ಸುಶೀಲ ಕೂರನ ಹಾಗೂ ಹೇಮಲತ ಮಂಡೀರ ಅವಿರೋಧವಾಗಿ ಆಯ್ಕೆಯಾದರು.
೧೫ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿರುವುದರಿಂದ ತಾ.೧೨ರಂದು ನಡೆಯಬೇಕಿದ್ದ ಚುನಾವಣಾ ಪ್ರಕ್ರಿಯೆ ನಡೆಯುವುದಿಲ್ಲ.