ಮಡಿಕೇರಿ, ಜ. ೧೦: ನಗರದ ಎಸ್.ಆರ್.ವಿ. ವತಿಯಿಂದ ೨ನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾಟ ತಾ. ೧೦ ಹಾಗೂ ೧೧ ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಮಡಿಕೇರಿ ನಗರದ ಕ್ರೀಡಾಪಟು ಗಳಿರುವ ೧೨ ಮಂದಿ ಮಾಲೀಕತ್ವದ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.

ವಿಜೇತ ತಂಡಕ್ಕೆ ರೂ. ೩೫ ಸಾವಿರ ನಗದು, ರನ್ನರ್ಸ್ ತಂಡಕ್ಕೆ ರೂ. ೨೫ ಸಾವಿರ ನಗದು, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧೦ ಸಾವಿರ ನಗದು ಸೇರಿದಂತೆ ಆಕರ್ಷಕ ಟ್ರೋಫಿ ನೀಡಲಾಗುವುದು.

ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಗೋವಿಂದರಾಜು ವಿಸ್ಮಯಿ ಚಕ್ರವರ್ತಿ, ರಾಜೇಶ್ವರಿ ವಿದ್ಯಾಲಯ ಉಪಾಧ್ಯಕ್ಷೆ ದಾಕ್ಷಯಿನಿ ವಾಸುದೇವ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.