ಮಡಿಕೇರಿ, ಜ.೧೦ : ರಾಜ್ಯ ಮತ್ತು ಬಹುಸಂಖ್ಯಾತ ಸಮುದಾಯಗಳು ಕೊಡವರಂತಹ ಆದಿಮಸಂಜಾತ ಸಮುದಾಯಗಳ ಅನನ್ಯ ಅಸ್ಮಿತೆ ಸಾಂಸ್ಕöÈತಿಕ, ಭಾಷಿಕ, ಸಾಂಪ್ರದಾಯಿಕ ಹಕ್ಕುಗಳನ್ನು ಗುರುತಿಸಬೇಕು ಮತ್ತು ರಕ್ಷಿಸಬೇಕು. ಸಂವಿಧಾನೇತರ ಶಕ್ತಿಗಳಾದ ದರ್ಶಕರು ಹಾಗೂ ಮಠಾಧೀಶರು ಸರಕಾರಿ ವ್ಯವಹಾರಗಳಲ್ಲಿ ಅಥವಾ ಕೊಡವರ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಂವಿಧಾನಿಕ ಆಡಳಿತವನ್ನು ಎತ್ತಿಹಿಡಿಯುವ ಮತ್ತು ಆದಿಮಸಂಜಾತ ಕೊಡವ ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಸಿಎನ್‌ಸಿ ಒತ್ತಿ ಹೇಳುತ್ತದೆ ಎಂದು ಹೇಳಿದ್ದಾರೆ.
ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂವಿಧಾನೇತರ ಶಕ್ತಿಗಳಾದ ದರ್ಶಕರು ಹಾಗೂ ಮಠಾಧೀಶರು ಸರಕಾರಿ ವ್ಯವಹಾರದÀಲ್ಲಿ ಹಸ್ತಕ್ಷೇಪ ಮಾಡಬಾರದು. ಕೊಡವರಂತಹ ಆದಿಮಸಂಜಾತ ಸಮುದಾಯಗಳು ಸೇರಿದಂತೆ ಎಲ್ಲಾ ನಾಗರಿಕರ ಸುರಕ್ಷತೆ, ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವುದು ರಾಜ್ಯದ ಕರ್ತವ್ಯವಾಗಿದೆ. ಬಹುಸಂಖ್ಯಾತ ಸಮುದಾಯಗಳು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು, ಸ್ವಾಭಿಮಾನ ಮತ್ತು ಗುರುತನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಬಹುಸಂಖ್ಯಾತರ ಜನಸಂಖ್ಯಾ ತೂಕದ ಮೂಲಕ ಬೆದರಿಕೆ ಅಥವಾ ಪ್ರಾಬಲ್ಯ ಹೇರುವುದನ್ನು ತಪ್ಪಿಸಬೇಕು.
ಸಂವಿಧಾನದ ವಿಧಿ ೧೪ರಂತೆ ಕಾನೂನಿನ ಮುಂದೆ ಸಮಾನತೆ, ವಿಧಿ ೧೫ ರಂತೆ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಬೇಕು. ಅನುಚ್ಛೇದ ೧೯ರಡಿ ವಾಕ್, ಸಭೆ ಮತ್ತು ಸಂಘಟನಾ ಸ್ವಾತಂತ್ರö್ಯದ ಬಗ್ಗೆ ಕೆಲವು ಹಕ್ಕುಗಳ ರಕ್ಷಣೆಯಾಗಬೇಕು. ವಿಧಿ ೨೧ ರಡಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ÷್ಯದ ರಕ್ಷಣೆಯಾಗಬೇಕು. ವಿಧಿ ೩೭೧ ರಡಿ ಕೊಡವ ಜನಾಂಗವಿರುವ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ವಿಶೇಷ ನಿಬಂಧನೆಗಳು ಅನ್ವಯವಾಗಬೇಕು ಎಂದು ತಿಳಿಸಿದ್ದಾರೆ.
ಆದಿಮಸಂಜಾತ ಜನರ ಹಕ್ಕುಗಳ ಕುರಿತು ಯುಎನ್‌ಒ ವಿಶ್ವರಾಷ್ಟç ಸಂಸ್ಥೆ ಘೋಷಣೆಯಡಿ (UಓಆಖIP) ಸ್ವ-ನಿರ್ಣಯ, ಸಾಂಸ್ಕöÈತಿಕ ಸಂರಕ್ಷಣೆ ಮತ್ತು ಅವರ ಭೂಮಿ ಮತ್ತು ಸಂಪನ್ಮೂಲಗಳ ರಕ್ಷಣೆಗೆ ಆದಿಮಸಂಜಾತ ಜನರ ಹಕ್ಕುಗಳನ್ನು ಗುರುತಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.