ಚೆಯ್ಯಂಡಾಣೆ, ಜ. ೧೦: ಕೂರ್ಗ್ ಜಂಇಯ್ಯತುಲ್ ಉಲಮಾ ಇದರ ೫೦ನೇ ವರ್ಷಾಚರಣೆಯ ಗೋಲ್ಡನ್ ಜುಬ್ಲಿ ಮಹಾ ಸಮ್ಮೇಳನ ತಾ ೧೨ ರಂದು ಎಮ್ಮೆಮಾಡುವಿನಲ್ಲಿ ನಡೆಯಲಿದೆ ಎಂದು ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೂರ್ಗ್ ಜಂಇಯ್ಯತುಲ್ ಉಲಮ ಸಂಘಟನೆಯು ಜಿಲ್ಲೆಯ ಜನತೆಯ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಾಂತ್ವನ ಸಾಮಾಜಿಕ ರಂಗದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇದರ ೫೦ನೇ ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆಯ ಮೂಲಕ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜ.೧೨ರ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಇತಿಹಾಸ ಪ್ರಸಿದ್ಧ ಎಮ್ಮೆ ಮಾಡುವಿನ ಸೂಫಿ ಶಹೀದ್ ದರ್ಗಾದಲ್ಲಿ ಸಯ್ಯದ್ ಅಬ್ದುಲ್ ಅಜೀಝ್ ತಂಙಳ್ ಪ್ರಾರ್ಥನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ೮.೩೦ಗಂಟೆಗೆ ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ೧೦ ಗಂಟೆಗೆ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ನಡೆಯುವ ಉಲಮಾ ಸಂಗಮಕ್ಕೆ ಅಬ್ದುಲ್ ಜಲೀಲ್ ಸಖಾಫಿ ಚೇರುಶೋಲ ನೇತೃತ್ವ ನೀಡಲಿದ್ದಾರೆ ಎಂದರು. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ ಮಾತನಾಡಿ, ಮಧ್ಯಾಹ್ನ ೨ ಗಂಟೆಗೆ ಮಾಳಿಯೇಕಲ್ ಸುಲೈಮಾನ್ ಸಖಾಫಿ ನೇತೃತ್ವದಲ್ಲಿ ವಿದ್ಯಾರ್ಥಿ ಸಂಗಮ ಹಾಗೂ ಯೂತ್ ಕಾನ್ಫರೆನ್ಸ್ ಸಮಾವೇಶ ನಡೆಯಲಿದ್ದು ಪ್ರಸ್ತುತ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂತರ್ ಗೌಡ ಭಾಗವಹಿಸಲಿದ್ದಾರೆ.

ಸಂಜೆ ೪ಗಂಟೆಗೆ ನಡೆಯಲಿರುವ ಮೊಹಲ್ಲಾ ಸಂಗಮ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರA ನೇತೃತ್ವ ವಹಿಸಲಿದ್ದು, ಖ್ಯಾತ ಚಿಂತಕರಾದ ಡಾ.ಎ.ಪಿ. ಅಬ್ದುಲ್ ಹಕೀಂ ಹಝ್ಹರಿ ಹಾಗೂ ಖ್ಯಾತ ನ್ಯಾಯವಾದಿ ಹುಸೇನ್ ಸಖಾಫಿ ಚುಳ್ಳಿಕೋಡ್ ಅವರ ನೇತೃತ್ವದಲ್ಲಿ ಉಪನ್ಯಾಸ ನಡೆಯಲಿದೆ ಎಂದರು.

ಸAಜೆ ೫ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಮಿನುಷರಿಯ ಸಯ್ಯದ್ ಅಲ್ ಬಾಫಕಿ ತಂಙಳ್, ರಹಿಸುಲ್ ಉಲಮಾ ಶೈಖುನಾ ಸುಲೈಮಾನ್ ಮುಸ್ಲಿಯಾರ್, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯರ್ ಕಾಂತಪುರA, ಕೂರತ್ತುಸಾದಾತ್ ಸಯ್ಯದ್ ಕೆ. ಎಸ್. ಆಟಕೊಯ ತಂಙಳ್ , ಬದ್ರುಸಾದಾತ್ ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್, ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ, ಸಯ್ಯದ್ ಶಿಹಾಬುದ್ದೀನ್ ಆಲ್ ಐದರೂಸಿ ತಂಙಳ್, ಸಯ್ಯದ್ ಇಲ್ಯಾಸ್ ತಂಙಳ್, ಮೊಹಿಯ್ಯದ್ದೀನ್ ಕಾಮಿಲ್ ಸಖಾಫಿ ತೊಕೆ, ಅಬ್ದುಲ್ ರೆಹಮಾನ್ ಮದನಿ ಜೆಪ್ಪು, ಅಬ್ದುಲ್ ರಶೀದ್ ಝೃನಿ ಕಾಮಿಲ್ ಸಖಾಫಿ ಮತ್ತಿತರ ಉಲಮಾ ಉಮಾರ ಸಾಮಾಜಿಕ ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್, ಕೂರ್ಗ್ ಜಂಇಯ್ಯತುಲ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್, ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಉಪಸ್ಥಿತರಿದ್ದರು.