ಶನಿವಾರಸಂತೆ, ಜ. ೧೦ : ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ೮೧ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ತಾ. ೨೨ ರಿಂದ ಫೆ. ೫ರವರೆಗೆ ನಡೆಯಲಿದೆ. ತಾ. ೨೮ ರಿಂದ ಫೆ. ೫ ರವರೆಗೆ ಪ್ರತಿ ದಿನ ಸಂಜೆ ೬ ಗಂಟೆಯಿAದ ಶಾಲಾ-ಕಾಲೇಜು ಮಕ್ಕಳಿಗೆ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ, ಅಂತರ ಜಿಲ್ಲಾ ವಾಲಿಬಾಲ್ ಮತ್ತು ಥ್ರೋಬಾಲ್, ನಗೆನಾಟಕ, ರಸಮಂಜರಿ ಕಾರ್ಯಕ್ರಮ, ಜಾನಪದ ಜಾತ್ರೆ, ವಸ್ತು ಪ್ರದರ್ಶನ, ಉತ್ತಮ ರಾಸುಗಳಿಗೆ ಬಹುಮಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.